ಬಂಟ್ಸ್ ನ್ಯೂಸ್, ಹೈದರಾಬಾದ್: ಬಂಟ್ಸ್ ಸಂಘ ಹೈದರಾಬಾದ್’ನಲ್ಲಿ ‘ವಿಶ್ವ ಬಂಟ ದಿನಾಚರಣೆ’
ಸಂಭ್ರಮವು ಏ.15ಕ್ಕೆ ನಡೆಯಲಿದೆ.
ಹೈದರಾಬಾದಿನ ಹೊಟೇಲ್
ಆಬೋಡ್ ಲಕ್ಡಿಕಪುಲ್’ನಲ್ಲಿ [Hotel Abode, Lakdikapul, Hyderabad] ಸಂಜೆ 5ರಿಂದ 10ರವರೆಗೆ
ವಿಶ್ವ ಬಂಟ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್.ಚಂದ್ರಶೇಖರ್
ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಟಿಎಸ್ ಗ್ರೂಪ್ ಆಡಳಿತ ನಿರ್ದೇಶಕ,
ಕತಾರ್ ಬಂಟರ ಸಂಘದ ಸಂಸ್ಥಾಪಕ ಅಧ್ಯಕ್ಷ, ಕತಾರ್ ತುಳುಕೂಟ ಅಧ್ಯಕ್ಷ, ಕುಕ್ಕಿನಡ್ಕ ಶ್ರೀ ಸುಬ್ರಾಯ
ದೇವಸ್ಥಾನದ ಆಡಳಿತ ಮೋಕ್ತೆಸರರಾಗಿರುವ ರವಿ ಶೆಟ್ಟಿ ಮೂಡಂಬೈಲು ಭಾಗವಹಿಸಲಿದ್ದಾರೆ.