ಬಂಟ್ಸ್ ನ್ಯೂಸ್.ಕಾಂ, ಕುಂದಾಪುರ: 24 ವರ್ಷಗಳಿಂದ ಹಾಸಿಗೆಯಲ್ಲೇ ಇರುವ ಕಾರ್ವಾಡಿಯ
ಜಯರಾಮ ಶೆಟ್ಟಿ ಅವರಿಗೆ ಬಂಟರ ಸಂಘ ಬೆಂಗಳೂರು ನೆರವು ನೀಡಿದೆ.
ಬೆಂಗಳೂರು ಬಂಟರ
ಸಂಘದ ಕಾರ್ಯಕಾರಿ ಸಮಿತಿಯ ಸದಸ್ಸರು ಜಯರಾಮ್ ಶೆಟ್ಟಿ ಅವರ ಮನೆಗೆ ಭೇಟಿ ಮಾಡಿ ರೂ.55,000 ನೆರವಿನ
ಚೆಕ್ ನೀಡಿದರು. ಈ ಸಂದರ್ಭ ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಜಪ್ತಿ ಸಂತೋಷ ಕುಮಾರ್ ಶೆಟ್ಟಿ,
ಖಜಾಂಚಿ ಆನಂದರಾಮ್ ಶೆಟ್ಟಿ, ಸಮಾಜ ಸೇವಾ ವಿಭಾಗ ಅಧ್ಯಕ್ಷ ರಾಧಾಕೃಷ್ಣ, ವೈದ್ಯಕೀಯ ವಿಭಾಗ ಅಧ್ಯಕ್ಷ
ಡಾ.ಜಗದೀಶ ಶೆಟ್ಟಿ ಹಾಗೂ ಯುವ ವೇದಿಕೆ ಅಧ್ಯಕ್ಷ ಪ್ರೇಮ್’ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ವಾಡಿ ಜಯರಾಮ
ಶೆಟ್ಟಿ ಅವರು 24 ವರ್ಷ ಹಿಂದೆ ರೈಲ್ವೇ ಸುರಂಗದಲ್ಲಿ ನಡೆದ ಅವಘಾಡದಿಂದಾಗಿ ಹಾಸಿಗೆ ಹಿಡಿದಿದ್ದಾರೆ.
-------------------------------------------------------------------------------------------------