ಮಂಗಳೂರು: ಉದ್ಯಮಶೀಲತೆ ಗುಣಮಟ್ಟ ಹೆಚ್ಚಿಸಲು ಹಾಗೂ ಕೌಶಲ್ಯಾಭಿವೃದ್ಧಿಗಾಗಿ
ಬಡ್ಡಿ ರಹಿತ ಸಾಲ ನೀಡುವ ‘ಕಾಯಕ ಯೋಜನೆ’ಗೆ ರಾಜ್ಯದೆಲ್ಲೆಡೆ ಚಾಲನೆ ನೀಡಲಾಗುತ್ತಿದೆ. ಅಲ್ಲದೆ ಬೀದಿ
ಬದಿ ವ್ಯಾಪಾರಿಗಳಿಗೆ ನೆರವಾಗಲು ‘ಬಡವರ ಬಂಧು’ ಯೋಜನೆ ಜಾರಿಯಾಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ
ಕಾಶೆಂಪುರ್ ತಿಳಿಸಿದರು.
ಅವರು ದಕ ಜಿಲ್ಲಾ
ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಯಕ ಯೋಜನೆಯಡಿ 10 ಲಕ್ಷದವರೆಗೆ
ಸಾಲ ನೀಡಲಿದ್ದು ಇದರಲ್ಲಿ 5 ಲಕ್ಷ ರೂ.ಗಳಿಗೆ ಬಡ್ಡಿ ಇರಲಿದೆ. ಸರ್ಕಾರವು ಮೀಟರ್ ಬಡ್ಡಿ ಮುಕ್ತವಾಗುವ
ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಲು ‘ಬಡವರ ಬಂಧು’ ಯೋಜನೆಯನ್ನು ಶೀಘ್ರದಲ್ಲಿ ಆರಂಭಿಸಲಿದ್ದು
10 ಸಾವಿರ ರೂ.ವರೆಗೆ ಬಡ್ಡಿ ರಹಿತ ಸಾಲ ಲಭಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ
ಎಸ್’ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ ಎಂ.ಎನ್.ರಾಜೇಂದ್ರ ಕುಮಾರ್, ಸಹಕಾರಿ ಸಂಘಗಳ ರಿಜಿಸ್ಟ್ರಾರ್
ಎಂ.ಕೆ ಅಯ್ಯಪ್ಪ ಮತ್ತಿತರ ಪ್ರಮುಖರು ಇದ್ದರು.