ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದಂಪತಿಗೆ ‘ಬಂಟ್ಸ್ ಓಮನ್’ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದಂಪತಿಗೆ ‘ಬಂಟ್ಸ್ ಓಮನ್’ ಸನ್ಮಾನ

Share This
BUNTS NEWS, ಓಮನ್:  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಅವರ ಪತ್ನಿ ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ ಅವರನ್ನು ಓಮನ್ ಬಂಟರ ಐಸಿರಿ 2018ರ ಕಾರ್ಯಕ್ರಮದಲ್ಲಿ ‘ಬಂಟ್ಸ್ ಓಮನ್’ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು, ಉಡುಪಿಯ ವಿಶ್ವ ಬಂಟರ ಸಮ್ಮಿಲನ 2018 ಕಾರ್ಯಕ್ರಮ ಆಯೋಜಿಸಿ ಬಂಟರ ಒಗ್ಗಟ್ಟುತನವನ್ನು ಪ್ರದರ್ಶಿಸಲು ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಸೇವಾ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದವರಿಗೆ ಮತ್ತು ಹಿರಿಯ ಸಾಧಕರಿಗೆ ಸನ್ಮಾನಿಸಲಾಯಿತು. ಅಲ್ಲದೇ ಬಂಟರ ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿ ಎಲ್ಲರೂ ಒಬ್ಬರನ್ನೊಬ್ಬರು ಬೆರೆತು ಸಂಭ್ರಮಿಸುವ ಕಾರ್ಯಕ್ರಮವಾಗಿದ್ದು ಸುಮಾರು 20,000ಕ್ಕೂ ಮಿಕ್ಕಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿರುತ್ತದೆ ಎಂದರು. ಓಮನ್ ಬಂಟರ ಐಸಿರಿ ಕಾರ್ಯಕ್ರಮವು ಸಹ ಒಬ್ಬರನ್ನೊಬ್ಬರು ಬೆರೆಯುವ ಕಾರ್ಯಕ್ರಮವೆಂದು ಅಭಿನಂದಿಸಿದರು.

ಶಶಿಧರ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿವಿಧ ಕಾರ್ಯಕ್ರಮಗಳು ನಡೆಯಿತು. ಅಶ್ರಿತಾ ಮತ್ತು ಅಶ್ಮಿತಾರವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ನತಾಶ ಶೆಟ್ಟಿ ಬಾಲಿವುಡ್ ನೃತ್ಯ ನಿರ್ದೇಶಕಿ, ಅದ್ವಿಕಾ ಶೆಟ್ಟಿ ಲಿಟ್ಲ್ ಪ್ರಿನ್ಸೆಸ್ ಆಫ್ ಮಂಗಳೂರು ಇವರೆಲ್ಲರೂ ಭಾಗವಹಿಸಿದ್ದರು.

ಸಂಘದ ಪದಾಧಿಕಾರಿಗಳು ಇತರ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಂಟ್ಸ್ ಆಫ್ ಓಮನ್ ಇದರ 31ನೇ ಐಸಿರಿ ಕಾರ್ಯಕ್ರಮವು ಯಶಸ್ವಿಯಾಗಿ ಜರಗಿತು. ನಿರೀಕ್ಷಾ ಶೆಟ್ಟಿ ಜನಪ್ರಿಯ ಕೋಸ್ಟಲ್‍ವುಡ್ ತಾರೆ ಕಾರ್ಯಕ್ರಮ ನಿರೂಪಿಸಿದರು.

Pages