ಮುಂಬಯಿ: ಕಲ್ವಾ ಫ್ರೆಂಡ್ಸ್ ಇದರ
ದಶಮಾನೋತ್ಸವ ಸಮಾರಂಭವು ನ.23 ರಂದು ಪೂರ್ವಾಹ್ನ ಮಾಟುಂಗ
ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ
ಜರಗಿತು.
ಸಮಾರಂಭದ
ಅಧ್ಯಕ್ಷತೆಯನ್ನು ಕನ್ನಡಿಗ ಪತ್ರಕರ್ತರ ಸಂಘ
ಮಹಾರಾಷ್ಟ್ರ ಅಧ್ಯಕ್ಷ ಚಂದ್ರ ಶೇಖರ
ಪಾಲೆತ್ತಾಡಿ ಅವರು ವಹಿಸಿದ್ದು, ಸಮಾರಂಭದಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಪುಣೆ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಸ್ಥಾಪಕಾಧ್ಯಕ್ಷ
ಪ್ರವೀಣ್ ಶೆಟ್ಟಿ ಪುತ್ತೂರು, ಯೋಗ
ಗುರು ಜಗದೀಶ್ ಶೆಟ್ಟಿ ಮತ್ತು
ಉದ್ಯಮಿ ಚಂದ್ರಶೇಖರ್ ಎಸ್. ಶೆಟ್ಟಿ ಅವರನ್ನು
ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮಹಿಳಾ
ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ,
ಥಾಣೆ ಬಂಟ್ಸ್ ಅಸೋಸಿಯೇಶನ್ನ
ಅಧ್ಯಕ್ಷ ಕುಶಲ್ ಸಿ. ಭಂಡಾರಿ,
ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ
ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ,
ಸುರೇಶ್ ಶೆಟ್ಟಿ ಯೆಯ್ಯಾಡಿ, ವರ್ತಕ್
ನಗರ ಕನ್ನಡ ಸಂಘದ ಅಧ್ಯಕ್ಷ
ಜಯಂತ್ ಶೆಟ್ಟಿ, ಉದ್ಯಮಿ, ಸಮಾಜ
ಸೇವಕ ಅನಿಲ್ ಶೆಟ್ಟಿ ಸೂರಿಂಜೆ,
ಉದ್ಯಮಿ ಮೋಹನ್ ಎನ್. ಶೆಟ್ಟಿ,
ಉದ್ಯಮಿ ಸುನೀಲ್ ಆಳ್ವ ಮೊದಲಾದವರು
ಉಪಸ್ಥಿತರಿದ್ದರು.
ಕಲ್ವಾ ಫ್ರೆಂಡ್ಸ್ನ ಅಧ್ಯಕ್ಷ ರಘುರಾಮ್
ಎನ್. ಶೆಟ್ಟಿ, ಉಪಾಧ್ಯಕ್ಷರಾದ ನೀತಾ
ಆರ್. ಶೆಟ್ಟಿ, ಪುಷ್ಪರಾಜ್ ಎಲ್.
ಶೆಟ್ಟಿ, ಕಾರ್ಯದರ್ಶಿ ವಿಜಯ್ ಎಸ್. ಶೆಟ್ಟಿ,
ಜತೆ ಕಾರ್ಯದರ್ಶಿಗಳಾದ ಮಧುರಾ ಎಸ್. ಶೆಟ್ಟಿ,
ಸಂಗೀತಾ ಶೆಟ್ಟಿಗಾರ್, ಕೋಶಾಧಿಕಾರಿ ಶಿವಪ್ರಸಾದ್ ಎಸ್. ಆಳ್ವ, ಜತೆ
ಕೋಶಾಧಿಕಾರಿಗಳಾದ ಸುಪ್ರೀತಾ ಎಂ. ಶೆಟ್ಟಿ, ಪ್ರಕಾಶ್
ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ
ಸದಸ್ಯರು, ಸಲಹಾ ಸಮಿತಿಯ ಸದಸ್ಯರು
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಸ್ಥೆಯ ಗೌರವ ಕೋಶಾಧಿಕಾರಿ
ಶಿವಪ್ರಸಾದ್ ಆಳ್ವ ಅವರು ಪ್ರಾಸ್ತಾವಿಕವಾಗಿ
ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು
ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ರಂಗನಿರ್ದೇಶಕ ಬಾಬಾ ಪ್ರಸಾದ್ ಆಳ್ವ
ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. [ವರದಿ:
ಈಶ್ವರ ಎಂ. ಐಲ್ ಚಿತ್ರ: ದಿನೇಶ್ ಕುಲಾಲ್]