ದೇವರ ಅನುಗ್ರಹವಿದ್ದಾಗ ಸರ್ವ ಕಾರ್ಯವು ಪರಿಪೂರ್ಣವಾಗುತ್ತದೆ: ಪದ್ಮನಾಭ ಪೈಯಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದೇವರ ಅನುಗ್ರಹವಿದ್ದಾಗ ಸರ್ವ ಕಾರ್ಯವು ಪರಿಪೂರ್ಣವಾಗುತ್ತದೆ: ಪದ್ಮನಾಭ ಪೈಯಡೆ

Share This
ಬಂಟ್ಸ್ ನ್ಯೂಸ್ ವಲ್ಡ್, ಕಿನ್ನಿಗೋಳಿ: ಭಕ್ತಿ, ಅಭಿಮಾನ ಶದ್ಧೆಗಳಿಂದ ದೇವರ ಆರ್ಶಿವಾದ ಪಡೆದು ಮಾಡಿದ ಕೆಲಸಕ್ಕೆ ದೇವರು ಸಂಪೂರ್ಣ ಅನುಗ್ರಹ ನೀಡುತ್ತಾರೆ. ನಾವು ಅಂದುಕೊಂಡ ಕೆಲಸ ಪರಿಪೂರ್ಣಗೊಂಡಾಗ ದೇವರ ಅನುಗ್ರಹದ ಅರಿವಾಗುತ್ತದೆ. ಧಾರ್ಮಿಕ ಸಭೆ ಕಾರ್ಯಕ್ರಮಗಳಿಂದ ಸಮಾಜ, ದೇವಸ್ಥಾನ ಹಾಗೂ ಊರಿನ ಕಲ್ಯಾಣವಾಗುತ್ತದೆ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪೈಯಡೆ ಹೇಳಿದರು.
Mumbai bunts president padmanabha payade bapanadu
ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರಾದ ದುಗ್ಗಣ್ಣ ಸಾವಂತರು, ಎನ್.ಎಸ್. ಮನೋಹರ ಶೆಟ್ಟಿ, ಉದ್ಯಮಿ ವೇದ ಪ್ರಕಾಶ್ ಶ್ರೀಯಾನ್, ಭಾರತ್ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಅನಂತ ಪೈ, ಮುಂಬಯಿ ಉದ್ಯಮಿ ಕುಸುಮೋದರ ಡಿ ಶೆಟ್ಟಿ, ಉದ್ಯಮಿ ಮನಮೋಹನ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages