ಬಂಟ್ಸ್ ಹಾಸ್ಟೆಲ್: ನೂತನ ಕಾರ್ಪೊರೇಟರ್’ಗಳಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ್ಸ್ ಹಾಸ್ಟೆಲ್: ನೂತನ ಕಾರ್ಪೊರೇಟರ್’ಗಳಿಗೆ ಸನ್ಮಾನ

Share This
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಶ್ರೀರಾಮಕೃಷ್ಣ ಕಾಲೇಜು ಮೈದಾನದಲ್ಲಿ ಮಂಗಳೂರು ಮಹಾನಗರಪಾಲಿಕೆಯ ನೂತನ ಕಾರ್ಪೊರೇಟರ್ಗಳಾಗಿ ಆಯ್ಕೆಗೊಂಡ ಬಂಟ ಸಮಾಜದ 12 ಮಂದಿಯನ್ನು  .26 ರಂದು ಸನ್ಮಾನಿಸಿ, ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಡಾ|ವೈ.ಭರತ್ ಶೆಟ್ಟಿ ಅವರು ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲ ಸದಸ್ಯರು ಪಕ್ಷಾತೀತವಾಗಿ ಮಂಗಳೂರಿನ ನಗರಾಭಿವೃದ್ಧಿಗೆ ಶ್ರಮಿಸುವಂತಾಗಬೇಕು. ಉತ್ತಮ ಕೆಲಸ ಮಾಡಿದರೆ ಜನ ಖಂಡಿತ ಗುರುತಿಸುತ್ತಾರೆ. ನಿಟ್ಟಿನಲ್ಲಿ ನಗರ ಸೇವಕರಾಗಿರುವ ಸದಸ್ಯರಿಗೆ ದೊರೆತಿರುವ ಸನ್ಮಾನ ಮುಂದಿನ ಅವರ ಕೆಲಸ ಕಾರ್ಯಗಳಿಗೆ ನಿರಂತರ ಸ್ಫೂರ್ತಿ, ಉತ್ಸಾಹ ತುಂಬಲಿ ಎಂದು ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರು ಮಾತನಾಡಿ, ಪಾಲಿಕೆಯ ನೂತನ ಸದಸ್ಯರಿಗೆ ಮಾಡಲಾದ ಸನ್ಮಾನ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದ್ದು, ತಮ್ಮ ಅವಧಿಯಲ್ಲಿ  ಸದಸ್ಯರು ಉತ್ತಮ ಹೆಸರನ್ನು ಗಳಿಸಲಿ ಎಂದರುವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅವರು ಮಾತನಾಡಿ, ಪಾಲಿಕೆಯ ಮಾಜಿ ಸದಸ್ಯರಾಗಿ ನಗರದ ಅತ್ಯುತ್ತಮ ಜನಪ್ರತಿನಿಧಿಯಾಗಿ ಪ್ರಸಿದ್ಧರಾಗಿದ್ದ ದಿ|ನಾರಾಯಣ ಶೆಟ್ಟಿ ಅವರ ಕಾರ್ಯ ವೈಖರಿ ಈಗಿನ ಎಲ್ಲ ಸದಸ್ಯರಿಗೆ ಆದರ್ಶವಾಗಲಿ ಎಂದು ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ವಸಂತ ಶೆಟ್ಟಿ, ಪದಾಧಿಕಾರಿಗಳಾದ ರವೀಂದ್ರನಾಥ ಶೆಟ್ಟಿ, ಕೆಂಚನೂರು ಸೋಮಶೇಖರ ಶೆಟ್ಟಿಪಾಲಿಕೆಯ ನೂತನ ಸದಸ್ಯರಾದ ಎಂ.ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಶಕಿಲಾ ಕಾವ, ಜಗದೀಶ್ ಶೆಟ್ಟಿ, ರೇವತಿ ಶ್ಯಾಮಸುಂದರ್, ಜಯಲಕ್ಷ್ಮಿ ಶೆಟ್ಟಿ, ಶೈಲೇಶ್ ಶೆಟ್ಟಿ, ಮನೋಹರ್ ಶೆಟ್ಟಿ, ವರುಣ್ ಚೌಟ, ಕಾವ್ಯಾ ನಟರಾಜ್ ಆಳ್ವ ಮತ್ತಿತರರ ಶೆಟ್ಟಿಗಳು ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಮಂಜುಳಾ ಶೆಟ್ಟಿ ಹಾಗೂ ಕವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Pages