BUNTS NEWS, ಮಂಗಳೂರು: ಕರ್ನಾಟಕ ಜಾನಪದ ಪರಿಷತ್
ಕೇರಳ ಗಡಿನಾಡ ಘಟಕ ಮತ್ತು
ತುಳುವಲ್ಡ್ ಮಂಗಳೂರು ಇದರ ಜಂಟಿ
ಆಶ್ರಯದಲ್ಲಿ ಪೈವಳಿಕೆ ಕಾಯರ್ಕಟ್ಟೆ ಕುಲಾಲ
ಮಂದಿರದಲ್ಲಿ ಆಯೋಜಿಸಲಾಗಿದ್ದ ಗಡಿನಾಡ ಜಾನಪದ ಮೇಳ
ಮತ್ತು ತುಳು ಕಾವ್ಯಯಾನ
ಕಾರ್ಯಕ್ರಮದಲ್ಲಿ ಕತಾರ್ ಬಂಟರ ಸಂಘದ
ಮಾಜೀ ಅಧ್ಯಕ್ಷ ಉದ್ಯಮಿ ಡಾ.
ರವಿ ಶೆಟ್ಟಿ ಮೂಡಂಬೈಲು ಅವರಿಗೆ
ಕರ್ನಾಟಕ ಸರಕಾರದ ಮುಜರಾಯಿ ಮತ್ತು
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ
ಪೂಜಾರಿ ಅವರು ಗಡಿನಾಡ ಸಿರಿ
ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ
ಸ್ವೀಕರಿಸಿ ಮಾತನಾಡಿದ ಡಾ. ರವಿ ಶೆಟ್ಟಿ
ಮೂಡಂಬೈಲ್ ಅವರು, ನಾಡು- ನುಡಿಯ
ಪರಂಪರೆಯನ್ನು ಸಾರುವ ಜಾನಪದ ಸೊಗಡಿನ
ಜಾನಪದ ಮೇಳ ಯಶಸ್ವಿಯಾಗಲಿ, ಇಂತಹ
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಡಿನ ಜನರ ಬೆಂಬಲವೂ
ದೊರೆಯಲಿ ಎಂದು
ಶುಭ ಹಾರೈಸಿದರು.
ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್, ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಸಾಪದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಅರಮನೆಯ ರಂಗತ್ತೈ ಬಲ್ಲಾಳ ಅರಸರು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ. ಎಲ್, ಡಾ ರಾಜೇಶ್ ಆಳ್ವ ಬದಿಯಡ್ಕ, ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿದ್ದರು.