ಮಿ. ಟೀನ್ ಇಂಡಿಯಾ 2019 ವಿಜೇತ ಮಂಗಳೂರು ಮೂಲದ ಸಾಹಿಲ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಿ. ಟೀನ್ ಇಂಡಿಯಾ 2019 ವಿಜೇತ ಮಂಗಳೂರು ಮೂಲದ ಸಾಹಿಲ್ ಶೆಟ್ಟಿ

Share This
BUNTS NEWS, ಮಂಗಳೂರು: ಮಂಗಳೂರು ಮೂಲದ ಸಾಹಿಲ್ ಶೆಟ್ಟಿ ಅವರು ಹೊಸದಿಲ್ಲಿಯ ಪಾಲ್ಮ್ ಗ್ರೀನ್ ಹೋಟೆಲ್ ಆ್ಯಂಡ್ ರೆಸಾರ್ಟ್ನಲ್ಲಿ ಜರಗಿದ ಮಿ. ಟೀನ್ ಇಂಡಿಯಾ 2019 ಸ್ಪರ್ಧೆಯಲ್ಲಿ ವಿಜೇತರಾಗುವ ಮೂಲಕ ಕರಾವಳಿಯವರು ಮತ್ತು ಕತಾರ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ 105 ಮಂದಿಯನ್ನು ಹಿಂದಿಕ್ಕಿ ಇವರು ಪ್ರಶಸ್ತಿ ಗೆದ್ದಿದ್ದು, ಮೂಲಕ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತೊಡಿಸಿಕೊಂಡಿದ್ದಾರೆ. ಜತೆಗೆ ಇತ್ತೀಚೆಗೆ ಪೂನಾದಲ್ಲಿ ಜರಗಿದ್ದ ಟಾಪ್ ಮಾಡೆಲ್ ಸ್ಪರ್ಧೆಯನ್ನೂ ಅವರು  ಗೆದ್ದಿದ್ದಾರೆ.

ಇವರು ದೀರ್ಘಕಾಲದಿಂದ ಕತಾರ್ನಲ್ಲಿ ನೆಲೆಸಿರುವ ಅತ್ರಬೈಲ್ ಸುಧಾಕರ ಶೆಟ್ಟಿ ಮತ್ತು ಪ್ರಾರ್ಥನಾ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಸುಧಾಕರ ಶೆಟ್ಟಿ ಅವರು ಕತಾರ್ ತುಳುಕೂಟ ಮತ್ತು ಬಂಟರ ಸಂಘದ ಸ್ಥಾಪಕ ಸದಸ್ಯರೂ ಆಗಿದ್ದಾರೆ.

Pages