ಮೀರಾ-ಭಾಯಂದರ್ ಪಾಲಿಕೆ ಸಭಾಪತಿಯಾಗಿ ಅರವಿಂದ ಶೆಟ್ಟಿ ಅಧಿಕಾರ ಸ್ವೀಕಾರ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೀರಾ-ಭಾಯಂದರ್ ಪಾಲಿಕೆ ಸಭಾಪತಿಯಾಗಿ ಅರವಿಂದ ಶೆಟ್ಟಿ ಅಧಿಕಾರ ಸ್ವೀಕಾರ

Share This
BUNTS NEWS WORLD, ಮುಂಬಯಿ: ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ನೂತನ ಸಭಾಪತಿಯಾಗಿ ಅರವಿಂದ ಎ. ಶೆಟ್ಟಿಯವರು ಮಹಾನಗರ ಪಾಲಿಕೆಯ ಮೇಯರ್ ಡಿಂಪಲ್ ಮೆಹ್ತಾ ರಿಂದ ನಗರ ಸೇವಕರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಶಾಸಕ ನರೇಂದ್ರ ಮೆಹ್ತಾ ಅವರು ನೂತನ ಕಾರ್ಯಾಲಯವನ್ನು ಉದ್ಘಾಟಿಸಿದರು. ಮಹಾನಗರ ಪಾಲಿಕೆಗೆ ಮೂವರು ಕನ್ನಡಿಗರು ಆಯ್ಕೆಯಾಗಿದ್ದು ಅವರಲ್ಲಿ ಗಣೇಶ್ ಶೆಟ್ಟಿ, ದಿಶಾ ಮೆಲ್ವಿನ್ ಡಿಸೋಜಾ ಹಾಗೂ ಅರವಿಂದ ಶೆಟ್ಟಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಅರವಿಂದ ಎ. ಶೆಟ್ಟಿಯವರನ್ನು ಅಭಿನಂದಿಸಿ ಗೌರವಿಸಿದರು.

ಮೀರಾ - ಡಹಾಣು ಬಂಟ್ಸ್ ನ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಗಂಧರ್ವ ಸುರೇಶ್ ಶೆಟ್ಟಿ, ಸಂತೋಷ್ ಪುತ್ರನ್, ಗುಣಾಪಾಲ್ ಶೆಟ್ಟಿ, ಗಣೇಶ್ ಆಳ್ವ, ಡಾ. ಭಾಸ್ಕರ ಶೆಟ್ಟಿ, ಅರುಣೋದಯ ರೈ, ಎಲಿಯಾಳ ಉದಯ ಹೆಗ್ಡೆ, ಮಹಾಬಲ ಸಮಾನಿ, ಪೆಲತ್ತೂರು ಉದಯ ಶೆಟ್ಟಿ, ಗುಣಕಾಂತ್ ಶೆಟ್ಟಿ ಮತ್ತು ಸಹೋದರ ಉಪಸ್ಥಿತರಿದ್ದರು. ವರದಿ: ಈಶ್ವರ ಎಂ ಐಲ್, ಚಿತ್ರ: ದಿನೇಶ್ ಕುಲಾಲ್

Pages