BUNTS NEWS, ಮಂಗಳೂರು:
ಸಿರಿವಂತರ ನಡುವೆ ಜನರ ಕಷ್ಟಕ್ಕೆ ಸ್ಪಂದಿಸುವ ಹೃದಯ ಸಿರಿವಂತಿಕೆ ಪ್ರಕಾಶಣ್ಣನಲ್ಲಿದೆ ಎಂದು ಜಾಗತಿಕ
ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ನ.4ರಂದು ನಗರದ
ಗೋಲ್ಡ್’ಪಿಂಚ್ ಸಭಾಂಗಣದಲ್ಲಿ “ಪ್ರಕಾಶಾಭಿನಂದನ 60ರ ಸಂಭ್ರಮ” ಕುರಿತಂತೆ ಪ್ರಕಾಶ ಶೆಟ್ಟಿ ಅಭಿನಂದನ
ಸಮಿತಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದರು. ಪ್ರಕಾಶ್ ಶೆಟ್ಟಿ
ಅವರು ಎಲ್ಲಾ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ 60ನೇ ವರ್ಷದ ಅಭಿನಂದನ ಸಂಭ್ರಮಕ್ಕಾಗಿ
ಈಗಾಗಲೇ ಎಲ್ಲಾ ಬಂಟರ ಸಂಘಗಳ ಸಭೆ ಸೇರಿ ಕಾರ್ಯಕ್ರಮದ ಯಶಸ್ಸಿಗೆ ಚಿಂತನೆ ಮಾಡಲಾಗಿದೆ ಎಂದರು.
ಸರಿಸುಮಾರು
1,000 ಜನ ಮುಂಬೈನಿಂದ ‘ಪ್ರಕಾಶಾಭಿನಂದನ’ ಕಾರ್ಯಕ್ರಮಕ್ಕೆ ಬರಲಿದ್ದು ಜಗತ್ತಿನ 112 ಬಂಟರ ಸಂಘಗಳು
ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಸಮಾರಂಭವನ್ನು ಮಾದರಿಯಾಗುವ ಉದ್ದೇಶದಿಂದ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ಸನ್ಮಾನ, ಸಹಾಯಹಸ್ತ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.
ಪ್ರಕಾಶಾಭಿನಂದನಾ
ಸಮಿತಿಯ ಅಧ್ಯಕ್ಷ ಸುರೇಶ ಶೆಟ್ಟಿ ಗುರ್ಮೆ ಮಾತನಾಡಿ, ಊರಪರವೂರ ಅಭಿಮಾನಿ ಬಂಧು ಬಾಂಧವರ ಸಮಕ್ಷದಲ್ಲಿ
ಡಿ.25ರ ಸಂಜೆ 4ರಿಂದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ 60 ಜನ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಧನ. 60 ಜನ ವಿದ್ಯಾರ್ಥಿಗಳಿಗೆ
ಸಹಾಯಧನ ಹಾಗೂ 15 ಎಲ್ಲಾ ಸಮಾಜದ ಸಾಧಕರಿಗೆ ಗೌರವಾರ್ಪಣೆಯು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ ಸಮಾರಂಭದಲ್ಲಿ
ರಾಜ್ಯ, ರಾಷ್ಟ್ರ ಮಟ್ಟದ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರು, ಬಂಟ ಸಮಾಜದ ಗಣ್ಯರು ಮತ್ತು ಎಲ್ಲಾ
ಸಮಾಜದ ಮುಖಂಡರ ಒಗ್ಗೂಡುವಿಕೆಯಲ್ಲಿ 25,000ಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದ್ದು, ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲರೂ ಒಂದಾಗಿ ಕಾರ್ಯಕ್ರಮ ಯಶಸ್ವಿಗೆ ಜೊತೆಯಾಗುವಂತೆ
ಕೋರಿದರು.
ಈ ಸಂದರ್ಭ ಪ್ರಕಾಶಾಭಿನಂದನದ ಪ್ರಧಾನ ಸಂಚಾಲಕ ಪುಣೆ ಬಂಟರ
ಸಂಘದ ಅಧ್ಯಕ್ಷ ಸಂತೋಷ ವಿ. ಶೆಟ್ಟಿ, ಕೋಶಾಧಿಕಾರಿ ಸುರೇಶ ಶೆಟ್ಟಿ ಪಡುಬಿದ್ರಿ, ದ.ಕ ಜಿಲ್ಲಾ ಸಂಚಾಲಕ
ಎಂ. ಸುರೇಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷರಾದ ದೇವಾನಂದ ಎಂ. ಶೆಟ್ಟಿ, ದೇವಿಪ್ರದಾದ ಶೆಟ್ಟಿ ಬೆಳಪು,
ಮಂಗಳೂರು ತಾಲೂಕು ಸಂಚಾಲಕ ದೇವಿಚರಣ ಶೆಟ್ಟಿ, ಉಡುಪಿ ಜಿಲ್ಲಾ ಸಂಚಾಲಕ ಹರ್ಷವರ್ಧನ ಶೆಟ್ಟಿ, ಕಾರ್ಯಕ್ರಮದ
ಪತ್ರಿಕಾ ಪ್ರಚಾರಕರಾದ ಜಗನ್ನಾಥ ಶೆಟ್ಟಿ ಬಾಳ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.