BUNTS NEWS, ಮಂಗಳೂರು: ತಲಪಾಡಿಯ ನಾರ್ಲದಲ್ಲಿನ ಶ್ರೀಮತಿ ಹರಿನಾಕ್ಷಿ
ಶೆಟ್ಟಿ ಮತ್ತು ಶ್ರೀ ನಾಗೇಶ್ ಶೆಟ್ಟಿ ದಂಪತಿಗಳ ಶಿಥಿಲಗೊಂಡ ವಾಸದ ಮನೆಯ ರಿಪೇರಿಗೆ ಜಾಗತಿಕ ಬಂಟರ
ಸಂಘಗಳ ಒಕ್ಕೂಟವು ಸೆ.30ರಂದು ಸಹಾಯಧನ ನೀಡಿತು.
ಸದ್ರಿ ಕುಟುಂಬದ
ಆರ್ಥಿಕ ಸ್ಥಿತಿ ಹಾಗೂ ಅವರ ಆದಾಯದ ವ್ಯವಸ್ಥೆಯನ್ನು ತುಲನಾತ್ಮಕವಾಗಿ ಮನಃಗಂಡ ಜಾಗತಿಕ ಬಂಟರ ಸಂಘಗಳ
ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಹಾಗೂ ಪದಾಧಿಕಾರಿಗಳು ಸದ್ರಿ ವಾಸದ ಮನೆಯ ವ್ಯವಸ್ಥಿತ
ನವೀಕರಣದ ಕೆಲಸಕ್ಕೆ ನಿಶಾನೆಯನ್ನು ತೋರಿ ಶೀಘ್ರ ಕೆಲಸವನ್ನು ಮುಗಿಸುವಂತೆ ತಿಳಿಸಿ ಸದ್ರಿ ಕುಟುಂಬಕ್ಕೆ
ಶುಭವನ್ನು ಕೋರಿದರು.
ಈ ಕಾರ್ಯಕ್ಕೆ ವಿಜಯ
ಪ್ರಸಾದ್ ಆಳ್ವ, ವಿನಯ ನಾಯ್ಕ್ ಸೋಮೇಶ್ವರ ಬಂಟರ ಸಂಘದ ಒಕ್ಕೂಟದ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ,
ಸೋಮೇಶ್ವರ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ಯಶು ಪಕ್ಕಳರವರು ಶಿಫಾರಸು ಮಾಡಿ ಸಹಕರಿಸಿದ್ದರು.