ಬಂಟ್ಸ್ ನ್ಯೂಸ್, ಕುಂದಾಪುರ: ನಾನು ಬಂಟ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ, ಬಂಟ ಸಮುದಾಯಕ್ಕೆ ಸೇರಿದವನೆಂಬ ಕಾರಣಕ್ಕೆ ಮಂತ್ರಿಯಾಗಲು ಬಯಸುವುದಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕನ್ನಡ ಸುದ್ದಿವಾಹಿನಿ
ಸುವರ್ಣ ನ್ಯೂಸ್ ಜತೆ ಮಾತನಾಡಿ ಇದುವರೆಗೆ ಪಕ್ಷವು ಮಂತ್ರಿಗಿರಿ ನೀಡದಿರುವ ಬಗ್ಗೆ ತಮ್ಮ ನಿಲುವನ್ನು
ತಿಳಿಸಿದ್ದಾರೆ. 5 ಬಾರಿ ಶಾಸಕರಾದರೂ ಮಂತ್ರಿಗಿರಿಗಾಗಿ ಯಾವುದೇ ಲಾಬಿ ಮಾಡಿಲ್ಲ. ಜಾತಿಯ ಹೆಸರಿನಲ್ಲೂ
ರಾಜಕೀಯ ಮಾಡಿಲ್ಲ ಎಂದಿದ್ದಾರೆ.
ನನನ್ನು ಗೆಲ್ಲಿಸಲು ಎಲ್ಲಾ ಜಾತಿಯ, ಸಮುದಾಯದ ಜನರು ಮತ ಹಾಕಿದ್ದಾರೆ. ಎಲ್ಲಾ ಸಮುದಾಯದ ಏಳಿಗೆಗಾಗಿ ಮತ ನೀಡಿದ್ದಾರೆಯೇ ವಿನಃ ನನ್ನ ಜಾತಿಯ ಏಳಿಗಾಗಿ ಅಲ್ಲ. ಜಾತಿವಾದಿಗಳು ಸಚಿವರಾಗರಾರದು, ಅವರು ಅವರ ಜಾತಿಗೆ ಮಂತ್ರಿಯಾಗಿರಲೀ ಎಂದಿದ್ದಾರೆ.
ಮಂತ್ರಿಗಿರಿಯಾಗಿ
ಯಾವುದೇ ರೀತಿಯ ಕಸರತ್ತು ಮಾಡಲು ಸಿದ್ದರಿರುವವರ ನಡುವೆ ಒರ್ವ ಜನಪ್ರತಿನಿಧಿಯಾಗಿ ಯಾವ ರೀತಿ ಇರಬೇಕು
ಎಂಬುದಕ್ಕೆ ಹಾಲಾಡಿ ಈ ಮೂಲಕ ಆದರ್ಶರಾಗಿದ್ದಾರೆ.