Bunts News, ಮಂಗಳೂರು: ಕಟೀಲು ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ
ಅವರನ್ನು ಬದಲಾಯಿಸಬೇಕು ಹಾಗೂ ಈಗಾಗಲೇ ಮೇಳಕ್ಕೆ ರಾಜೀನಾಮೆ ನೀಡಿದ ಕಲಾವಿದರನ್ನು ಮೇಳಕ್ಕೆ ಸೇರಿಸಬೇಕೆಂದು
ಬಿರುವೆರ್ ಕುಡ್ಲದ ಮಾಧ್ಯಮ ವಕ್ತಾರ ನಿತೇಶ್ ಮಾರ್ನಾಡ್ ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಳಕ್ಕೆ ರಾಜೀನಾಮೆ ನೀಡಿದ ಕಲಾವಿದರು ತಮ್ಮ ತಪ್ಪನ್ನು
ತಿದ್ದಿಕೊಂಡು ಕ್ಷಮಾಪಣಾ ಪತ್ರವನ್ನು ಮೇಳದ ಯಜಮಾನರಿಗೆ ನೀಡಿದ್ದರು. ಆದರೆ ಮೇಳದ ಯಜಮಾನರಿಂದ ಯಾವುದೇ
ರೀತಿಯ ಸಮರ್ಪಕ ಉತ್ತರ ಬಂದಿಲ್ಲ. ಮೇಳದ ಬಗೆಗಿನ ಅಭಿಮಾನದಿಂದ ರಾಜೀನಾಮೆ ನೀಡಿದ ಕಲಾವಿದರಿಗೆ ಇತರ
ಮೇಳದಲ್ಲಿ ಕಾರ್ಯನಿರ್ವಹಿಸಲು ಮನಸ್ಸಿಲ್ಲ. ಹಾಗಾಗಿ ಕಟೀಲು ಮೇಳದಲ್ಲೇ ಮುಂದುವರೆಯಲು ಬಯಸಿದ್ದಾರೆ
ಎಂದಿದ್ದಾರೆ.
ಮೇಳಕ್ಕೆ ರಾಜೀನಾಮೆ
ನೀಡಿರುವ ಕಲಾವಿದರಲ್ಲಿ ಒರ್ವರಾದ ಮಾಧವ ಬಂಗೇರ ಮಾತನಾಡಿ, ನಾವು ಹಗಲಿರುಲ್ಲೆನ್ನದೆ ಮೇಳಕ್ಕಾಗಿ ದುಡಿದ್ದೇವೆ.
ಮೇಳದಲ್ಲಿ ಯಜಮಾನರ ಆಡಳಿತ ಪಾರದರ್ಶಕವಾಗಿಲ್ಲ. ನಮಗೆ ಮೇಳ ದೇವಳದ ಬಗ್ಗೆ ಅಪಾರ ಗೌರವವಿದ್ದು ಮೇಳದ
ಯಜಮಾನರ ವಿರುದ್ದ ನಮ್ಮ ಹೋರಾಟ ಎಂದು ಹೇಳಿದ್ದಾರೆ.
ಮೇಳದ ವಿಷಯದಲ್ಲಿ
ಜಾತಿ ಸಂಘಟನೆ ಸುದ್ದಿಗೋಷ್ಠಿ ನಡೆಸಿರುವ ಹಿನ್ನೆಲೆ ಯಾವುದಾರೂ ಜಾತಿಗೆ ಮೇಳದಿಂದ ತೊಂದರೆಯಾಗಿದೆಯೇ
ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿದ ಕಲಾವಿದ ಮಾಧವ ಬಂಗೇರ, ಬಿಲ್ಲವ ಕಲಾವಿದರನ್ನು ಕಡೆಗಣಿಸಲಾಗಿದೆ
ಎಂದಾಗ ಬಿರುವೇರ್ ಕುಡ್ಲದ ನಿತೇಶ್ ಮಾತನಾಡಿ ಹಾಗೇನಿಲ್ಲ ಎಲ್ಲ ಜಾತಿಯ ಪರವಾಗಿ ನಾವಿದ್ದೇವೆ ಎಂದಿದ್ದಾರೆ.