ಬಂಟ್ಸ್ ಮಜಿಬೈಲ್ ವತಿಯಿಂದ ನ್ಯಾ. ದಾಮೋದರ ಶೆಟ್ಟಿ ಮಜಿಬೈಲ್ ರವರಿಗೆ ಸನ್ಮಾನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ್ಸ್ ಮಜಿಬೈಲ್ ವತಿಯಿಂದ ನ್ಯಾ. ದಾಮೋದರ ಶೆಟ್ಟಿ ಮಜಿಬೈಲ್ ರವರಿಗೆ ಸನ್ಮಾನ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ: ಕರ್ನಾಟಕ ಸರಕಾರದ ಯಕ್ಷಗಾನ ಅಕಾಡೆಮಿ ನೂತನ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಂಟ್ಸ್ ಮಜಿಬೈಲ್ ಸಂಸ್ಥೆಯ ಮಾರ್ಗದರ್ಶಕರು,ಸಲಹೆಗಾರರು ಹಾಗೂ ಕಾಸರಗೋಡು ಜಿಲ್ಲಾ ಬಂಟ್ಸ್ ಕಾರ್ಯದರ್ಶಿ ನ್ಯಾಯವಾದಿ ದಾಮೋದರ ಶೆಟ್ಟಿ ಅವರನ್ನು ಅವರ ಮಜಿಬೈಲ್ ಸೊಯ್ಪಕಲ್ಲು ಪ್ರಕೃತಿ ನಿವಾಸದಲ್ಲಿ ಬಂಟ್ಸ್ ಮಜಿಬೈಲ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
Damodhar shetty majibail sanmana
ಈ ಸಂದರ್ಭ ಬಂಟ್ಸ್ ಮಜಿಬೈಲ್ ಅಣ್ಣಪ್ಪ ಹೆಗ್ಡೆ ಗುತ್ತಿಕಂಡ,ಆನಂದ ಆಳ್ವ ಮಾಟೆ, ಮುಂಬಯಿ ಉದ್ಯಮಿ ಸೀತಾರಾಮ ಶೆಟ್ಟಿ ಬಂಟುಹಿತ್ಲು, ಉದಯ ಕುಮಾರ್ ಶೆಟ್ಟಿ ಕರಿಬೈಲ್,ವಿಶ್ವನಾಥ ಆಳ್ವ ಕರಿಬೈಲ್, ಕಾರ್ತಿಕ್ ಶೆಟ್ಟಿ ಮಜಿಬೈಲ್, ಪ್ರದಿಪ್ ಶೆಟ್ಟಿ ಬಲ್ಲಂಗುಡೇಲ್, ಪ್ರಭಾಕರ ಶೆಟ್ಟಿ ಮಂಜಯಹಿತ್ಲು  ರಾಜರಾಮ ಆಳ್ವ ಕರಿಬೈಲ್, ಸತೀಶ್ ಶೆಟ್ಟಿ ಕರಿಬೈಲ್, ಪ್ರಭಾಕರ ಶೆಟ್ಟಿ ಪನಂಬೆ, ಸುಕುಮಾರ್ ಶೆಟ್ಟಿ ಕಂಗುಮೆ, ಶೆಟ್ಟಿ ಕುಂಬೆಹಿತ್ಲು, ಉಮೇಶ್ ಶೆಟ್ಟಿ ಕಂಗುಮೆ, ಲೊಕನಾಥ ಶೆಟ್ಟಿ , ಸುಧಾಕರ ಕುಂಬೆಹಿತ್ಲು, ಯೋಗಿಶ್ ಶೆಟ್ಟಿ ಗಾಣದಮುಲೆ, ಶ್ರೀಧರ ಶೆಟ್ಟಿ ಕೆಳಗಿನ ಹೊಸಮನೆ, ದಯಾನಂದ (ಉಮ್ಮಿ) ಶೆಟ್ಟಿ ಮಾಟೆ, ಸುಧಾಕರ ಶೆಟ್ಟಿ ಕೆದುವಾರ್ ಉಪಸ್ಥಿತರಿದ್ದರು. ಅಣ್ಣಪ್ಪ ಹೆಗ್ಡೆ ಗುತ್ತಿಕಂಡ ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ದನ್ಯವಾದವಿತ್ತರುವರದಿ: ವಿಜಯಕುಮಾರ್ ಶೆಟ್ಟಿ [www.buntsnews.com]

Pages