ಬರೋಡಾ ಪ್ರವಾಹ ಸಂತೃಸ್ತರಿಗೆ ಶಶಿಧರ ಬಿ.ಶೆಟ್ಟಿ ಸಹಾಯಹಸ್ತ : ಆಹಾರ, ಕುಡಿಯುವ ನೀರು ವಿತರಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬರೋಡಾ ಪ್ರವಾಹ ಸಂತೃಸ್ತರಿಗೆ ಶಶಿಧರ ಬಿ.ಶೆಟ್ಟಿ ಸಹಾಯಹಸ್ತ : ಆಹಾರ, ಕುಡಿಯುವ ನೀರು ವಿತರಣೆ

Share This
BUNTS NEWS, ಮುಂಬಯಿ/ಬರೋಡಾ: ಗುಜರಾತಿನ ಬರೋಡಾದ ಶಶಿ ಕೇಟರಿಂಗ್ ಸರ್ವಿಸ್ ಮಾಲಿಕ, ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಶಶಿಧರ ಬಿ.ಶೆಟ್ಟಿ ಅವರು ಬರೋಡಾದ ಜಾಲಾವೃತ ಪ್ರವಾಹ ಪ್ರದೇಶಗಳಿಗೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಆಹಾರಪೊಟ್ಟಣ, ನೀರಿನ ಬಾಟಲಿಗಳನ್ನು ನೀಡಿ ಸಹಾಯ ಮಾಡಿದ್ದಾರೆ.

ಬರೋಡಾದ ಹೆಸರಾಂತ ಪ್ರತಿಷ್ಠಿತ ಯುವೋದ್ಯಮಿ, ಕೊಡುಗೈದಾನಿ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಶಶಿಧರ ಶೆಟ್ಟಿ ತನ್ನ ಮಿತ್ರವೃಂದ, ಸಹದ್ಯೋಗಿ ಬಳಗವನ್ನೊಳಗೊಂಡ ಸೇವಾ ಸೈನಿಕರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ, ಸ್ಥಾನೀಯ ಅಗ್ನಿಶಾಮಕ ದಳ, NDRF ಸಹಯೋಗದೊಂದಿಗೆ ವಿದ್ಯುಚ್ಛಕ್ತಿ ಕಡಿತಗೊಂಡ ಸ್ಥಳಗಳಿಗೂ ವಿಶೇಷ ಬೆಳಕಿನ ಸಹಾಯ ಪಡೆದು ಬೋಟುಗಳಲ್ಲಿ ಹಗಲಿರುಳು ಎನ್ನದೆ ಕೋಸ್ಟ್ಗಾರ್ಡ್ ದೋಣಿಗಳಲ್ಲಿ ಮನೆಮನೆಗೆ ಸಾಗಿ ಸಹಾಯಸ್ತ ನೀಡಿದರು.
ಸಾವಿರಾರು ನೌಕರರ ಧನಿಯಾಗಿರುವ ಶಶಿಧರ್ ಶೆಟ್ಟಿ ಸ್ವತಃ ನೀರು ಬಾಟಲಿಗಳನ್ನು ಹೆಗಲನ್ನೇರಿಸಿ, ಇಲ್ಲಿನ ತುಳು-ಕನ್ನಡಿಗರನ್ನು ಒಗ್ಗೂಡಿಸಿ ನಿರಾಶ್ರಿರಲ್ಲಿ ಧಾವಿಸಿದರು. ಬರೋಡಾ ಸಂಸದ ರಂಜನ್ಬೆನ್ ಧನಂಜಯ್ ಭಟ್, ಸ್ಥಳೀಯ ಶಾಸಕರ, ರಿಫೈನರಿ, ಕೈಗಾರಿಕೋದ್ಯಮ, ಕಂಪೆನಿಗಳ ಸಹಕಾರದಿಂದ ನೀರು, ಚಹಾ, ತಿಂಡಿತಿನಿಸು, ಉಪಹಾರಗಳ ಸಾವಿರಾರು ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಿ ಸರಕು ವಾಹನಗಳಲ್ಲಿ ತುಂಬಿಸಿ ಮನೆಮನೆಗೆ ತಲುಪಿಸುವಲ್ಲಿ ಕಾರ್ಯನಿರತರಾದರುಸೇವೆಯೊಂದಿಗೆ ಮಾನವೀಯತೆಯನ್ನು ಮೆರೆದರು. ಮಧನ್ ಕುಮಾರ್ ಸೇರಿದಂತೆ ಅನೇಕರು ಸಹಕರಿಸಿದರು.

Pages