ಜಗನ್ನಾಥ ಶೆಟ್ಟಿ ಬಾಳ ಅವರ “ತುಳು ಸಿನಿಮಾವಲೋಕನ” ಪುಸ್ತಕ ನ.5ಕ್ಕೆ ಲೋಕಾರ್ಪಣೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಗನ್ನಾಥ ಶೆಟ್ಟಿ ಬಾಳ ಅವರ “ತುಳು ಸಿನಿಮಾವಲೋಕನ” ಪುಸ್ತಕ ನ.5ಕ್ಕೆ ಲೋಕಾರ್ಪಣೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು:.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರತುಳು ಸಿನಿಮಾವಲೋಕನತುಳು ಸಿನಿಮಾರಂಗದ ಸಮಗ್ರ ಮಾಹಿತಿ ನೀಡುವ ಪುಸ್ತಕವು ನ.5 ರಂದು ಬಿಡುಗಡೆಗೊಳ್ಳಲಿದೆ.
ಪುಸ್ತಕದಲ್ಲಿ 1971ರಲ್ಲಿ ನಿರ್ಮಾಣವಾದ ಮೊದಲ ತುಳು ಸಿನಿಮಾ ಎಸ್ ಆರ್ ರಾಜನ್ ನಿರ್ದೇಶನದ ಎನ್ನತಂಗಡಿಯಿಂದ ಆರಂಭಿಸಿ ನವೆಂಬರ್ನಲ್ಲಿ ತೆರೆಕಾಣಲಿರುವ ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ ನಿರ್ಮಾಣದ ಅಂಬರ್ ಕ್ಯಾಟರರ್ಸ್ವರೆಗಿನ 86 ತುಳು ಸಿನಿಮಾಗಳ ಕುರಿತ ಮಾಹಿತಿ ಇದೆ. ನಟ-ನಟಿಯರು, ಸಿನಿಮಾ ನಿರ್ಮಾಣ, ತಂತ್ರಜ್ಞಾನಗಳ ಮಾಹಿತಿಯೂ ಇದರಲ್ಲಿ ಇದೆ.

.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಎರಡು ವರ್ಷಗಳ ಕಾಲ ಶ್ರಮ ವಹಿಸಿ ತುಳು ಚಿತ್ರರಂಗದ ಇತಿಹಾಸವನ್ನು ತೆರೆದಿಡುವತುಳು ಸಿನಿಮಾವಲೋಕನಪುಸ್ತಕ ಸಿದ್ಧಪಡಿಸಿದ್ದಾರೆ. 200 ಪುಟಗಳ ಪುಸ್ತಕಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಲು ಜಗನ್ನಾಥ ಶೆಟ್ಟಿ ಬಾಳ ಹಿರಿಯ ತಲೆಮಾರಿನ ಕಲಾವಿದರು ಮತ್ತು ಚಿತ್ರ ನಿರ್ಮಾಪಕರನ್ನು, ನಿರ್ದೇಶಕರನ್ನು, ತಂತ್ರಜ್ಞರನ್ನು ಭೇಟಿಯಾಗಿದ್ದಾರೆ. ಹಳೆಯ ಫೆÇೀಟೋಗಳನು ಸಂಗ್ರಹಿಸಿದ್ದು ಅದನ್ನು ಓದುಗರಿಗಾಗಿ ಕೊಡುತ್ತಿದ್ದಾರೆ.

ಇದರಲ್ಲಿ ಕೇವಲ ಹಳೆಯ ಸಿನಿಮಾಗಳ ವಿಷಯ ಮಾತ್ರವಲ್ಲ ಹೊಸ ತಲೆಮಾರಿನ ಮಾಹಿತಿಯೂ ಇದೆ. ಚಿತ್ರ ನಿರ್ಮಾಪಕರ ಬವಣೆ, ಥೇಟರ್ಗಳ ಸಮಸ್ಯೆ, ಮಲ್ಪಿಪ್ಲೆಕ್ಸ್ ಥೇಟರ್ಗಳ ಅನ್ಯಾಯದ ಮಾಹಿತಿಯೂ ಇದೆ. ಜೊತೆಗೆ ತಮ್ಮ ಲಕ್ಷ್ಮಣ, ವಿ.ಜಿ.ಪಾಲ್, ಪದ್ಮನಾಭ ರೈ ಪುತ್ತಿಗೆ, ದಿನೇಶ್ ಇರಾರವರು ಸಿನಿಮಾ ಕುರಿತು ಬರೆದ ಲೇಖನಗಳೂ ಇವೆಖ್ಯಾತ ವ್ಯಂಗ್ಯ ಚಿತ್ರಕಾರರಾದ ಪ್ರಕಾಶ್ ಶೆಟ್ಟಿ , ಪಿ.ಮಹಮ್ಮದ್, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಬಿ.ಗಣಪತಿ, ಬಿ.ಎಂ.ಹನೀಫ್, ಡಾ. ಎಚ್. ನಾಗವೇಣಿ, ಕದ್ರಿ ನವನೀತ್ ಶೆಟ್ಟಿ, ಪರಮಾನಂದ ಸಾಲ್ಯಾನ್ ಮೊದಲಾದವರ ಶುಭಾಶಯದ ನುಡಿಗಳೂ ಪುಸ್ತಕದಲ್ಲಿದೆ. ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಇದು ಇತಿಹಾಸ ದಾಖಲಿಸುವ ಪುಸ್ತಕ. ಮನೋರಂಜನೆ ನೀಡುವ ಹೊತ್ತಿಗೆಯಾಗಿ ಬರುತ್ತಿದೆ.

ತುಳು ಸಿನಿಮಾ ಅವಲೋಕನ ಪುಸ್ತಕದ ಬಿಡುಗಡೆ ಸಮಾರಂಭ ನವೆಂಬರ್ 5ರಂದು ಭಾನುವಾರ ಸಂಜೆ 3:30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಾಹಿತ್ಯಿಕ-ಸಾಂಸ್ಕøತಿಕ ರಂಗಚಾವಡಿ ಸಂಘಟನೆಯ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದರಿಗೆರಂಗ ಚಾವಡಿಪ್ರಶಸ್ತಿ ನೀಡಿ ಗೌರವಿಸ ಲಾಗುತ್ತದೆ. ಡಾ.ಮೋಹನ್ ಆಳ್ವಾರವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇದರ ಅಧ್ಯಕ್ಷರಾದ ಎನ್.ರಾಜು ಉದ್ಘಾಟಿಸಲಿ ದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ರಾಮ್ ಶೆಟ್ಟಿ ಮುಂಬೈ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

Pages