ಕುಂದಾಪುರ: ಡ್ರೀಮ್ ಪೈನಾನ್ಸ್ ಕೂಡಾಲು ಅಜೇಂದ್ರ ಶೆಟ್ಟಿ (33) ಅವರು ಕಾಳಾವರ ಗ್ರಾಮದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದ್ದಾರೆ.


ಕಳೆದ ಹಲವಾರು ವರ್ಷಗಳಿಂದ
ಕಾಳಾವರದ ಅಸೋಡಿನ ನಂದಿಕೇಶ್ವರ ಕಾಂಪ್ಲೆಕ್ಸ್’ನಲ್ಲಿ ಡ್ರೀಮ್ ಫೈನಾನ್ಸ್ ಹೆಸರಲ್ಲಿ ಹಣಕಾಸಿನ ವ್ಯವಹಾರ
ನಡೆಸುತ್ತಿದ್ದರು ಎನ್ನಾಲಾಗಿದೆ. ಶುಕ್ರವಾರ ರಾತ್ರಿ ಅಜೇಂದ್ರ ತಡರಾತ್ರಿಯವರೆಗೂ ಮನೆಗೆ ಮರಳದಿದ್ದಾಗ
ಹುಡುಕಾಟ ನಡೆಸಿದಾಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಕರಣವು ಕಂಡ್ಲೂರು
ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.