ಕೋಡಿಕಲ್ : ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ನ 34ನೇ ವಾರ್ಷಿಕೋತ್ಸವ ಹಾಗೂ ಶಿವದೂತೆ ಗುಳಿಗೆ ನಾಟಕದ 200ನೇ ಪ್ರದರ್ಶನ ಆಲಗುಡ್ಡೆ ಮೈದಾನದಲ್ಲಿ ನಡೆಯಿತು.
ಸತೀಶ್ ಬಂದಲೆ ಅವರು ದೀಪ ಬೆಳಗಿಸಿಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಚಿನ್ನ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಮಾಜಿ ಯೋಧರಾದ ರಾಜೇಶ್ ಶ್ರೀಯಾನ್, ಸೀತಾರಾಮ ಹವಾಲ್ದಾರ್, ಕ್ರೀಡಾ ಪಟು ಸುಕೀರ್ತಿ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಶಿವದೂತೆ ಗುಳಿಗೆ ನಾಟಕದ ಕಲಾವಿದರಿಗೆ, ತಂತ್ರಜ್ಞರಿಗೆ ಹಾಗೂ ಕಂಠದಾನ ನೀಡಿದ ಕಲಾವಿದರನ್ನು ಸೇರಿದಂತೆ ಸುಮಾರು 100 ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಗುರುಕಿರಣ್, ನವೀನ್ ಡಿ.ಪಡೀಲ್, ರಾಜೇಂದ್ರ ಸಿಂಗ್ ಬಾಬು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಾಜಿ ಶಾಸಕ ಮೋಹಿದ್ದಿನ್ ಬಾವ, ಚಿತ್ರ ನಿರ್ಮಾಪಕ ಅರುಣ್ ರೈ ತೋಡಾರ್, ಮನಪಾ ಸದಸ್ಯ ಕಿರಣ್ ಕುಮಾರ್, ಉಮೇಶ್ ದಂಡಕೇರಿ, ಪ್ರವೀಣ್ ಕುಮಾರ್ ಶೆಟ್ಟಿ, ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಹರೀಶ್ ಕುಮಾರ್ ಉಪಾಧ್ಯಕ್ಷ ರಾಜೇಶ್ ಕುಡ್ಲ ಪ್ರಧಾನ ಕಾರ್ಯದರ್ಶಿ ಸುಜನ್ ಕುಮಾರ್ ಉಪಸ್ಥಿತರಿದ್ದರು. ರಾಕೇಶ್ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿ ಧನ್ಯವಾದ ಗೈದರು.