ನಿಧನ : ವಿಠಲ ರೈ ಅಳಕೆ ಪುತ್ತೂರು - BUNTS NEWS WORLD

ನಿಧನ : ವಿಠಲ ರೈ ಅಳಕೆ ಪುತ್ತೂರು

Share This

ಬಂಟ್ಸ್ ನ್ಯೂಸ್, ಪುತ್ತೂರು: ತಾಲೂಕಿನ ದರ್ಬೆ ಸಮೀಪದ ಅಳಕೆ ನಿವಾಸಿ ವಿಠಲ ರೈ (79) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮೇ 12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಗತಿಪರ ಕೃಷಿಕರಾಗಿದ್ದ ಅವರು ದೈವಾರಾಧನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಪರಿಸರದಲ್ಲಿ ಜನಾನುರಾಗಿಗಳಾಗಿದ್ದರು. ಮೃತರ ಧರ್ಮಪತ್ನಿ ಶ್ರೀಮತಿ ಶಾಂಭವಿ ವಿ.ರೈ ಎರಡು ವರ್ಷಗಳ ಹಿಂದೆ ಅಗಲಿದ್ದರು.


ದಿ.ವಿಠಲ ರೈಯವರು ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ಮತ್ತು ನೋಟರಿ ಅಳಕೆ ರಮಾನಾಥ ರೈ ಸೇರಿದಂತೆ ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸೀಮಿತ ಸಂಖ್ಯೆಯ ಕುಟುಂಬದ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಅವರ ಸ್ವಗ್ರಹದಲ್ಲಿ ಮೃತರ ಅಂತ್ಯಕ್ರಿಯೆ ಜರಗಿತು.

Pages