ಗಡಿನಾಡ ಕನ್ನಡಿಗರ ನೋವಿಗೆ ಧ್ವನಿಯಾದ ರಿಷಬ್ ಶೆಟ್ಟಿ ಸಿನಿಮಾ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಗಡಿನಾಡ ಕನ್ನಡಿಗರ ನೋವಿಗೆ ಧ್ವನಿಯಾದ ರಿಷಬ್ ಶೆಟ್ಟಿ ಸಿನಿಮಾ

Share This
ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುಸಿನಿಮಾ ಕನ್ನಡಿಗರನ್ನು ಬಡಿದ್ದೆಬ್ಬಿಸಿ ಕಾಸರಗೋಡನ್ನು ಮತ್ತೆ ಕರ್ನಾಟಕಕ್ಕೆ ಸೇರಿಸುವ ಕ್ರಾಂತಿ ಮಾಡಿದ್ರು ಆಶ್ಚರ್ಯವಿಲ್ಲ...!
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಗಡಿನಾಡ ಕನ್ನಡಿಗರು ಭಾಷೆಯ ವಿಷಯದಲ್ಲಿ ಅನುಭವಿಸುವ ನೋವು, ಅಸಹಾಯಕತೆ, ತಾರತಮ್ಯಗಳ ನೈಜ ವಿಚಾರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಕಾಸರಗೋಡಿನ ಕನ್ನಡ ಶಾಲೆಗಳ ಸ್ಥಿತಿಗತಿ, ಕಡ್ಡಾಯ ಮಳೆಯಾಳಂ ಭಾಷೆ ಹೇರಿಕೆಯಿಂದ ಕನ್ನಡ ಭಾಷಿಕ ವಿದ್ಯಾರ್ಥಿಗಳು ಅನುಭವಿಸುವ ತೊಂದರೆ, ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವ ಆಡಳಿತ ವರ್ಗಗಳ ನಡೆಯ ವಾಸ್ತವ ಚಿತ್ರಣವನ್ನು ಚಿತ್ರದ ಕಥೆಯಲ್ಲಿ ಕಾಣಬಹುದಾಗಿದೆ.

ಚಿತ್ರದಲ್ಲಿ ಕೇರಳ-ಕರುನಾಡಿನ ಸಾಂಸ್ಕೃತಿಕ ವೈಭವದ ಪರಿಚಯ, ಸುಂದರ ಪ್ರಕೃತಿಯ ಸೊಬಗನ್ನು ಬಹಳ ಸುಂದರವಾಗಿ ಕಾಣಬಹುದು. ಒಟ್ಟಿನಲ್ಲಿ ಸಿನಿಮಾವು ಭಾಷೆಯ ಬಗ್ಗೆ ಮರೆಯಾಗುತ್ತಿರುವ ಅಭಿಮಾನವನ್ನು ಮತ್ತೆ ತುಂಬಬಲ್ಲದು. ಜೊತೆಗೆ ಭಾಷೆ ಉಳಿಯುವಲ್ಲಿ ಕನ್ನಡಿಗರ ಒಗ್ಗಟ್ಟಿನ ಅಗತ್ಯತೆಯಿದೆ ಎಂಬ ಸಂದೇಶವನ್ನು ನೀಡುತ್ತದೆ* ರವಿರಾಜ್ ಶೆಟ್ಟಿ ಕಟೀಲು              

ಚಿತ್ರದ ವಿಶೇಷ ಪಾತ್ರದಲ್ಲಿ ಕನ್ನಡದ ಹಿರಿಯ ನಟ ಅನಂತನಾಗ್ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಪ್ರದೀಪ್ ಆಳ್ವಾ ಕದ್ರಿ, ರಿಷಬ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಝೀ ಕನ್ನಡ ಡ್ರಾಮ ಜೂನಿಯರ್’ನ ಮಹೇಂದ್ರ,  ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. 
ನಗರದ ಬಿಗ್ ಸಿನೆಮಾದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನಚಿತ್ರದ ಪ್ರೀಮಿಯರ್ ಶೋ ಜರಗಿತು. ಮಂಗಳೂರು ನಗರದ ‌ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಸಿನೆಮಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಮೊಯಿಲಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ರಾಜೇಶ್ ಬ್ರಹ್ಮಾವರ, ಜ್ಞಾನೇಶ್, ಪ್ರದೀಪ್ ಆಳ್ವ, ನಿರ್ಮಾಪಕರಾದ ರವಿ ರೈ ಕಳಸ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪ್ರಕಾಶ್ ಪಾಂಡೇಶ್ವರ್ ಮತ್ತಿತರರ ಪ್ರಮುಖರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

Pages