ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ : ಸಂಸದ ನಳಿನ್ ಕುಮಾರ್ ಕಟೀಲ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ : ಸಂಸದ ನಳಿನ್ ಕುಮಾರ್ ಕಟೀಲ್

Share This
ಮಂಗಳೂರು : ಪ್ರಾಥಮಿಕ ದೂರಿನ ಆಧಾರದಲ್ಲಿ ಪತ್ರಕರ್ತ ಮಹೇಶ ವಿಕ್ರಂ ಹೆಗ್ಡೆ ಅವರನ್ನು ಪೊಲೀಸರು ಬಂಧಿಸಿ ಅನಗತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ. ಹಿಂದೂಗಳ ಪರ ಧ್ವನಿ ಎತ್ತುವ ಮೂಲಕ ನ್ಯಾಯ ಒದಗಿಸಲು ಯತ್ನಿಸುತ್ತಿದ್ದ ಹೆಗ್ಡೆ ಬಂಧನದ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟವಾಗಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
mp nalin, bunts news
ಮಹೇಶ ವಿಕ್ರಂ ಹೆಗ್ಡೆ ಅವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ವಿನಾಕಾರಣ ಅವರನ್ನು ಬಂಧನದಲ್ಲಿರಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪೊಲೀಸರು ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದವರು, ಗೋಕಳ್ಳರು, ಸರ್ಕಾರಿ ಕಚೇರಿಗಳಿಗೆ ಪೊಲೀಸರ ಎದುರೇ ಕಲ್ಲು ಹೊಡೆದವರು ನಿರ್ಭೀತಿಯಿಂದ ತಿರುಗುತ್ತಿದ್ದಾರೆ. ಆದರೆ  ಹಿಂದೂ ಪರ ಕೆಲಸ ಮಾಡುವವರನ್ನು ಬಂಧಿಸಲಾಗುತ್ತಿದೆ. ಇದೇ ರೀತಿ ಅನ್ಯಾಯ ಎಸಗಿದರೆ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pages