BUNTS NEWS, ಕಿನ್ನಿಗೋಳಿ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳಿಗೆ
24ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಜೂ.4ರಂದು ಸ.ಹಿ.ಪ್ರಾ.ಶಾಲೆ ಕರ್ನಿರೆಯಲ್ಲಿ
ನಡೆಯಿತು. ಕಳೆದ 23 ವರ್ಷಗಳಿಂದ ಕರ್ನಿರೆ ಶಾಲಾ ಮಕ್ಕಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ಕರ್ನಿರೆ
ಫೌಂಡೇಷನ್ ಶ್ರೀ ವಿಶ್ವನಾಥ ಶೆಟ್ಟಿ ಕರ್ನಿರೆ ಅವರು ನೀಡುತ್ತಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ತಾಲ್ಲೂಕು ಪಂಚಾಯತ್ ಸದಸ್ಯೆಯಾದ ಶ್ರೀಮತಿ ರಶ್ಮಿ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳಕುಂಜೆ
ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಶೆಟ್ಟಿ ಹಾಗೂ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಶಾಲಾ
ಹಿತೈಷಿಗಳಾದ ಹರಿಶ್ಚಂದ್ರ ಶೆಟ್ಟಿ, ಮೋಹನ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಹಾಗೂ
ದಾನಿಗಳಾದ ಪ್ರಭಾಕರ ಶೆಟ್ಟಿ ಹಾಜರಿದ್ದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,
ಪೋಷಕರು, ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದದವರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು
ಇದ್ದರು.
ಮುಖ್ಯ ಶಿಕ್ಷಕಿ
ಶ್ರೀಮತಿ ಪುಷ್ಪಾ ಪಿ ಸ್ವಾಗತಿಸಿ ವಂದಿಸಿದರು. ಸಹ ಶಿಕ್ಷಕಿಯಾದ ಶ್ರೀಮತಿ ಧರ್ಮಾವತಿ ಕಾರ್ಯಕ್ರಮ
ನಿರೂಪಿಸಿದರು.