ಕಟೀಲು ಬ್ರಹ್ಮಕಲಶೋತ್ಸವ: ಧಾರ್ಮಿಕ ಕಾರ್ಯಕ್ರಮದ ವಿವರಗಳು - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಟೀಲು ಬ್ರಹ್ಮಕಲಶೋತ್ಸವ: ಧಾರ್ಮಿಕ ಕಾರ್ಯಕ್ರಮದ ವಿವರಗಳು

Share This
BUNTS NEWS, ಮಂಗಳೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ಬ್ರಹ್ಮಕಲಶೋತ್ಸವವು ಜ.22ರಿಂದ ಫೆ.3ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ. ಈ ಸಂದರ್ಭ ನಿತ್ಯ ನಡೆಯುವ ಧಾರ್ಮಿಕ ಕಾರ್ಯಕ್ರಮದ ವಿವರ ಹೀಗಿದೆ.
ಜ.22, ಬುಧವಾರ: ಪ್ರಾತಃ 8-00ರಿಂದ ಋತ್ವಿಜರ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹವಾಚನ, ವೈದಿಕ ಉಗ್ರಾಣ ಮುಹೂರ್ತ, ನಾಂದೀ, ಋತ್ವಿಗ್ವರಣ, ಅರಣಿಮಥನ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಅಥರ್ವಶೀರ್ಷಗಣಯಾಗ, ಪುರಾಣಾದಿಗಳ ಪಾರಾಯಣ ಪ್ರಾರಂಭ, ಧ್ವಜವಾಹನ ಅಗ್ನ್ಯುತ್ತಾರಣೆ. ಸಾಯಂ 5-00ರಿಂದ ಪುಣ್ಯಾಹವಾಚನ, ಸಪ್ತಶುದ್ಧಿ, ಗೋಪೂಜೆ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಅಸ್ತ್ರಕಲಶ ಸ್ಥಾಪನೆ. ಭ್ರಾಮರೀವನದಲ್ಲಿ ಪ್ರಾತಃ ತೋರಣಮಹೂರ್ತ, ವಾಸ್ತುಪೂಜೆ, ವಾಸ್ತು ಹೋಮ, ವಾಸ್ತುಬಲಿ, ಮಂಟಪ ಸಂಸ್ಕಾರ, ಸಪ್ತಶುದ್ಧಿ, ಕೋಟಿಜಪಯಜ್ಞ

ಜ.23, ಗುರುವಾರ: ಪ್ರಾತಃ 5-00ರಿಂದ ಚತುಃಶುದ್ಧಿ, ಧಾರಾಶುದ್ಧಿ ಋಗ್ವೇದ ಪಾರಾಯಣ, ನವಗ್ರಹಯಾಗ, ಮಹಾಮೃತ್ಯುಂಜಯಯಾಗ, ವಿಷ್ಣುಯಾಗ, ತ್ರಿಷ್ಟುಪ್ ಮಂತ್ರಹೋಮ, ದಗ್ಧಶಾಂತಿ, ಶಾಂತ್ಯಂಬು ಅವಸ್ರುತ ಅಸ್ತ್ರಪೂಜೆ, ಹೊರೆಕಾಣಿಕೆ ಬಂದು ದೊಡ್ಡ ಉಗ್ರಾಣಮುಹೂರ್ತ. ಬೆಳಿಗ್ಗೆ ಭ್ರಾಮರೀ ವನದಲ್ಲಿ ಸಪ್ತಶತೀಪಾರಾಯಣ ಆರಂಭ, ಕೋಟಿಜಪಯಜ್ಞ, ಸಹಸ್ರಚಂಡಿಕಾಯಾಗಾಂಗ, ಗಣಯಾಗ, ಮೃತ್ಯುಂಜಯ ಯಾಗ. ಸಾಯಂ 5-00ರಿಂದ ದುರ್ಗಾನಮಸ್ಕಾರಪೂಜೆ, ಧ್ವಜವಾಹನಾಧಿವಾಸ, ಧ್ವಜವಾಹನತತ್ವಹೋಮ, ಅಂಕುರಾರೋಪಣ, ದುರ್ಗಾಪೆÇ್ರೀಕ್ತ ಪ್ರಾಯಶ್ಚಿತ್ತಗಳು, ಹೊರಗಿನ ನಾಗಸನ್ನಿಧಿಯಲ್ಲಿ ವಾಸ್ತುಪೂಜೆ ಇತ್ಯಾದಿ

ಜ.24, ಶುಕ್ರವಾರ: ಪ್ರಾತಃ 5-00 ರಿಂದ ನೂತನ ಸುವರ್ಣಧ್ವಜಪ್ರತಿಷ್ಠೆ, ಧ್ವಜಕಲಶಾಭಿಷೇಕ, ಧ್ವಜಾರೋಹಣ, ಭಾಗ್ಯೈಕಮತ್ಯ ಹೋಮ, ಲಕ್ಷ್ಮೀಸಹಸ್ರನಾಮ ಹೋಮ, ಭ್ರಾಮರೀವನದಲ್ಲಿ ಬಿಂಬಶುದ್ಧಿ, ಹೊರಗಿನ ನಾಗ ಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾಬಲಿ. ಬೆಳಿಗ್ಗೆ ಭ್ರಾಮರೀವನದಲ್ಲಿ ನವಗ್ರಹ ಸ್ಥಾಪನೆ, ಸೂರ್ಯಯಾಗ, ಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00ರಿಂದ ಅದ್ಭುತಶಾಂತಿ, ಉತ್ಸವ ಬಲಿ, ಚಾಮುಂಡೀ ಸನ್ನಿಧಿಯಲ್ಲಿ ವಾಸ್ತುಪೂಜೆ ಇತ್ಯಾದಿ, ಕಲಶಾಭಿಷೇಕ, ಬ್ರಹ್ಮರಸನ್ನಿಧಿಯಲ್ಲಿ ವಾಸ್ತುಪೂಜೆ ಇತ್ಯಾದಿ, ಭ್ರಾಮರೀವನದಲ್ಲಿ ಆಶ್ಲೇಷಾಬಲಿ, ನಾಗ ಮತ್ತು ವ್ಯಾಘ್ರಚಾಮುಂಡೀ ಕಲಶಾಭಿಷೇಕ, ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ

ಜ.25, ಶನಿವಾರ: ಪ್ರಾತಃ 5-00ರಿಂದ ಧಾರಾಶುದ್ಧಿ - ಯಜುರ್ವೇದ ಪಾರಾಯಣ, ಅಂಭೃಣೀಸೂಕ್ತ ಹೋಮ, ಲಕ್ಷ್ಮೀಹೃದಯ ಹೋಮ, ಗಣಪತಿ ಬಿಂಬಶುದ್ಧಿ, 108 ತೆಂಗಿನಕಾಯಿ ಗಣಹೋಮ, ಗಣಪತಿ ಪ್ರಾಯಶ್ಚಿತ್ತ, ಬ್ರಹ್ಮರ ಸನ್ನಿಧಿಯಲ್ಲಿ ಕಲಶಾಭಿಷೇಕ. ಬೆಳಿಗ್ಗೆ ಭ್ರಾಮರೀವನದಲ್ಲಿ ಚಂದ್ರಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00ರಿಂದ ಭೂವರಾಹ ಹೋಮ, ಸ್ವಯಂವರಪಾರ್ವತೀಪೂಜೆ, ಉತ್ಸವಬಲಿ ಹಾಗೂ ಹೋಮ, ರಕ್ತೇಶ್ವರೀ ಸನ್ನಿಧಿಯಲ್ಲಿ ವಾಸ್ತುಪೂಜೆ ಇತ್ಯಾದಿ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ

ಜ.26, ಭಾನುವಾರ: ಪ್ರಾತಃ 5-00ರಿಂದ ಧಾರಾಶುದ್ಧಿ-ಸಾಮವೇದ ಮತ್ತು ಅಥರ್ವವೇದ ಪಾರಾಯಣ, ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತೃಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚದುರ್ಗಾ ಹೋಮಗಳು, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾಬಲಿ. ಬೆಳಿಗ್ಗೆ ಭ್ರಾಮರೀವನದಲ್ಲಿ ಅಂಗಾರಕಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಯಜ್ಞಜಪ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00ರಿಂದ ವನದುರ್ಗಾಪೂಜೆ ಮತ್ತು ಹೋಮ, ದುರ್ಗಾ ಮಾರ್ಕಂಡೇಯಪೆÇ್ರೀಕ್ತಪ್ರಾಯಶ್ಚಿತ್ತ ಹೋಮಗಳು, ಉತ್ಸವ ಬಲಿ. ಭ್ರಾಮರೀ ವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ

ಜ.27, ಸೋಮವಾರ: ಪ್ರಾತಃ 5-00ರಿಂದ ದುರ್ಗಾಶಾಂತಿಹೋಮ, ಶಾಸ್ತೃ ಶಾಂತಿಪ್ರಾಯಶ್ಚಿತ್ತಗಳು. ಬೆಳಿಗ್ಗೆ ಭ್ರಾಮರೀವನದಲ್ಲಿ ತತ್ವಹೋಮ, ಶಾಂತಿಪ್ರಾಯಶ್ಚಿತ್ತಗಳು, ಕಲಶಾಭಿಷೇಕ, ಬುಧಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00ರಿಂದ ಭದ್ರಕಮಂಡಲಪೂಜೆ, ಅರ್ಚನೆ, ಮಹಾಬಲಿಪೀಠ ಮತ್ತು ಕ್ಷೇತ್ರಪಾಲಕಲಶಾಭಿಷೇಕ, ದಿಶಾಹೋಮಗಳು, ಚೋರಶಾಂತಿ, ಉತ್ಸವಬಲಿ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ

ಜ.28, ಮಂಗಳವಾರ: ಪ್ರಾತಃ 5-00 ರಿಂದ ಚಂಡಿಕಾಯಾಗ, ಶ್ರೀಸೂಕ್ತ ಪುರುಷಸೂಕ್ತ ಹೋಮ, ಮಹಾಶಾಂತಿ, ಶಾಸ್ತೃ ಕಲಶಾಭಿಷೇಕ, ಮಂಟಪಸಂಸ್ಕಾರ. ಬೆಳಿಗ್ಗೆ ಭ್ರಾಮರೀವನದಲ್ಲಿ ಬೃಹಸ್ಪತಿಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00ರಿಂದ ಶಕ್ತಿದಂಡಕಮಂಡಲಪೂಜೆ, ಅರ್ಚನೆ, ರಕ್ತೇಶ್ವರೀ ಸನ್ನಿಧಿಯಲ್ಲಿ ಕಲಶಾಭಿಷೇಕ, ಭ್ರಾಮರೀದುರ್ಗಾಹೋಮ, ವಿಶೇಷಶಾಂತಿಹೋಮ, ಶಾಂತಿದುರ್ಗಾಹೋಮ, ಅಸ್ತ್ರಮಂತ್ರ ಹೋಮ, ಉತ್ಸವ ಬಲಿ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ

ಜ.29, ಬುಧವಾರ: ಪ್ರಾತಃ 5-00 ರಿಂದ ತತ್ವಹೋಮ, ತತ್ವಕಲಶಾಭಿಷೇಕ, ದುರ್ಗಾಹೋಮ, ಕಲಶಮಂಡಲ ರಚನೆ, ಕಲಶಮಂಡಲ ಪೂಜೆ, ಗಣಪತಿ ಶಾಂತಿ, ಗಣಪತಿ ದೇವರಿಗೆ ಕಲಶಾಭಿಷೇಕ. ಬೆಳಿಗ್ಗೆ ಭ್ರಾಮರೀವನದಲ್ಲಿ ಶುಕ್ರಯಾಗ, ಸಹಸ್ರಚಂಡಿಕಾ ಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00 ರಿಂದ ಬ್ರಹ್ಮಕಲಶಾಧಿವಾಸ, ಅಧಿವಾಸಹೋಮಗಳು, ಹೊರಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾಬಲಿ, ಉತ್ಸವ ಬಲಿ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ.

ಜ.30, ಗುರುವಾರ: ಪ್ರಾತಃ 9-37ಕ್ಕೆ ಮೀನಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಅವಸ್ರುತಬಲಿ, ಮಹಾಪೂಜೆ, ಪಲ್ಲಪೂಜೆ, ಮಹಾಅನ್ನಸಂತರ್ಪಣೆ. ಬೆಳಿಗ್ಗೆ ಭ್ರಾಮರೀವನದಲ್ಲಿ ಶನಿಯಾಗ, ಸಹಸ್ರಚಂಡಿಕಾ ಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ. ಸಾಯಂ 5-00 ರಿಂದ ರಥಕಲಶಾಭಿಷೇಕ, ಮಹಾರಥೋತ್ಸವ, ಭೂತಬಲಿ, ಶಯನ, ಕವಾಟಬಂಧನ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ.

 ಜ.31, ಶುಕ್ರವಾರ: ಪ್ರಾತಃ 5-00 ರಿಂದ ಕವಾಟೋದ್ಘಾಟನೆ, ತೀರ್ಥಯಾತ್ರಾಹೋಮ, ಅವಭೃತಸ್ನಾನ, ಧ್ವಜಾವರೋಹಣ, ಸಂಪ್ರೋಕ್ಷಣೆ. ಬೆಳಿಗ್ಗೆ ಭ್ರಾಮರೀವನದಲ್ಲಿ ರಾಹುಯಾಗ, ಸಪ್ತಶತೀಪಾರಾಯಣ, ಕೋಟಿಜಪಯಜ್ಞ, ನವಗ್ರಹವನ, ವೃಕ್ಷಸ್ಥಾಪನೆ. ಸಾಯಂ 5-00 ರಿಂದ ಶ್ರೀರಂಗಪೂಜೆ, ಸುವರ್ಣರಥೋತ್ಸವ, ಸುವರ್ಣ ಪಲ್ಲಕ್ಕಿ ಉತ್ಸವ, ನಾಗಮಂಡಲಸ್ಥಳದಲ್ಲಿ ವಾಸ್ತು, ನಾಗತನುಪ್ರಸನ್ನಪೂಜೆ. ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ.

ಫೆ.1, ಶನಿವಾರ: ಪ್ರಾತಃ 5-00ರಿಂದ ಒಳಗಿನ ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ತಿಲಹೋಮ, ಕೂಷ್ಮಾಂಡಹೋಮ, ಪವಮಾನಹೋಮ, ಸರ್ಪತ್ರಯಮಂತ್ರಹೋಮ, ಮಂಗಳಗಣಯಾಗ,ವಟು ಆರಾಧನೆ, ದಂಪತಿಪೂಜೆ, ಮಹಾಮಂತ್ರಾಕ್ಷತೆ, ಮಹಾಅನ್ನಸಂತರ್ಪಣೆ. ಬೆಳಿಗ್ಗೆ ಭ್ರಾಮರೀವನದಲ್ಲಿ ಕೇತುಯಾಗ, ಸಹಸ್ರಚಂಡಿಕಾಸಪ್ತಶತೀಪಾರಾಯಣ, ಕೋಟಿಜಪಯಜ್ಞ
ಸಾಯಂ 6-00 ರಿಂದ ಹಾಲಿಟ್ಟು ಸೇವೆ, ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಸತೀಪಾರಾಯಣ. ಸಾಯಂ. 7.00ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ಬಾಲಕೃಷ್ಣ ನಟರಾಜ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ

ಫೆ.2, ಭಾನುವಾರ: ಪ್ರಾತಃ 7-00 ರಿಂದ ನವಾಕ್ಷರಿಹೋಮ, ಕೋಟಿಜಪಯಜ್ಞ, ತ್ರಿಕಾಲಪೂಜೆ. ಬೆಳಿಗ್ಗೆ ಭ್ರಾಮರೀವನದಲ್ಲಿ ನವಾಕ್ಷರಿಯಾಗ, ಕೋಟಿಜಪಯಜ್ಞ, ತ್ರಿಕಾಲಪೂಜೆ ಸಹಸ್ರನಾರಿಕೇಳ ಗಣಯಾಗ. ಮಧ್ಯಾಹ್ನ ಕುಮಾರಿಪೂಜೆ, ಸಾಯಂ 5-00ರಿಂದ ಸಹಸ್ರಚಂಡಿಕಾಯಾಂಗ ಅಗ್ನಿಜನನ, ಸಹಸ್ರಚಂಡಿಕಾಸಪ್ತಸತೀಪಾರಾಯಣ, ಕೋಟಿಜಪಯಜ್ಞ ಪರಿಸಮಾಪಿ

ಫೆ.3, ಸೋಮವಾರ: ಪ್ರಾತಃ 7-00ರಿಂದ ಭ್ರಾಮರೀವನದಲ್ಲಿ ಸಹಸ್ರಚಂಡಿಕಾಯಾಗ ಪ್ರಾರಂಭ, 11-30ಕ್ಕೆ ಪೂರ್ಣಾಹುತಿ

Pages