ದಕ್ಷಿಣ
ಕನ್ನಡ ಜಿಲ್ಲೆಯ ದಕ್ಕಣದ ಕೊನೆಯಲ್ಲಿರುವ ‘ತಲಪಾಡಿ ದೊಡ್ಡಮನೆ’ಯು ಬಂಟಸಮುದಾಯದ ಪ್ರಾಚೀನ ,ಪ್ರತಿಷ್ಟಿತ,
ಮನೆತನಗಳಲ್ಲಿ ಒಂದಾಗಿದೆ, ಸುಮಾರು ಒಂದು ಸಾವಿರಕ್ಕಿಂತಲೂ ಪ್ರಾಚೀನ ಇತಿಹಾಸ ಹೊಂದಿರುವ ಈ ಮನೆತನವು
ಹಿಂದೆ ಸಾರ್ವಜನಿಕ, ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಹೊಂದಿತ್ತು,ಎಂಬುದು ಇದೀಗ
ಐತಿಹ್ಯ .. ಈ ಮನೆಯು ತುಳುನಾಡಿನ ಸುಪ್ರಸಿಧ್ಧ ದೈವಗಳ ನೆಲೆಬೀಡಾಗಿದೆ.. ಇಲ್ಲಿನ ಧರ್ಮಚಾವಡಿಯಲ್ಲಿ
ಅರಸು ದೈವಗಳಾದ "" ಶ್ರೀ ಅರಸು ಮಂಜಿಷ್ಣಾರ್ "" ಮತ್ತು ರಾಜಂದೈವಗಳಾದ ಶ್ರೀ
ಮಲರಾಯ, ಧೂಮಾವತಿ - ಬಂಟ ದೈವಗಳ ಪವಿತ್ರ " ಉಜ್ಜಾಲ್ "( ಉಯ್ಯಾಲೆ )ಇದೆ.
ಶ್ರೀ
ಅರಸು ಮಂಜಿಷ್ಣಾರ್ ದೈವಗಳ ಉಜ್ಜಾಲ್ ( ಉಯ್ಯಾಲೆ )ಯಲ್ಲಿ ಬಲು ಅಪರೂಪದ ಪ್ರಾಚೀನ ತಾಳೆಗರಿ ಗ್ರಂಥಗಳ
ಕಟ್ಟು ಇದೆ,,,ಮನೆಯ ಅಂಗಳದ ಮಧ್ಯದಲ್ಲಿ ಬೇರೆಲ್ಲೂ ಸಾಮಾನ್ಯವಾಗಿ ಕಾಣಸಿಗದ ,ಶಿವನ ಸಾನಿಧ್ಯವನ್ನು
ಹೊಂದಿರುವ ಕಟ್ಟೆಯಲ್ಲಿ ಬಿಲ್ವಪತ್ರ ವ್ರಕ್ಷವಿದೆ.. ಹಾಗೂ ಪಶ್ಚಿಮೋತ್ತರ ದಿಕ್ಕಿನಲ್ಲಿ ಶ್ರೀ ಮೈಸಂದಾಯ
ದೈವದ ಪವಿತ್ರ ಉಜ್ಜಾಲ್ ಹೊಂದಿರುವ ಗುಡಿ ಇದೆ.. ಮನೆಯ ಸಮೀಪದಲ್ಲಿ ಶ್ರೀ ಕೋರ್ದಬ್ಬು ದೈವದ ಸ್ಥಾನ,
ಹಾಗೂ ಇತರ ಪರಿವಾರ ದೈವಗಳಿಗೆ ನೆಲೆವೀಡಾದ ಈ ಮನೆಯು ಪವಿತ್ರ ಕ್ಷೇತ್ರವೆಂದರೆ ಅತಿಶಯೋಕ್ತಿಯಾಗಲಾರದು..ಈ ಮನೆತನದವರು ಪೂಜಿಸಿಕೊಂಡು ಬಂದಂತಹ ನಾಗಾಲಯ,, ಪಂಚದೈವ ಸಾನಿಧ್ಯವು ರಾಜಮಾರ್ಗ 17ರ ಬಳಿಯಲ್ಲಿದೆ.. ಸುಮಾರು ಹದಿನಾರು ವರ್ಷಗಳ ಹಿಂದೆ ಇಲ್ಲಿ ನಾಗಮಂಡಲೋತ್ಸವವು ಬಹಳ ಅಭೂತಪೂರ್ವವಾಗಿ ಜರಗಿದೆ..
ಪರಂಪರೆಯ
ಹೇಳಿಕೆಯಂತೆ,, ತಲಪಾಡಿ ದೊಡ್ಡಮನೆಯ ಕುಟುಂಬಿಕರು ಮೂಲತಃ " ಶಿರ್ವದ ನಡಿಬೆಟ್ಟು" ಕುಟುಂಬಕ್ಕೆ
ಸೇರಿದವರಾಗಿದ್ದು,, ಹಾಗೂ ಯಾವುದೋ ಮನಸ್ತಾಪದ ಕಾರಣದಿಂದ ಅಲ್ಲಿಂದ ಕೋರ್ದಬ್ಬು ದೈವ ಹಾಗೂ ಕೆಲವು
ಪರಿಚಾರಕ ವರ್ಗದವರೊಂದಿಗೆ ದಕ್ಷಿಣಾಭಿಮುಖವಾಗಿ ಇಳಿದು ಬಂದು ಈ ತಲಪಾಡಿಯ ಭೂಮಿಯಲ್ಲಿ ತಮ್ಮ ಸ್ಥಾನವನ್ನು
ಕಂಡುಕೊಂಡು ಇಲ್ಲೇ ನೆಲೆಯೂರಿದರು ಎಂಬುದು ಐತಿಹ್ಯ.
ತಲಪಾಡಿ
ದೊಡ್ಡಮನೆಯ ಇನ್ನೊಂದು ಕವಲು " ತಾಳಿಪಾಡಿ ಗುತ್ತು " ( ಕಿನ್ನಿಗೋಳಿ )ಯಲ್ಲಿ ನೆಲೆ ನಿಂತಿದೆ...
ಮಹಾ
ಪರಂಪರೆಯ ಇ ಮಹಾಮನೆಯ ಹೆಸರು ಕೂಡ ಬಹಳ ಅರ್ಥಗರ್ಭಿತವಾದದ್ದು. "
ತಲ " ಎಂದರೆ ತುಳು ಭಾಷೆಯಲ್ಲಿ " ಅಡಿಪಾಯ " ಎಂದು ಅರ್ಥ,, " ಪಾಡಿನಿ
"ಎಂದರೆ "ಹಾಕಿದ್ದು,, " ಹಾಗಾಗಿ ಬ್ರಹತಾದ " ತಲ "(ಅಡಿಪಾಯ)ವನ್ನು
" ಪಾಡಿನಿ "( ಹಾಕಿದ್ದರಿಂದ ), ~ ತಲಪಾಡಿ ಎಂದು ಹೆಸರಾಯಿತು,, ( ಬ್ರಹತಾದ ಮಹಾಮನೆ
)ಯು ತುಳುಭಾಷೆಯಲ್ಲಿ (ನೇಲ್ಯ ಇಲ್ಲ್, )ಎಂದೂ,, ಒಟ್ಟಾರೆ ತುಳುಭಾಷೆಯಲ್ಲಿ "" ತಲಪಾಡಿ
ನೇಲ್ಯಇಲ್ಲ್ "" ( ತಲಪಾಡಿ ದೊಡ್ಡಮನೆ ) ಎಂದು ಕರೆಯುತ್ತಾರೆ.
ಕೇರಳದ
,ಮಂಜೇಶ್ವರ, ಕುಂಜತ್ತೂರಿನ ಉದ್ಯಾವರದ ಶ್ರೀ ಅರಸು ಮಂಜಿಷ್ಣಾರ್ ದೈವಗಳಿಗೂ ಈ ತಲಪಾಡಿ ದೊಡ್ಡಮನೆಗೂ
ಬಹಳ ನಿಕಟವಾದ ಸಂಬಂಧವಿದೆ..ಉದ್ಯಾವರ ಶ್ರೀ ಅರಸುಮಂಜಿಷ್ಣಾರ್ ದೈವಗಳ ಸಾನಿಧ್ಯ ಮಾಡದ ಕ್ಷೇತ್ರದಲ್ಲಿ
ಇರುವ ಪವಿತ್ರ ಪುಷ್ಕರಣಿ ( ತೀರ್ಥಕೆರೆ )ಯನ್ನು ತಲಪಾಡಿ ದೊಡ್ಡಮನೆಯ ಕುಟುಂಬಿಕರು ಕಟ್ಟಿಸಿಕೊಟ್ಟದ್ದು
ಎಂಬುದು ಐತಿಹ್ಯ,, ಕೆರೆಕಟ್ಟೆ ದೀಪಾರಾಧನೆ ಸೇವೆ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಗಳ
ಸಾನಿಧ್ಯದಲ್ಲಿ ನಡೆಯುತ್ತದೆ,, ತಲಪಾಡಿ ದೊಡ್ಡಮನೆಗೆ "ಕಿಲ್ಲ,, ಕಿಲ್ಲಂಬಾಲ್ ಸಂಸಾರ"
ಎಂಬ ಲೆಪ್ಪು ಉದ್ಯಾವರದ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದಲ್ಲಿ ಇದೆ.
ಶ್ರೀ
ತಲಪಾಡಿ ದೇವಿಪುರ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೂ ಇ ತಲಪಾಡಿ ದೊಡ್ಡಮನೆಗೂ ಸಂಬಂಧವಿದೆ...ಹಾಗೂ
ಅಲಂಕಾರು ಗುಡ್ಡೆ ಶ್ರೀ ಮಲರಾಯ,, ಧೂಮಾವತಿ,ಬಂಟ ದೈವಗಳ ದೈವಸ್ಥಾನಕ್ಕೂ ಇ ಮಹಾಮನೆಗೂ ನಿಕಟವಾದ ಸಂಪರ್ಕವಿದೆ.
ಆ
ಉದ್ಯಾವರ ಮಾಡದ ಹಾಗೂ ಅಲಂಕಾರು ಗುಡ್ಡೆಯ ಧರ್ಮದೈವಗಳು ತಲಪಾಡಿ ದೊಡ್ಡಮನೆಯ ಧರ್ಮಚಾವಡಿಯಲ್ಲಿ ಪಟ್ಟದ
ದೈವಗಳಾಗಿವೆ,,,ಕಾಲದ ಹೊಡೆತಗಳಿಂದ ಅರ್ಜೀರ್ಣಾವಸ್ಥೆಯಲ್ಲಿ ಇದ್ದ ತಲಪಾಡಿ ದೊಡ್ಡಮನೆಯು ಪ್ರಕ್ರತ
ಇತ್ತೀಚಿಗೆ ಕುಟುಂಬಿಕರ, ಬಂಧು-ಬಾಂದವರ,, ಒಗಟ್ಟಿನ ಮನೋಸಂಕಲ್ಪದ ಬಲದಿಂದ ಪುನರುಜ್ಜೀವನಗೊಂಡು ತನ್ನ
ಮೂಲ ಕಲಾಶ್ರೀಮಂತಿಕೆ,, ಘನಸ್ತಿಕೆಯನ್ನು ಉಳಿಸಿಕೊಂಡು ನವವಧುವಿನಂತೆ ಮೈತಳೆದು ಶೋಭಿಸುತ್ತಿದೆ.
ಈ
ಮಹಾಮನೆಯ ಕುಟುಂಬಿಕರೂ ಆಧುನಿಕವಾಗಿ,, ಧಾರ್ಮಿಕವಾಗಿ,, ಶೈಕ್ಷಣಿಕವಾಗಿ,ರಾಜಕೀಯವಾಗಿ,,, ವಿವಿಧ ರಂಗಗಳಲ್ಲಿ
ತಮ್ಮ ಛಾಪನ್ನು ತೋರಿಸಿ ತಲಪಾಡಿ ದೊಡ್ಡಮನೆಯ ಕೀರ್ತಿಯ ಪತಾಕೆಯನ್ನು ವಿಶ್ವಮಟ್ಟಕ್ಕೆ ಹಾರಿಸಿದ್ದಾರೆ,
ಶ್ರೀಯುತ ದಿ| ಐತಪ್ಪ ರೈಗಳು ತಲಪಾಡಿ ದೊಡ್ಡಮನೆ,ಇವರು ಎಲ್ಲಾ ರಂಗದಲ್ಲಿ ಬಹಳ,ಮುತ್ಸದ್ಧಿ ವ್ಯಕ್ತಿ
ಎಂಬ,ಕೀರ್ತಿಯನ್ನು ಪಡೆದವರು, ಇವರು ಮಿಜಾರ್ ಗುತ್ತು ಶ್ರೀಯುತ ಆನಂದ ಆಳ್ವರ ಒಡನಾಡಿಗಳು( ಶ್ರೀಯುತ
ಮಿಜಾರ್ ಗುತ್ತು ಆನಂದ ಆಳ್ವರು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಮೋಹನ್ ಆಳ್ವರ
ತಂದೆ) ಈ
ಮಹಾಮನೆಯ ಕುಟುಂಬಿಕರೂ ವಿಶ್ವವ್ಯಾಪಿಗಳಾಗಿದ್ದರೂ ಕುಟುಂಬದ ಮೂಲಸೆಲೆಯನ್ನು ಬಿಟ್ಟಿಲ್ಲ ಎಂಬುದೂ ವಿಶೇಷ,,
ಇದೆಲ್ಲಾ ತಲಪಾಡಿ ದೊಡ್ಡಮನೆಯ ಮಣ್ಣಿನ ಮಹಿಮೆ,, ಧರ್ಮದೈವಗಳ ಚಿತ್ತ,, ಪೂರ್ವ ಹಿರಿಯರ ಧರ್ಮಕಾರ್ಯಗಳ
ಫಲ,, ಎಂದೇ ಹೇಳಬಹುದು,ನಾನೂ ಈ ಮಹಾಮನೆ ತಲಪಾಡಿ ದೊಡ್ಡಮನೆಯ ಕುಟುಂಬಕ್ಕೆ ಸೇರಿದವನು ಎಂದು ಹೇಳಲು
ನನಗೂ ಹೆಮ್ಮೆ.
ಆಧುನಿಕತೆಯ
ಮಹಾವೇಗಕ್ಕೆ ಎದೆಕೊಟ್ಟು,, ಮೂಲ ಪರಂಪರೆಯ ಕಟ್ಟುಪಾಡುಗಳಿಗೆ ಚ್ಯುತಿ ಬರದಂತೆ ,, ಈ ಮಹಾಮನೆಯ ಎಲ್ಲಾ
ಕಾರ್ಯಭಾಗಗಳು ನಡೆಯುತ್ತಿರುವುದು ಸಂತೋಷದ ವಿಚಾರ,, ಬಂಟ ಸಮುದಾಯದ ಮಹಾಮನೆಗಳಲ್ಲಿ ಮುಕುಟಮಣಿಯಂತಿರುವ
ಈ ತಲಪಾಡಿ ದೊಡ್ಡಮನೆಯು ವಿಸ್ಮಯ,, ಕುತೂಹಲ,, ಐತಿಹ್ಯ, ಸ್ಫೂರ್ತಿಯ ಆಗರ. ಈ
ಹಿಂದಿನ ಗತಪರಂಪರೆಯಂತೆ, ಇನ್ನೂ ಮುಂದೆಯೂ ತನ್ನ ಪ್ರಭಾವದಿಂದ ಸಮಾಜದ ಐಕ್ಯತೆಗೆ,, ಶ್ರೇಯೋಭಿವ್ರಧ್ದಿಗೆ,,ಕೊಡುಗೆಗಳನ್ನು
ಈ ಮಹಾಮನೆಯೂ ನೀಡಲಿ,, ಧರ್ಮದೈವಗಳ ಕಟ್ಟುಪಾಡುಗಳು ಸುಸೂತ್ರವಾಗಿ ನಡೆಯಲಿ,,ಕುಟುಂಬ ಐಕ್ಯತೆ ಉಳಿಯಲಿ,,ತಲಪಾಡಿ
ದೊಡ್ಡಮನೆಯ ಕೀರ್ತಿ ಘನಸ್ತಿಕೆ ವಿಶ್ವಮಾನ್ಯವಾಗಲಿ ಎಂಬುದೇ ನನ್ನ ಅಭಿಲಾಷೆ......
ಲೇಖಕರು: ಅಭಿಲಾಷ್-ಚೌಟ, ಕೊಡಿಪಾಡಿಬಾಳಿಕೆ,,
ಸುರತ್ಕಲ್