ಜು.27 : ಅಂಗಾರಕ ಸಂಕಷ್ಟ ಚತುರ್ಥಿ : ಭಕ್ತಿಯಿಂದ ಪೂಜಿಸಿ ಇಷ್ಟಾರ್ಥ ಸಿದ್ಧಿಸಿ - BUNTS NEWS WORLD

 

ಜು.27 : ಅಂಗಾರಕ ಸಂಕಷ್ಟ ಚತುರ್ಥಿ : ಭಕ್ತಿಯಿಂದ ಪೂಜಿಸಿ ಇಷ್ಟಾರ್ಥ ಸಿದ್ಧಿಸಿ

Share This

 

ಬಂಟ್ಸ್ ಮ್ಯೂಸ್, ಉಡುಪಿ: 2021ನೇ ವರ್ಷದ ಎರಡನೇ ಅಂಗಾರಕ ಸಂಕಷ್ಟ ಚತುರ್ಥಿಯು ಜು.27ರಂದು (ನಾಳೆ) ಬಂದಿದೆ.

ಮಂಗಳವಾರ ದಿನ ಬರುವ ಸಂಕಷ್ಟ ಚತುರ್ಥಿಯು ಅತ್ಯಂತ ಮಹತ್ವಪೂರ್ಣವಾಗಿದ್ದು ಈ ದಿನ ವೃತ ಕೈಗೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಚತುರ್ಥಿಯು ಜು.27ರ ಮುಂಜಾನೆ 2.5am ಜು.28ರ 2.28am ವರೆಗೆ ಇರಲಿದೆ.


ಅಂಗಾರಕ ಸಂಕಷ್ಟ ಚತುರ್ಥಿಯಂದು ವೃತ ಕೈಗೊಂಡರೆ 21 ವೃತದ ಹಿಡಿದ ಫಲ ದೊರೆಯುವುದು ಎಂಬ ನಂಬಿಕೆಯಿದೆ. ಮುಂಜಾನೆ ಸ್ನಾನ ಮಾಡಿ ಗಣೇಶನಿಗೆ ಗರಿಕೆಯನ್ನು ಪ್ರಾರ್ಥಿಸಿ ವೃತ ಕೈಗೊಳ್ಳಬಹುದು. ದಿನಪೂರ್ತಿ ಉಪವಾಸವಿದ್ದು ಗಣೇಶನ ನಾಮಸ್ಮರಣೆ ಮಾಡಬೇಕು. ಸಂಜೆ ಸಮೀಪದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯಿರಿ. ರಾತ್ರಿ ಚಂದ್ರದರ್ಶನ ಮಾಡಿ ವೃತ ಮುಕ್ತಾಯಗೊಳಿಸಬಹುದು.

Pages