ಪತ್ರಕರ್ತ ರವೀಂದ್ರ ಶೆಟ್ಟಿ ಅವರಿಗೆ ರೋಡ್ ಸೇಫ್ಟಿ ಮೀಡಿಯಾ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ - BUNTS NEWS WORLD

ಪತ್ರಕರ್ತ ರವೀಂದ್ರ ಶೆಟ್ಟಿ ಅವರಿಗೆ ರೋಡ್ ಸೇಫ್ಟಿ ಮೀಡಿಯಾ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿ

Share This
ಬಂಟ್ಸ್ ನ್ಯೂಸ್, ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯು ದೆಹಲಿಯ ಸಿ.ಎಂ.ಎಸ್ ಸಂಸ್ಥೆಯ ಮೂಲಕ ಆಯೋಜಿಸಿದ ರಸ್ತೆ ಸುರಕ್ಷತಾ ಮೀಡಿಯಾ ಫೆಲೋಶಿಪ್-2019 ದ್ವಿತೀಯ ಪ್ರಶಸ್ತಿಯನ್ನು ಪತ್ರಕರ್ತ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ ಬಿ. ರವೀಂದ್ರ ಶೆಟ್ಟಿ ಪಡೆದಿದ್ದಾರೆ.
ರೋಡ್ ಸೇಫ್ಟಿ ಮೀಡಿಯಾ ಫೆಲೋಶಿಪ್-2019 ಯೋಜನೆಯಡಿ ಮಾಧ್ಯಮದ ಮೂಲಕ ರಸ್ತೆ ಸುರತಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಅನನ್ಯ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾತ್ತಿದೆ. ದೇಶದಾದ್ಯಂತ 12ಮಂದಿ ಪತ್ರಕರ್ತರು ಇದರಲ್ಲಿ ಭಾಗವಹಿಸಿದ್ದು, ಕರ್ನಾಟಕದ ಕನ್ನಡ ಮಾಧ್ಯಮದ ಏಕೈಕೆ ಪ್ರತಿನಿಧಿ ಇವರಾಗಿದ್ದಾರೆ.

ಪ್ರಶಸ್ತಿಯು 15 ಸಾವಿರ ನಗದು ಹಾಗೂ ಫಲಕವನ್ನುಹೊಂದಿದೆ. ದೆಹಲಿಯಲ್ಲಿ ಆಯೋಜಿಸಲಾಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ.

Pages