ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ವೆನ್ಲಾಕ್ ರೋಗಿಗಳ ಜೊತೆಗಾರರಿಗೆ ಊಟದ ವ್ಯವಸ್ಥೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ವೆನ್ಲಾಕ್ ರೋಗಿಗಳ ಜೊತೆಗಾರರಿಗೆ ಊಟದ ವ್ಯವಸ್ಥೆ

Share This

ಸಾಮಾನ್ಯ ಜನರ ಕಣ್ಣೀರು ಒರೆಸುವ ಸೇವೆ ದೇವರು ನಮ್ಮಿಂದ ನಡೆಸುತ್ತಿದ್ದಾರೆ : ಐಕಳ ಹರೀಶ್ ಶೆಟ್ಟಿ

ಬಂಟ್ಸ್ ನ್ಯೂಸ್, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಾರರು ರಾತ್ರಿ ಹೊತ್ತು ಊಟಕ್ಕೆ ಕಷ್ಟಪಡುವ ಸ್ಥಿತಿಯನ್ನು ಕಂಡು ಪ್ರತಿವರ್ಷ ಒಂದು ತಿಂಗಳ ಊಟವನ್ನು ನೀಡುವ ಯೋಜನೆಯನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಒಕ್ಕೂಟದ ವತಿಯಿಂದ ಆರಂಭಿಸಿದರು.

ಒಂದು ಹೊತ್ತಿನ ಹಸಿವೆ ನೀಗಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಂಡಾಗ ಜನರ ಕಷ್ಟ ನಮಗೆ ಅರಿವಾಗುತ್ತದೆ  ಇದು ನಾವು ಮಾಡುವುದಲ್ಲ ನಮ್ಮಲ್ಲಿ ದೇವರು ಮಾಡಿಸುವುದು   ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.


ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಒಕ್ಕೂಟದ ವತಿಯಿಂದ   ಆಸ್ಪತ್ರೆಯ ರೋಗಿಗಳನ್ನು ನೋಡಿಕೊಳ್ಳುವ ಅವರ ಕುಟುಂಬದವರಿಗೆ ಅನ್ನ ನೀಡುವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮವನ್ನು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರಾದ  ದಿವಾಕರ್ ಅವರು ಫಲಾನುಭವಿಗಳಿಗೆ ಊಟವನ್ನು ಬಡಿಸುವ ಮೂಲಕ ಸಾಂಕೇತಿಕ ಚಾಲನೆ ನೀಡಿದರು.


ಮುಂದಿನ ಒಂದು ತಿಂಗಳು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಒಕ್ಕೂಟದ ಉಪಾಧ್ಯಕ್ಷರಾದ  ಕರ್ನಿರೆ ವಿಶ್ವನಾಥ ಶೆಟ್ಟಿಯವರು ತಿಳಿಸಿದರು. ಸಂದರ್ಭ ಒಕ್ಕೂಟದ ಕಾರ್ಯದರ್ಶಿಯವರಾದ  ಇಂದ್ರಾಳಿ ಜಯಕರ ಶೆಟ್ಟಿ ಅವರು  ಮತ್ತು ಒಕ್ಕೂಟದ ಸದಸ್ಯರು ಮತ್ತು ಎಂ ಫ್ರೆಂಡ್ಸ್. ತಂಡದ ಸದಸ್ಯರು ಉಪಸ್ಥಿತರಿದ್ದರು.

Pages