ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಮೂಲ್ಕಿ
ವಿಜಯ ಕಾಲೇಜು ಅಧ್ಯಕ್ಷೆ ಶಮೀನ ಆಳ್ವ ಅವರು “ಕರ್ಣಾಟ ನಾಡಪೋಷಕಿ ಪ್ರಶಸ್ತಿ ಪಡೆದಿದ್ದಾರೆ.
ನಮ್ಮ ತುಳುವೆರ್ ಕಲಾಸಂಘಟನೆ
ನಾಟ್ಕದೂರು ಮುದ್ರಾಡಿನಲ್ಲಿ ನಡೆದ ಏಣಗಿ ಬಾಳಪ್ಪ ಸ್ಮಾರಕ ಅಖಿಲ ಭಾರತ ರಂಗೋತ್ಸವದಲ್ಲಿ ಮುದ್ರಾಡಿ
ಶ್ರೀ ಆದಿಶಕ್ತಿ ನಂದಿಕೇಶ್ವರ ದೇವಳದ ಧರ್ಮದರ್ಶಿ ಶ್ರೀ ಶ್ರಿ ಧರ್ಮಯೋಗಿ ಮೋಹನ ಅವರು ಶಮೀನ ಆಳ್ವರಿಗೆ
ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಸಮಾಜ ಸೇವೆಗಾಗಿ ಹಲವಾರು ಸಂಘಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು
ಪಡೆದಿರುವ ಶಮೀನ ಆಳ್ವರ ಸಾಧಾನೆಯು ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದು ಅವರ ಸಮಾಜಮುಖಿ ಕಾರ್ಯಗಳು
ಇನ್ನಷ್ಟು ಉತ್ತಮ ರೀತಿಯಲ್ಲಿ ಸಾಗಲೆಂದು ಶುಭ ಹಾರೈಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ
ಮಂಜುನಾಥ, ಪತ್ರಕರ್ತ ಮಾರುತಿ ಬಡಿಗೇರ್ ರಾಯಾಚೂರು, ಕರ್ನಾಟಕ ತುಳು ಅಕಾಡೆಮಿ ಸದಸ್ಯ ಪುರುಷೋತ್ತಮ
ಚೇಂಡ್ಲ, ಡಾ.ರಾಜೇಶ್ ಆಳ್ವ ಬದಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಶಮೀನ ಆಳ್ವ ಅವರು ಈ ಹಿಂದೆಯಷ್ಟೇ
ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.