ತುಳುನಾಡಿನ ಮನ ಗೆದ್ದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ "ಧರ್ಮ ದೈವ" - BUNTS NEWS WORLD

ತುಳುನಾಡಿನ ಮನ ಗೆದ್ದ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ "ಧರ್ಮ ದೈವ"

Share This

BUNTS NEWS, ಮಂಗಳೂರು : ತುಳುನಾಡಿನ ದೈವಗಳ ಕಾರಣಿಕವನ್ನು ತೋರಿಸುವ ಕಥಾ ಹಂದರವಿರುವ ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶನ ಮಾಡಿರುವ "ಧರ್ಮ ದೈವ" ಕಿರುಚಿತ್ರ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ಈಗಾಗಲೇ ಎರಡು ವಾರದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನ ಚಿತ್ರ ವೀಕ್ಷಿಸಿದ್ದಾರೆ. ಜೊತೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ, ನಟ ದೇವದಾಸ್ ಕಾಪಿಕಾಡ್, ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ್ ಶೆಟ್ಟಿ, ನಿರ್ದೇಶಕ ಕುಂಬ್ರ ರಘುನಾಥ ರೈ, ಸುದ್ದಿ ಬಿಡುಗಡೆಯ ಮುಖ್ಯಸ್ಥರಾದ ಡಾ|ಯು. ಪಿ. ಶಿವಾನಂದ, ನಟ-ನಿರ್ದೇಶಕ ಶೋಭರಾಜ್ ಪಾವೂರು, ನಟ ಚೇತನ್ ರೈ ಮಾಣಿ, ಎಮ್. ಕೆ .ಮಠ, ಸೌರಾಜ್ ಶೆಟ್ಟಿ, ಪೃಥ್ವಿ ಅಂಬರ್  ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


ಚಿತ್ರದ ಚಿತ್ರೀಕರಣ,ಶತಮಾನದ ಇತಿಹಾಸವಿರುವ ಬೆಳ್ಳಾರೆಯ ತೋಟ ಮನೆಯಲ್ಲಿ ನಡೆದಿದ್ದು, ಹಮೀದ್ ಪುತ್ತೂರು ಅವರ ಚಿತ್ರಕಥೆ  ಇದೆ. ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಂದರ್ ರೈ ಮಂದಾರ, ಪೆನ್ಸಿಲ್ ಬಾಕ್ಸ್ ಖ್ಯಾತಿಯ ಕು. ದೀಕ್ಷಾ ಡಿ . ರೈ, ಚಿತ್ತರಂಜನ್ ರೈ ನುಳಿಯಾಲು, ಶ್ರೀಮತಿ ವಸಂತ ಲಕ್ಷ್ಮಿ, ಕೌಶಿಕ್ ರೈ ಕುಂಜಾಡಿ, ನಿತೇಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಧಾಕರ್ ಪಡೀಲ್ ತಮ್ಮ ಸೋನು ಕ್ರಿಯೇಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.


ಹರೀಶ್ ಪುತ್ತೂರು ಕ್ಯಾಮರಾ ಕೆಲಸ ಮಾಡಿದ್ದು ರಾಧೇಶ್ ರೈ ಮೊಡಪ್ಪಾಡಿ ಅವರ ಸಂಕಲನ ಮತ್ತು ಧ್ವನಿಗ್ರಹಣ, ಹಿನ್ನೆಲೆ ಸಂಗೀತವಿದ್ದು ಪ್ರೇಮ್ ರಾಜ್ ಆರ್ಲಪದವು ಅವರ ಪ್ರಸಾಧನ ಕಿರುಚಿತ್ರಕ್ಕಿದೆ. ಸಂಭಾಷಣೆಯನ್ನು ಹಮೀದ್ ಪುತ್ತೂರು ಮತ್ತು ನಾರಾಯಣ ರೈ ಕುಕ್ಕುವಳ್ಳಿ ಬರೆದಿದ್ದಾರೆ. ಹಿನ್ನೆಲೆ ಧ್ವನಿ ಭಾಸ್ಕರ್ ರೈ ಕುಕ್ಕುವಳ್ಳಿ ಹಾಗೂ ಅಶ್ವಿನಿ ಪೆರುವಾಯಿ ನೀಡಿದ್ದು, ಧನು ರೈ , ನಿತಿನ್ ಕಾನಾವು ಅವರ ಗ್ರಾಫಿಕ್ಸ್ , ಪ್ರಣವ ಭಟ್ ಅವರ ಸ್ಥಿರ ಚಿತ್ರ ಧರ್ಮದೈವಕ್ಕಿದೆ.

Pages