ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು:
ಬಂಟರ ಯಾನೆ ನಾಡವರ ಮಾತೃಸಂಘದ
98ನೇ ಸರ್ವ ಸದಸ್ಯರ ಸಭೆ
ಹಾಗೂ ಬಹಿರಂಗ ಅಧಿವೇಶನವು ಶೀಘ್ರದಲ್ಲಿ
ಜರಗಲಿದ್ದು, ಈ ಸಂದರ್ಭದಲ್ಲಿ ವಿವಿಧ
ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಗುರುತಿಸಿ
ಚಿನ್ನದ ಪದಕ, ಪ್ರಶಸ್ತಿಗಳೊಂದಿಗೆ ಸನ್ಮಾನಿಸಲಾಗುತ್ತಿದೆ.
ಉತ್ತಮ ಸಮಾಜ ಸೇವೆ, ವೈದ್ಯಕೀಯ
ಕ್ಷೇತ್ರ, ಉತ್ತಮ
ಕೃಷಿಕ, ಉತ್ತಮ ತೋಟಗಾರಿಕೆ, ಹೊಟೇಲ್ ಉದ್ಯಮದಲ್ಲಿದ್ದು
ಉತ್ತಮ ಸಮಾಜ
ಸೇವೆ, ಉತ್ತಮ ಕೈಗಾರಿಕೋದ್ಯಮಿ, ಉತ್ತಮ
ಕ್ರೀಡಾಪಟು, ಉತ್ತಮ ಸಮಾಜ ಸೇವೆ, ಕಲಾಕ್ಷೇತ್ರ,
ಉತ್ತಮ ಶಿಕ್ಷಕ, ಧಾರ್ಮಿಕ,
ಸಮಾಜ ಕಲ್ಯಾಣ, ಸಾಂಸ್ಕøತಿಕ,
ಶೌರ್ಯ, ಸಂಶೋಧನೆ, ದೇಶಸೇವೆ ಹಾಗೂ
ಇತರ ಯಾವುದೇ ಕ್ಷೇತ್ರದಲ್ಲಿ ವಿಶೇಷ ಸಾಧನೆ,
ಸೇವೆ ಈ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆಗೈದವರಿಗೆ
ಚಿನ್ನದ ಪದಕ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುವುದು.
ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರ
ಮಾಹಿತಿ, ಪರಿಚಯವನ್ನು ಅವರ ಸಂಪೂರ್ಣ ವಿವರಗಳನ್ನು ಕಾರ್ಯಕಾರಿ
ಸಮಿತಿ ಸದಸ್ಯರ ಶಿಫಾರಸ್ಸಿನೊಂದಿಗೆ 7 ದಿವಸದೊಳಗೆ
ಮಾತೃಸಂಘಕ್ಕೆ ಕಳುಹಿಸಿಕೊಡಬೇಕೆಂದು ಬಂಟರ ಯಾನೆ ನಾಡವರ
ಮಾತೃ ಸಂಘದ ಪ್ರದಾನ ಕಾರ್ಯದರ್ಶಿ
ವಸಂತ ಶೆಟ್ಟಿ ತಿಳಿಸಿದ್ದಾರೆ.