ಚುನಾವಣೆಯಲ್ಲಿ ಸೋತ ಕಾಂಗ್ರೆಸ್’ನಿಂದ ಸಂಸದ ನಳಿನ್ ಬಗ್ಗೆ ಸಾಮಾಜಿಕ ತಾಣದಲ್ಲಿ ಅಪ್ರಪಚಾರ: ಮಠಂದೂರು ಆರೋಪ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಚುನಾವಣೆಯಲ್ಲಿ ಸೋತ ಕಾಂಗ್ರೆಸ್’ನಿಂದ ಸಂಸದ ನಳಿನ್ ಬಗ್ಗೆ ಸಾಮಾಜಿಕ ತಾಣದಲ್ಲಿ ಅಪ್ರಪಚಾರ: ಮಠಂದೂರು ಆರೋಪ

Share This

ಸಾಮಾಜಿಕ ತಾಣಗಳಲ್ಲಿ ಅಪ್ರಪಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನುಕ್ರಮಕ್ಕೆ ನಿರ್ಧಾರ

ಮಂಗಳೂರು: ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಇದೀಗ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ದ.ಕ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು  ಆರೋಪಿಸಿದ್ದಾರೆ.
ಅವರು ದ.ಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, ಸಂಸದ ನಳಿನ್ ಅವರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಒಬ್ಬ ನಿಷ್ಕಳಂಕ  ಸಂಸದರಾಗಿದ್ದಾರೆ. ಯಾವುದೇ ಭ್ರಷ್ಟಾಚಾರವಿಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರದಿಂದ ಸಾಕಷ್ಟು ಅನುದಾನಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಅವರು  ಅಡಿಕೆ ಬೆಳೆಗಾರರ ಹಿತರಕ್ಷಣೆ ಸೇರಿದಂತೆ ಜನಸಾಮಾನ್ಯರ ಉನ್ನತಿಗೆ ಶ್ರಮಿಸುತ್ತಿದ್ದಾರೆ ಎಂದರು.

ಸದಾ ಜನಸಾಮಾನ್ಯರ ಜೊತೆ ಬೆರೆಯುವ ಸಂಸದರಾಗಿದ್ದುಕೊಂಡು ಈಗಾಗಲೇ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಮಾನವರಹಿತ ರೈಲ್ವೆ ಕ್ರಾಸಿಂಗ್ ತೆರವು , ಮೀನುಗಾರರಿಗೆ ನೆರವು, ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರಧನ ನೀಡಿಕೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ, ಜಿಲ್ಲೆಯಲ್ಲಿ ಅತಿಹೆಚ್ಚು ಜನರಿಗೆ ಮುದ್ರಾ ಯೋಜನೆ ಸಾಲ, ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ನೀಡಿಕೆ, ಜನಧನ್ ಯೋಜನೆಯಂತಹ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ.

ಅವರ ಅಭಿವೃದ್ಧಿ ಯೋಜನೆಗಳಲ್ಲಿ , 2014-15ನೇ ಸಾಲಿನಿಂದ 2017-18ನೇ ಸಾಲಿನ  ವರೆಗೆ ಒಟ್ಟು 8075ಮಂದಿ ಫಲಾನುಭವಿಗಳಿಗೆ  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ  ನಿರ್ಮಾಣಕ್ಕೆ 81.66ಕೋ.ರೂ.ಗಳ ಅನುದಾನ ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಜನಧನ್ ಯೋಜನೆಯಡಿ 3,88,179ಖಾತೆಗಳನ್ನು ತೆರೆದು ಒಟ್ಟು 3,11,919ರೂಪೇ ಕಾರ್ಡ್ಗಳನ್ನು ವಿತರಿಸಲಾಗಿದೆ.ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 90571ಮಂದಿ ಫಲಾನುಭವಿಗಳಿಗೆ 1380.23ಕೋ.ರೂ.ಗಳ ಸಾಲ ನೆರವು ಲಭಿಸುವಂತೆ ಮಾಡಲಾಗಿದೆ.ಸ್ಟಾರ್ಟ್ಅಪ್ ಇಂಡಿಯಾದಡಿ 139ಫಲಾನುಭವಿಗಳಿಗೆ 27.63ಕೋ.ರೂ.ಸಾಲ ಲಭಿಸುವಂತಾಗಿದೆ.

ಇದೇ ರೀತಿ ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ ಯೋಜನೆಯಡಿ 1,33,254ಖಾತೆಗಳನ್ನು ತೆರೆದು 159ಮಂದಿಗೆ 3.15ಕೋ.ರೂ.ಗಳ ನೆರವು ಲಭಿಸಿದೆ. ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 3,69,747ಖಾತೆಗಳನ್ನು ತೆರೆದು ಈಗಾಗಲೇ 66ಮಂದಿಗೆ 1.28ಕೋ.ರೂ.ನೆರವು ಲಭಿಸಿದೆ.ಅಟಲ್ ಪಿಂಚಣಿ ಯೋಜನೆಯಡಿ 15,667ಖಾತೆಗಳನ್ನು ತೆರೆಯಲಾಗಿದೆ.ಸುಕನ್ಯಾ ಸಮೃದ್ಧಿ ಯೋಜನೆಯಡಿ 74,144ಖಾತೆಗಳನ್ನು ತೆರೆಯಲಾಗಿದ್ದರೆ, ಅಟಲ್ ಪಿಂಚಣಿ ಯೋಜನೆಯಿ 871ಖಾತೆಗಳು, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ 661ಮಂದಿಗೆ 28.02ಕೋ.ರೂ.ಸಹಾಯಧನ ಬಿಡುಗಡೆಯಾಗಿದೆ.ಉಜ್ವಲಾ ಯೋಜನೆಯಡಿ ..ಜಿಲ್ಲೆಯಲ್ಲಿ ವರೆಗೆ 12,792ಮಂದಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ...ಜಿಲ್ಲೆಯ 232ಗ್ರಾಮ ಪಂಚಾಯತ್ಗಳಿಗೆ ಆಪ್ಟಿಕ್ ಫೈಬರ್ ಸಂಪರ್ಕ ಕಲ್ಪಿಸಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ರಾಷ್ಟ್ರೀಯ ಉಚ್ಚತಮ ಶಿಕ್ಷಾ ಅಭಿಯಾನದಡಿ ..ಜಿಲ್ಲೆಯ ಏಳು ಕಾಲೇಜುಗಳಿಗೆ 14ಕೋ.ರೂ.ಹಾಗೂ ಮಂಗಳೂರು ವಿವಿಗೆ 20ಕೋ.ರೂ.ಗಳ ಅನುದಾನ ಬಿಡುಗಡೆಯಾಗಿದೆ.ಕೇಂದ್ರ ಸರಕಾರ ಲೀನ ಸಂಸ್ಥೆಗಳ ಸಿ.ಎಸ್.ಆರ್.ನಿಯಿಂದ ಜಿಲ್ಲೆಗೆ 25ಕೋ.ರೂ.ಗಳಿಗೂ ಅದಿಕ  ಅನುದಾನ ಲಭಿಸುವಂತೆ ಮಾಡಿದ್ದಾರೆ.

ರೈಲ್ವೆ ಇಲಾಖೆಯಿಂದ ರೈಲ್ವೆ ಮೇಲ್ಸೇತುವೆ, ಕೆಳಸೇತುವೆ , ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ 1,243ಕೋ.ರೂ., ಅನುದಾನ ಬಿಡುಗಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಕಾರದಡಿ 7,646ಕೋ.ರೂ., ..ಜಿ.ಪಂ.ಗೆ 346ಕೋ.ರೂ., ಆರೋಗ್ಯ ಕ್ಷೇತ್ರಕ್ಕೆ 22ಕೋ.ರೂ., ಶಿಕ್ಷಣ ಇಲಾಖೆಯ ಮೂಲಕ ಸರ್ವಶಿಕ್ಷಾ ಅಭಿಯಾನ,(6.28ಕೋ.ರೂ.), ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (29ಕೋ.ರೂ.), ಅಕ್ಷರ ದಾಸೋಹ(92.43ಕೋ.ರೂ.), ಉನ್ನತ ಶಿಕ್ಷಣ(34ಕೋ.ರೂ.), ನವಮಂಗಳೂರು ಬಂದರು ಅಭಿವೃದ್ಧಿಗೆ 15ಕೋ.ರೂ., ಬಂದರು ಮತ್ತು ಮೀನುಗಾರಿಕಾ ಜೆಟ್ಟಿ ಅಭಿವೃದ್ಧಿಗೆ 250ಕೋ.ರೂ., ಗ್ರಾಮೀಣ ನೀರು ಸರಬರಾಜು ಯೋಜನೆಗೆ 85ಕೋ.ರೂ., ನಗರ ನೀರು ಸರಬರಾಜಿಗೆ 40ಕೋ.ರೂ., ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 64ಕೋ.ರೂ., ಮಂಗಳೂರು ಮಹಾನಗರಪಾಲಿಕೆ(ಸ್ಮಾರ್ಟ್ ಸಿಟಿ-ಅಮೃತ್ ಯೋಜನೆ)-161.82ಕೋ.ರೂ., ನಬಾರ್ಡ್ ಮೂಲಕ 42ಕೋ.ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 24.75ಕೋ.ರೂ., ಕೃಷಿ ಮತ್ತು ತೋಟಗಾರಿಕೆಗೆ 26.32ಕೋ.ರೂ., ಪ್ರವಾಸೋದ್ಯಮ ಮತ್ತು ಬೀಚ್ ಅಭಿವೃದ್ಧಿಗೆ 33.36ಕೋ.ರೂ.,ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿಗೆ 17.50ಕೋ.ರೂ., 14ನೇ ಹಣಕಾಸು ಆಯೋಗದಡಿ ಮುನ್ಸಿಪಾಲಿಟಿಗಳಿಗೆ 41.12ಕೋ.ರೂ., ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ 296.91ಕೋ.ರೂ., ಇಂಧನ ಇಲಾಖೆ ಮೂಲಕ 40.80ಕೋ.ರೂ.,ಕೇಂದ್ರ ರಸ್ತೆ ನಿದಿಯಿಂದ 143ಕೋ.ರೂ., ರಾಷ್ಟ್ರೀಯ ಹೆದ್ದಾರಿ ಇಲಾಖೆ-ಮಂಗಳೂರು ವಿಭಾಗಕ್ಕೆ 4367ಕೋ.ರೂ., ಭಾರತೀಯ ಸಂಚಾರ ನಿಗಮಕ್ಕೆ 27.45ಕೋ.ರೂ. ಸೇರಿದಂತೆ ಒಟ್ಟು ಜಿಲ್ಲೆಗೆ 15,125ಕೋ.ರೂ.ಗಳಿಗೂ ಅಕ ಮೊತ್ತ ಬಿಡುಗಡೆಯಾಗುವಂತೆ ಮಾಡುವಲ್ಲಿ ನಳಿನ್ ದುಡಿದಿದ್ದಾರೆ.

ಪಂಪ್ವೆಲ್ ವೃತ್ತ ಮತ್ತು ಉಳ್ಳಾಲದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಮುಗಿಸುವಂತೆ ಹೆದ್ದಾರಿ ಅಭಿವೃದ್ಧಿ ಗುತ್ತಿಗೆದಾರರಿಗೆ ಅಂತಿಮ ಗಡು ನೀಡಿರುವ ನಳಿನ್ ಕುಮಾರ್ ಇದನ್ನು ಪೂರ್ಣಗೊಳಿಸಿ ನಗರದ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಪ್ರಾಮಾಣಿಕ ರಾಜಕಾರಣಿಯಾಗಿ, ಜನಸಾಮಾನ್ಯರ ಜನಪ್ರತಿನಿದಿಯಾಗಿ  ಕೆಲಸ ಮಾಡಬೇಕೆಂಬ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ನಳಿನ್ ಕುಮಾರ್ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ಯತ್ನಿಸುತ್ತಿದ್ದಾರೆ.ಈಗಾಗಲೇ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬಳ್ಪ ಎಂಬ ಕುಗ್ರಾಮವನ್ನು ಆಯ್ದುಕೊಂಡು ಅದರ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ.

ಅಲ್ಲದೆ ಮೋದಿ ಸರಕಾರದ ಭಾರತ್ ಮಾಲಾ ಯೋಜನೆಯಡಿ ಮಂಗಳೂರು-ಬೆಂಗಳೂರು ಹೈಸ್ಪೀಡ್ ಎಕ್ಸ್ಪ್ರೆಸ್ ರಾಷ್ಟ್ರೀಯ ಹೆದ್ದಾರಿ 1,18, 000ಕೋ.ರೂ.ಯೋಜನೆ ಡಿ.ಪಿ.ಆರ್.ಹಂತದಲ್ಲಿದೆ. ಸಾಗರ ಮಾಲಾ ಯೋಜನೆಯಡಿ ಮಂಗಳೂರು ಹಳೆಬಂದರು-ಬೇಂಗ್ರೆ-ತಣ್ಣೀರು ಬಾವಿ ಮೂಲಕ ನವ ಮಂಗಳೂರು ಬಂದರು ಬಳಿ ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1300ಕೋ.ರೂ.ಗಳ ಪ್ರಸ್ತಾವನೆ ಮಾಡಲಾಗಿದೆ.ಕೂಳೂರು -ಬೈಕಂಪಾಡಿ 10ಪಥ ಕಾಂಕ್ರಿಟೀಕರಣ ರಸ್ತೆ, ಪ್ಲಾಸ್ಟಿಕ್ ಪಾರ್ಕ್(500ಕೋ.ರೂ.ಪ್ರಸ್ತಾವನೆ), ಕೋಕನೆಟ್ ಪಾಕ್(1000ಕೋ.ರೂ.ಪ್ರಸ್ತಾವನೆ), ವಿಶೇಷ ಕೃಷಿ ವಲಯ ಸ್ಥಾಪನೆಗಾಗಿಯೂ ಅವರು ಶ್ರಮಿಸುತ್ತಿದ್ದು , ಸಾಮಾನ್ಯ ಜನರೊಂದಿಗೆ ಬೆರೆಯುವ ಒಬ್ಬ ಯುವ ಉತ್ಸಾಹಿ ಸಂಸದನಾಗಿ ತನ್ನ ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿರುವುದನ್ನು ಸಹಿಸದ ಅವರ ಕೆಲವು ರಾಜಕೀಯ ವಿರೋಧಿ ಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ನಲ್ಲಿ ಪೆÇೀಸ್ಟ್ ಮಾಡುವುದರ ಮೂಲಕ ಅಪಪ್ರಚಾರ ಮಾಡುವುದು ವಿಷಾದನೀಯ. ಅಂತಹವರ ವಿರುದ್ಧ ಶ್ರೀಘ್ರವೇ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಪ್ರಮುಖರಾದ ಪ್ರತಾಪಸಿಂಹ ನಾಯಕ್, ಜಿತೇಂದ್ರ ಕೊಟ್ಟಾರಿ, ಸಂತೋಷ್ ಕುಮಾರ್ ಶೆಟ್ಟಿ ಬೊಳಿಮಾರ್, ರವಿಶಂಕರ ಮೀಜಾರು, ಶಾಸಕ ಭರತ್ ಶೆಟ್ಟಿ, ದ.ಕ ಬಿಜೆಪಿ ಮಹಿಳಾಧ್ಯಕ್ಷೆ ಪೂಜಾ ಪೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Pages