ಬ್ರೆಜಿಲ್ ರಿಯೊ ಒಲಿಂಪಿಕ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಶ್ವಿನಿ ಅಕ್ಕುಂಜೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬ್ರೆಜಿಲ್ ರಿಯೊ ಒಲಿಂಪಿಕ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಶ್ವಿನಿ ಅಕ್ಕುಂಜೆ

Share This
BUNTSNEWS, ಉಡುಪಿ: ಬ್ರೆಜಿಲ್’ನಲ್ಲಿ ನಡೆಯುತ್ತಿರುವ ‘ರಿಯೊ ಒಲಿಂಪಿಕ್ಸ್’ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಲ್ಲಿ ಅಶ್ವಿನಿ ಚಿದಾನಂದ ಶೆಟ್ಟಿ ಅಕ್ಕುಂಜೆ ಒಬ್ಬರಾಗಿದ್ದಾರೆ.
ರಿಯೊ ಒಲಿಂಪಿಕ್ಸ್’ನ 4x400 ಮಹಿಳಾ ರಿಲೆ ಸ್ಪರ್ಧೆಯಲ್ಲಿ ಅಶ್ವಿನಿ ಅಕ್ಕುಂಜೆ ಭಾಗವಹಿಸಲಿದ್ದಾರೆ. ಇವರ ತಂಡದಲ್ಲಿ ಕರ್ನಾಟಕದ ಎಮ್.ಆರ್.ಪೂವಮ್ಮ ಸೇರಿ ಒಟ್ಟು 6 ಮಹಿಳಾ ಕ್ರೀಡಾಪಟುಗಳಿದ್ದಾರೆ. ಅಶ್ವಿನಿ ಅವರು 2010ರಲ್ಲಿ ನಡೆದ ಕಾಮನ್ ವೆಲ್ತ್ ಹಾಗೂ ಏಷ್ಯಾನ್ ಗೇಮ್ಸ್’ನಲ್ಲಿ 4x400 ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದರು. ಅಶ್ವಿನಿಯವರ ಸಾಧನೆಗೆ 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅನೇಕ ಸನ್ಮಾನಗಳು ಲಭಿಸಿದ್ದವು.

ಅಶ್ವಿನಿ ಅವರ ತಂಡ ರಿಲೆ ಸ್ಪರ್ಧೆಯಲ್ಲಿ ಜಯಗಳಿಸಿ ನಮ್ಮ ದೇಶಕ್ಕೆ ಒಲಿಂಪಿಕ್ಸ್’ನಲ್ಲಿ ಮತ್ತಷ್ಟು ಕೀರ್ತಿ ತರಲೆಂದು ಹಾರೈಸೋಣ.

Pages