ಬಂಟರು ಎಲ್ಲಾ ಜಾತಿ ಧರ್ಮದವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ : ನಟ ರಿಷಬ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರು ಎಲ್ಲಾ ಜಾತಿ ಧರ್ಮದವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ : ನಟ ರಿಷಬ್ ಶೆಟ್ಟಿ

Share This

BUNTS NEWS, ಮಂಗಳೂರು: ಬಂಟರು ಎಲ್ಲಾ ಜಾತಿ ಧರ್ಮದವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದು ತಮ್ಮ ವಿದ್ಯಾರ್ಥಿನಿ ಭವನದಲ್ಲಿ ಎಲ್ಲಾ ಸಮುದಾಯದವರಿಗೂ ಅವಕಾಶ ನೀಡಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಖ್ಯಾತ ಸಿನಿಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ನುಡಿದರು.
ಅವರು ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ಬಂಟ ಮಹಿಳೆಯರು ಮುಂದೆ ಬರಬೇಕೆಂಬ ಉದ್ದೇಶದಿಂದ ಮಹಿಳೆಯರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ವಿದ್ಯಾರ್ಥಿನಿ ಭವನವನ್ನು ಬಂಟರ ಮಾತೃಸಂಘ ಹಲವಾರು ವರ್ಷಗಳ ಹಿಂದೆಯೇ ನಿರ್ಮಿಸಿದ್ದು ಎಂದು ಶ್ಲಾಘೀಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಡಾ. ಮಿಶ್ರ ಹೆಗ್ಡೆ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಚಾಲಕರಾದ ಉಷಾ ಎಚ್. ಬಳ್ಳಾಲ್, ಕಾರ್ಯದರ್ಶಿ ಶಾರಿಕಾ ಭಂಡಾರಿ, ಜಯಲಕ್ಷ್ಮೀ ಶೆಟ್ಟಿ, ಸುನಿಲಾ ಪ್ರಭಾಕರ್ ಶೆಟ್ಟಿ ಹಾಗೂ ಸಮಿತಿಯ ಎಲ್ಲಾ ಸದಸ್ಯೆಯರು ಭಾಗವಹಿಸಿದ್ದರು. ಸಂಸ್ಥೆಯ ವಾರ್ಡನ್ ಜಯಂತಿ ಎಸ್. ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಬಳಿಕ ಹಾಸ್ಟೆಲ್ ನಿವಾಸಿಗಳ ಹಾಗೂ  ಸಮಿತಿ ಸದಸ್ಯೆಯರ  ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಗೀತ ಹರ್ಷಿತ, ಹಾಗೂ ಕಾವ್ಯ  ಕಾರ್ಯಕ್ರಮ ನಿರೂಪಿಸಿದರು. ಸಹ ವಾರ್ಡನ್ ಕಾಮಿನಿ ಶೆಟ್ಟಿ ವಂದಿಸಿದರು.

ಆಟೋಟ ಸ್ಪರ್ಧೆ: ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ವಾರ್ಷಿಕೋತ್ಸವದ ಅಂಗವಾಗಿ ಒಂದು ವಾರದ ಕಾಲ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ವಿಜ್ರಂಭಣೆಯಿಂದ ಜರಗಿತು. ಸಮಿತಿಯ ನೂತನ ಸಲಹೆಗಾರರಾದ ಆಶಾಜ್ಯೋತಿ ರೈ, ವೀಣಾ ಟಿ. ಶೆಟ್ಟಿ ಹಾಗೂ ಸವಿತಾ ಚೌಟ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂದರ್ಭ ಸಂಚಾಲಕರು, ಸಮಿತಿಯ ಸರ್ವ ಸದಸ್ಯೆಯರು ಹಾಗೂ ಹಾಸ್ಟೆಲ್ ನಿವಾಸಿಗಳು ಉಪಸ್ಥಿತರಿದ್ದರು. ತ್ರೋಬಾಲ್, ಖೋ ಖೋ, ಹಗ್ಗಜಗ್ಗಾಟ, ಕಬಡ್ಡಿ, ಲಗೋರಿ ಕ್ರೀಡೆಗಳ ತೀರ್ಪುಗಾರರಾಗಿ ರಾಮಕೃಷ್ಣ  ಕಾಲೇಜಿನ ದೈಹಿಕ  ಶಿಕ್ಷಕ ಸ್ಪರ್ಧೆಗಳ ತೀರ್ಪುಗಾರರಾಗಿ ಗೀತಾ ಕಿಶೋರ್, ಪ್ರಮೋದ್ ಆಳ್ವ, ಪ್ರತಿಭಾ ರೈ ಹಾಗೂ ಆರ್.ಜೆ. ಆಕಾಶ್ ಶೆಟ್ಟಿ ಭಾಗವಹಿಸಿದ್ದರು.

Pages