ಮೀರಾರೋಡ್ - ಮಾಣಿಗುತ್ತು ಶಾಂತ ಆರ್ ಶೆಟ್ಟಿ ನಿಧನ - BUNTS NEWS WORLD

ಮೀರಾರೋಡ್ - ಮಾಣಿಗುತ್ತು ಶಾಂತ ಆರ್ ಶೆಟ್ಟಿ ನಿಧನ

Share This

BUNTS NEWS, ಮುಂಬಯಿ: ಹೆಜಮಾಡಿ ಗರಡಿಮನೆ ದಿ. ರತ್ನಾಕರ ಶೆಟ್ಟಿಯವರ ಧರ್ಮಪತ್ನಿ ಬಂಟ್ವಾಳದ ಮಾವಂತೂರ್ ಕುಟುಂಬದ ಮಾಣಿಗುತ್ತು ಮನೆಯ ಶ್ರೀಮತಿ ಶಾಂತ ಆರ್ ಶೆಟ್ಟಿ(77) ಇವರು ಡಿ. 5 ರಂದು ಮೀರಾರೋಡ್ ಸ್ವಗೃಹದಲ್ಲಿ ನಿಧನರಾದರು.

Maaniguttu-Shantha-R-Shetty
Maaniguttu-Shantha-R-Shetty

ಇವರು ಪುತ್ರ ಬಂಟರ ಸಂಘ ಮುಂಬಯಿಯ ತಂತ್ರಜ್ನಾನ ಮತ್ತು ಮಾಹಿತಿ ವಿಭಾಗದ ಕಾರ್ಯಾಧ್ಯಕ್ಷ,ಮೀರಾ ಬಾಯಂಧರ್ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪುತ್ರಿ ಸಹನಾ ಶೆಟ್ಟಿ, ಸೊಸೆ ಸಹನಾ ಶಿವಪ್ರಸಾದ್ ಶೆಟ್ಟಿ ಹಾಗೂ ಸಂಬಂಧಿಕರನ್ನು ಅಗಲಿದ್ದಾರೆ.


ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಎಸ್ ಪಯ್ಯಡೆ ಮತ್ತು ಪದಾಧಿಕಾರಿಗಳು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟರ ಸಂಘ ಮೀರಾ ಬಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಪದಾಧಿಕಾರಿಗಳು ಹಾಗೂ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಮತ್ತು ಮಾಣಿ ವಲಯ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ರೈ ಕಲ್ಲಾಜೆ ಮತ್ತು ಪದಾಧಿಕಾರಿಗಳು, ಹಾಗೂ ಮೀರಾ ಬಾಯಂಧರ್ನ ಗಣ್ಯರು ಸಂತಾಪ ಸೂಚಿಸಿದ್ದಾರೆ.

Pages