ಬನ್ನೂರು ಭರತ್ ಭಂಡಾರಿ ಅವರಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬನ್ನೂರು ಭರತ್ ಭಂಡಾರಿ ಅವರಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ

Share This
ಪುತ್ತೂರು : ದೈವ ಸೇವಾ ಕಾರ್ಯದಲ್ಲಿ ಮಧ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದು ಪುತ್ತೂರು ತಾಲ್ಲೂಕಿನ ಬನ್ನೂರು ಭರತ್ ಭಂಡಾರಿಯವರು ಅನಾರೋಗ್ಯಕ್ಕೆ ತುತ್ತಾಗಿದ್ದು ಅವರಿಗೆ ಲಿವರ್ ಜೋಡಣೆ ಮಾಡಬೇಕಾಗಿದ್ದು ವೈದ್ಯಕೀಯ ವೆಚ್ಚ 35 ಲಕ್ಷ ವರೆಗೆ ತಗಲುವುದರಿಂದ ಸಹೃದಯಿ ದಾನಿಗಳಿಂದ ಸಹಾಯ ಹಸ್ತಕ್ಕೆ ಮನವಿ.
ಭರತ್ ಭಂಡಾರಿ ಅನಾರೋಗ್ಯ ಸಮಸ್ಯೆಗೆ ಒಳಗಾಗುವ ಮೊದಲು ಜ್ವರ ಕಾಣಿಸಿಕೊಂಡಿದ್ದು ನಂತರ ಜಾಂಡಿಸ್ ಹಂತ ತಲುಪಿದೆ. ಹೆಚ್ಚಿನ ಚಿಕಿತ್ಸೆ ಗೆ ಮಂಗಳೂರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆ ಯಲ್ಲಿ ದಾಖಲಿಸಿ ವೈದ್ಯರು ಪರಿಶೀಲಿಸಿ ಜಾಂಡಿಸ್ ಹೆಚ್ಚಾಗಿ ಲೀವರ್ ಸಂಬಂಧಿತ ರೋಗ ವಾಗಿದ್ದು ದೇಹ ಸ್ಥಿತಿ ಕ್ಷಿಣವಾಗುತ್ತಿದ್ದು ಲೀವರ್ ಮರು ಜೋಡಣೆ ಮಾಡಿದರೆ ಉತ್ತಮ ಎಂದೂ ವೈದ್ಯರು ತಿಳಿಸಿದ್ದು ಹೆಚ್ಚಿನ ಚಿಕಿತ್ಸೆ ಮಾಡಬೇಕು ಸುಮಾರು 35 ಲಕ್ಷ ವೆಚ್ಚವಾಗಲಿದ್ದು ಎಂದು ತಿಳಿಸಿದ್ದಾರೆ. 

ಇವರೆಗೆ 3 ಲಕ್ಷ ಹಣ ಆಸ್ಪತ್ರೆಗೆ ಖರ್ಚು ಮಾಡಿದ್ದು ಈಗ ದಿಕ್ಕು ತೋಚದಂತಾಗಿದೆ. ತೀರ ಕಷ್ಟದ ಪರಿಸ್ಥಿತಿಯಲ್ಲಿದ್ದು ಇವರ ತಂದೆ ಪುತ್ತೂರು ಗಂಗಾಧರ ಭಂಡಾರಿ ಯಕ್ಷಗಾನ ಕಲಾವಿದರಾಗಿದ್ದು ಆರ್ಥಿಕ ಭದ್ರತೆ ಇಲ್ಲದೆ ಇರುವುದರಿಂದ ಇವರ ಮನೆಯವರು ಸಹೃದಯಿ ಬಂಧುಗಳು ನೆರವು ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ACCOUNT NAME: AKSHATHA . B, AC. NO. - 6042500102922601, IFSC NO. KARB0000604, Phonepay : 9741671642

Pages