ಈ ಉಚಿತ ಸೇವೆಗೆ ಚಾಲನೆಯಿತ್ತು
ಶುಭ ಹಾರೈಸಿದ ಸಂಸದರಾದ ಗೋಪಾಲ
ಶೆಟ್ಟಿಯವರು ಮಾತನಾಡುತ್ತಾ, ಎರ್ಮಾಳ್ ಹರೀಶ್ ಶೆಟ್ಟಿ,
ಮುಂಡಪ್ಪ ಎಸ್. ಪಯ್ಯಡೆ ಹಾಗೂ
ಇಲ್ಲಿರುವ ಎಲ್ಲಾ ಗಣ್ಯರು ಇಂತಹ
ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತಿ ಬೇಧ ಮರೆತು
ಉತ್ತಮ ಕೆಲಸ ಮಾಡುತ್ತಿರುವರು. ಆದರೆ
ಅತೀ ಅಗತ್ಯವಿರುವವರಿಗೆ ಮಾತ್ರ ಈ ಸೇವೆಯನ್ನು
ಒದಗಿಸಬೇಕು ಹೊರತು ಇಂತಹ ಸೇವೆ
ಮಾಡಲು ನಾವು ಹೆಚ್ಚು ಆತುರ
ಪಡುವುದು ಬೇಡ ಯಾಕೆಂದರೆ ಇನ್ನು
ಮೂರು ದಿನಗಳ ಲಾಕ್ ಡೌನ್
ಇದೆ ಅಲ್ಲದೆ ಊರಿಗೆ ತಲಪಿ
ಅಲ್ಲಿಯೂ 14 ದಿನಗಳ ಕಾಲ ಕ್ವಾರಂಟೈನ್
ನಲ್ಲಿರಬೇಕಾಗುತ್ತದೆ. ನಮ್ಮಿಂದ ಊರವರಿಗೂ ತೊಂದರೆಯಾಗದಿರಲಿ. ಮುಂಬಯಿಯಲ್ಲಿ
ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಆದುದರಿಂದ ಇಂತಹ ಸಂದರ್ಭದಲ್ಲಿ ಆಗುತ್ತಿರುವ
ಸಣ್ಣ ಮಟ್ಟದ ಅನಾನುಕೂಲತೆಯನ್ನು ಎಲ್ಲರೂ
ಎದುರಿಸಬೇಕಾಗುತ್ತದೆ. ಇಂದು
ನಾವೂ ದೇಶದ ಎಲ್ಲಿಗೂ ಹೋದರೂ
ಒಂದೇ ರೀತಿಯ ಕಷ್ಟವನ್ನು ಅನುಭವಿಸಬೇಕಾಗುತ್ತದೆ
ಎಂದರು.
ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ
ಐಕಳ ಹರೀಶ್ ಶೆಟ್ಟಿಯವರು ಮಾತನಾಡಿ
ಕಳೆದ ಎರಡು ತಿಂಗಳಿಂದ ಎರ್ಮಾಳ್
ಹರೀಶ್ ಶೆಟ್ಟಿಯವರು ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ
ಹಾಗೂ ರೇಶನ್ ನ ಸಹಾಯ
ಮಾಡಿದ್ದು ಇದೀಗ ಅತೀ ಅಗತ್ಯವಿರುವವರಿಗೆ
ಮೊನ್ನೆ ಬಸ್ಸಿನ ವ್ಯವಸ್ಥೆಯನ್ನು ಮಾಡಿ
ಊರಿಗೆ ಕಳುಹಿಸಿದ್ದಾರೆ. ಇಂದು
ಧರ್ಮಾರ್ಥ ಬಸ್ಸಿನ ವ್ಯವಸ್ಥೆಯನ್ನು ಇವರು
ಮಾಡಿರುವರು ಎನ್ನುತ್ತಾ ಬಿ.ಜೆ.ಪಿ.
ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಎರ್ಮಾಳ್ ಹರೀಶ್ ಶೆಟ್ಟಿಯವರಿಗೆ
ಅಭಿನಂದನೆ ಸಲ್ಲಿಸಿದರು.
ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮುಂಡಪ್ಪ ಎಸ್. ಪಯ್ಯಡೆಯವರು
ಊರಿಂದ ಮುಂಬಯಿಗೆ ಬಂದು ಹಿಂತಿರುಗಲು ಅಸಾದ್ಯವಾದವರಿಗೆ
ಮಾತ್ರವಲ್ಲದೆ ಬಸುರಿ ಮಹಿಳೆಯರಿಗೆ ಈ
ಉಚಿತ ಸೇವೆಯನ್ನು ನಾವು
ಮಾಡಿರುವರು. ಇದಕ್ಕೆ ನಮ್ಮ ಸಂಸದರಾದ
ಗೋಪಾಲ ಶೆಟ್ಟಿಯವರ ಸಹಕಾರವೂ ಇದೆ. ಕೇವಲ
ಉಚಿತ ಸೇವೆ ಮಾತ್ರವಲ್ಲದೆ ಅವರಿಗೆ
ಪ್ರಯಾಣದ ಸಮಯದಲ್ಲಿ ಬೇಕಾಗುವ ಆಹಾರವನ್ನೂ ಒದಗಿಸಲಾಗಿದೆ.
ನಮ್ಮ ಈ ಸೇವೆಗೆ ದೇವರ
ಆಶೀರ್ವಾದವಿರಲಿ ಎಂದರು.
ರವೀಂದ್ರ
ಶೆಟ್ಟಿಯವರು ಮಾತನಾಡುತ್ತಾ ಲಾಕ್ ಡೌನ್ ಗೆ
ಮೊದಲು ಕಾರಣಾಂತರದಿಂದ ಮುಂಬಯಿಗೆ ಮಂಗಳೂರು - ಉಡುಪಿಯಿಂದ ಆಗಮಿಸಿ ಇಲ್ಲಿ ಸಿಲುಕಿದ್ದು
ಅವರ ಕುಟುಂಬವು ಊರಲ್ಲಿದ್ದು ಅವರಿಗೆ ಸಹಕರಿಸುವುದು ನಮ್ಮ
ಕರ್ತವ್ಯ. ಈ ವ್ಯವಸ್ತೆಯನ್ನು ಮಂಗಳೂರಿಗೆ
ತಲಪುವ ತನಕ ಉಚಿತವಾಗಿ ಮಾಡಿರುವೆವು.
ಮಂಗಳೂರಲ್ಲಿಯೂ ಶಾಸಕ, ಸಂಸದರು ಹಾಗೂ
ಮಂತ್ರಿಗಳೊಂದಿಗೆ ಮಾತನಾಡಿ ನಾವು ಈ
ವ್ಯವಸ್ಥೆಯನ್ನು ಮಾಡಿದ್ದೇವೆ ಎಂದರು.
ಮೀರಾ -ಭಾಯಂದರ್ ಬಿಜೆಪಿ ಜಿಲ್ಲಾ
ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿಯವರು ಈ ಸೇವೆಯ ಬಗ್ಗೆ
ಮಾತನಾಡಿ ಕರ್ನಾಟಕ ಸರಕಾರವು ಇಲ್ಲಿ
ಸಿಲುಕಿದ ಕರ್ನಾಟಕದ ವಿದ್ಯಾರ್ಥಿಗಳನ್ನು ಹಾಗೂ ಇತರರನ್ನು ಊರಿಗೆ
ತರಿಸುವ ಅವಕಾಶ ಮಾಡಿದೆ. ಇದೀಗ
ವಿದ್ಯಾರ್ಥಿಗಳು ಹಾಗೂ ಹೋಟೇಲು ಕಾರ್ಮಿಕರು
ಹೆಚ್ಚಿನ ತೊಂದರೆಗೀಡಾಗಿದ್ದು ಎರ್ಮಾಳ್ ಹರೀಶ್ ಶೆಟ್ಟಿಯವರ
ನೇತ್ರತ್ವದಲ್ಲಿ, ಗೋಪಾಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ
ಈ ಕಾರ್ಯವು ನಡೆಯುತ್ತಿರುವುದು
ಅಭಿನಂದನೀಯ. ಆದಷ್ಟು ಬೇಗನೆ ಮಂಗಳೂರಿಗೆ
ರೈಲು ಸೇವೆ ಆರಂಬಿಸಿ ಹೋಟೇಲು
ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದು ಕರ್ನಾಟಕ ಸರಕಾರದಲ್ಲಿ
ನಮ್ಮ ಕೋರಿಕೆ ಎಂದರು.
ಈ ಬಸ್ಸಲ್ಲಿ ಪ್ರಯಾಣಿಸುತ್ತಿರುವ ಶಿವರಾಜ್ ಎಂಬವರು ಮೀರಾರೋಡ್
ಹೋಟೇಲಿನಲ್ಲಿ ದುಡಿಯುತ್ತಿದ್ದು ಲಾಕ್ ಡೌನ್ ನಿಂದಾಗಿ
ಬಹಳ ತೊಂದರೆಗೀಡಾಗಿದ್ದು ತನ್ನ ಕಷ್ಟವನ್ನು ಮಾಧ್ಯಮದವರಿಗೆ
ತಿಳಿಸುತ್ತಾ ಮಂಗಳೂರಿಗೆ ಪ್ರಯಾಣಿಸುತ್ತಿರುವೆನು ಎಂದರು. ಸಹನಾ ಎಂಬ
ಮಹಿಳೆಯು ಕೇವಲ ಎರಡು ತಿಂಗಳ
ಹಿಂದೆಯಷ್ಟೇ ಕೆಲಸ ನಿಮಿತ್ತ ಮುಂಬಯಿಗೆ
ಬಂದಿದ್ದು ಇಲ್ಲಿ ಪಿಜಿ ಯಲ್ಲಿ
ವಾಸಿಸುತ್ತಿದ್ದು ಊರಿಗೆ ಹಿಂತಿರುಗಬೇಕಾದ ಅತೀ
ಅಗತ್ಯವಿದೆ ಎಂದರು. ಉದ್ಯಮಿ
ಮಂಜುನಾಥ ಬನ್ನೂರು, ಪ್ರಕಾಶ್ ಶೆಟ್ಟಿ ಎಲ್.ಐ. ಸಿ., ಕಾರ್ಥಿಕ್
ಹರೀಶ್ ಶೆಟ್ಟಿ, ನೀಲೇಶ್ ಶೆಟ್ಟಿ,
ಮಹೇಶ್ ಶೆಟ್ಟಿ, ಪ್ರೇಮನಾಥ ಕೋಟ್ಯಾನ್,
ರಜಿತ್ ಸುವರ್ಣ, ಸಂಕೇಶ್ ಶೆಟ್ಟಿ
ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾಜ ಸೇವಕ - ಉತ್ತರ ಮುಂಬಯಿ
ಬಿ.ಜೆ.ಪಿ. ಉಪಾಧ್ಯಕ್ಷ
ಎರ್ಮಾಳ್ ಹರೀಶ್ ಶೆಟ್ಟಿ ಮಾತನಾಡಿ, ಲಾಕ್ ಡೌನ್ ನ
ಕೆಲವೇ ದಿನದಲ್ಲಿ ಮಾರ್ಚ್ 27 ರಿಂದ ಇಂದಿನ ತನಕ
ಸುಮಾರು 9 ಲಕ್ಷ ಜನರಿಗೆ ಊಟದ
ವ್ಯವಸ್ಥೆಯನ್ನು ಮಾಡಿದ್ದು ಇದೀಗ ಕಳೆದ ಕೆಲವು
ದಿನಗಳಿಂದ ನನಗೆ ನೂರಾರು ತುಳು
ಕನ್ನಡಿಗರಿಂದ ಪೋನ್ ಕರೆಗಳು ಬರುತ್ತಿದ್ದು
ಕೇವಲ ಅತೀ ಅಗತ್ಯವಿರುವವರಿಗೆ ಮಾತ್ರ
ಈ ಉಚಿತ ಸೇವೆಯನ್ನು
ಒದಗಿಸಿರುವೆನು. ಇದು ಉಚಿತ ಸೇವೆ
ಎಂದು ಮೊದಲು ತಿಳಿಸಲಿಲ್ಲ. ಒಂದು
ವೇಳೆ ತಿಳಿಸಿದಲ್ಲಿ ಇದನ್ನು ಹತೋಟಿಗೆ ತರಲು
ಕಷ್ಟವಾಗುತಿತ್ತು. ಈ ಬಸ್ಸಲ್ಲಿ 30 ಸೀಟುಗಳನ್ನು
ಹೊಂದಿದ್ದು ಸಮಾಜಿಕ ಅಂತರವನ್ನು ಕಾಪಾಡಲು
ಕೇವಲ 15 ಮಂದಿ ಮಾತ್ರ ಪ್ರಯಾಣಿಸುತ್ತಿರುವರು
ಇದರಲ್ಲಿ 9 ಮಂದಿ ಜೈನ್ ಕುಟುಂಬದವರು.
ಒಬ್ಬರು ಮಹಿಳೆ ದಾದಿ (ಹೆರಿಗೆಯಾದ
ಮಗುವಿನ ಹಾರೈಕೆ ಮಾಡಲು ಮುಂಬಯಿಗೆ
ಬಂದವರು), ಇಬ್ಬರು ಮುಂಬಯಿ
ನೋಡಲು ಬಂದ ನೂತನ ದಂಪತಿಗಳು,
ಇವರೆಲ್ಲರ ಮೆಡಿಕಲ್ ಆಗಿದೆ. ಎಲ್ಲರಿಗೂ
ಈ ಪಾಸ್ ಸಿಕ್ಕಿದೆ.
ನನಗೆ ಸಿಕ್ಕಿದ ನೂರಾರು ಹೆಸರುಗಳಲ್ಲಿ
ಅತೀ ಅಗತ್ಯವಿರುವವರಿಗೆ ಈ ಉಚಿತ ಸೇವೆಯನ್ನು
ಮಾಡಲಾಗಿದೆ. ಇದಲ್ಲದೆ
ಸಮಾಜಿಕ ತಾಣಗಳಲ್ಲಿ ವಿಡಿಯೋ, ಆಡಿಯೋ ಮೂಲಕ
ಕೆಲವರು ತಪ್ಪು ಮಾಹಿತಿಯನ್ನು ಜನರಿಗೆ
ಕಳುಹಿಸುತ್ತಿದ್ದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ
ಜನರು ಅದನ್ನು ಕಡೆಗಣಿಸಬೇಕು ಅಲ್ಲದೆ
ಅಂತಹ ಮಾಹಿತಿಯನ್ನು ಸಮಾಜಿಕ ತಾಣಗಳಲ್ಲಿ ಕಳುಹಿಸುದು
ಹಾಗೂ ಪಾರ್ವರ್ಡ ಮಾಡುವುದನ್ನು ನಿಲ್ಲಿಸಬೇಕೆಂದರು.(ವರದಿ-ಫೋಟೊ:
ಈಶ್ವರ ಐಲ್, ದಿನೇಶ್ ಕುಲಾಲ್)