ಮಂಗಳೂರು: ಶಕ್ತಿನಗರದ ಶಕ್ತಿ ಪಿ.ಯು.
ಕಾಲೇಜು ಹಾಗೂ ಶಕ್ತಿ ವಸತಿ
ಶಾಲೆಯಲ್ಲಿ ಜ.12 ರಂದು ಸ್ವಾಮಿ
ವಿವೇಕಾನಂದರ ಜನ್ಮ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಬೈಕಾಡಿ ಜನಾರ್ದನ
ಆಚಾರ್ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ತಮ್ಮ ಪ್ರಖರ ಭಾಷಣಗಳ ಮೂಲಕ
ಹಿಂದೂ ಮೌಲ್ಯಗಳತ್ತ ಪಾಶ್ಚಾತ್ಯರ ಗಮನ ಸೆಳೆದ, ಭಾರತದ
ಮೇಲೆ ಪಾಶ್ಚಾತ್ಯರಿಗೆ ಗೌರವ ಮೂಡುವಂತೆ ಮಾಡಿದ
ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಶ್ರೇಷ್ಠ
ವ್ಯಕ್ತಿಗಳಲ್ಲಿ ಒಬ್ಬರು ಎಂದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನದ
ಆಡಳಿತ ಮೊಕ್ತೇಸರ ಕೆ.ಸಿ ನಾೈಕ್
ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಅಭಿವೃದ್ಧಿ
ಅಧಿಕಾರಿ ನಸೀಮ್ ಬಾನು, ಪ್ರಧಾನ
ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ
ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ
ಜಿ.ಎಸ್ ವಂದಿಸಿದರು. ಪ್ರಿಯಾಂಕ
ರೈ ನಿರೂಪಿಸಿದರು.