‘ಬಂಟೆರ್ನ ಗೊಬ್ಬುಲು’ ಕ್ರೀಡೋತ್ಸವ: ಸುರತ್ಕಲ್ ಬಂಟರ ಸಂಘಕ್ಕೆ ಪ್ರಶಸ್ತಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

‘ಬಂಟೆರ್ನ ಗೊಬ್ಬುಲು’ ಕ್ರೀಡೋತ್ಸವ: ಸುರತ್ಕಲ್ ಬಂಟರ ಸಂಘಕ್ಕೆ ಪ್ರಶಸ್ತಿ

Share This
BUNTS NEWS, ಸುರತ್ಕಲ್: ಬಂಟರ ಸಂಘ ಬಜಪೆ ವಲಯ(ರಿ) ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೆರವಿನಿಂದ ಬಜಪೆ ಸುಂಕದ ಕಟ್ಟೆ ಶ್ರೀ ನಿರಂಜನಸ್ವಾಮಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜರಗಿದ ತಾಲೂಕು ಮಟ್ಟದ ‘ಬಂಟೆರ್ನ ಗೊಬ್ಬುಲು’ ಕ್ರೀಡಾಕೂಟದಲ್ಲಿ ಸುರತ್ಕಲ್ ಬಂಟರ ಸಂಘವು ಹಗ್ಗಜಗ್ಗಾಟ, ತ್ರೋಬಾಲ್, ರಿಲೇ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಗಳನ್ನು ಪಡೆದುಕೊಳ್ಳುವುದರ ಮೂಲಕ ಕೂಟದಲ್ಲಿ ಅತೀ ಹೆಚ್ಚಿನ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
‘ಬಂಟೆರ್ನ ಗೊಬ್ಬುಲು’ ಕ್ರೀಡಾಕೂಟದಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರು ಬಹುತೇಕ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಪುರುಷರ ತಂಡವು ಹಗ್ಗ ಜಗ್ಗಾಟದಲ್ಲಿ ಪ್ರಥಮ, ದ್ವಿತೀಯ, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಹಾಗೂ ದ್ವಿತೀಯ, 400 ಮೀಟರ್ ರಿಲೇಯಲ್ಲಿ ಪುರುಷರ ಮತ್ತು ಮಹಿಳೆಯರ ತಂಡ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ.

ಸುರತ್ಕಲ್ ಬಂಟರ ಸಂಘದ ಪರವಾಗಿ ಸೌಜನ್ಯ ಪಿ ಶೆಟ್ಟಿ, ನಿತೇಶ್ ಶೆಟ್ಟಿ ಮದ್ಯ, ಸಾತ್ವಿಕ್ ಶೆಟ್ಟಿ ಪಡ್ರೆ, ಸಾತ್ವಿ ಶೆಟ್ಟಿ ಸುರತ್ಕಲ್,   ನಿಧಿ ಶೆಟ್ಟಿ, ಶೋಧನ್ ಭಂಡಾರಿ, ಶ್ರೇಷ್ಠ ವಿ ಶೆಟ್ಟಿ, ದೇವಿಕಾ ಶೆಟ್ಟಿ, ದೀಕ್ಷಿತ್ ಶೆಟ್ಟಿ, ಮನಿಶ್ ಶೆಟ್ಟಿ, ಜಿತೇಂದ್ರಿ ಶೆಟ್ಟಿ  ಚೇಳಾೈರ್,  ಸಾರ್ಥಕ್ ಶೆಟ್ಟಿ, ಪ್ರತೀಕ್ ಶೆಟ್ಟಿ, ದಕ್ಷಾ ಬಿ. ಶೆಟ್ಟಿ, ಮೊದಲಾದವರು ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು. ತ್ರೋಬಾಲ್ ಪಂದ್ಯಾಟದಲ್ಲಿ ಮಮತಾ ಶೆಟ್ಟಿ ಚೇಳಾರ್ ಮತ್ತು ಸಾತ್ವಿ ಶೆಟ್ಟಿ ಸುರತ್ಕಲ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ  ಮತ್ತು ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಪ್ರಶಸ್ತಿಗಳನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ತಡಂಬೈಲ್ ಗುತ್ತು, ಸುರತ್ಕಲ್ ಬಂಟರ ಸಂಘದ ಮಾಜೀ ಅಧ್ಯಕ್ಷ  ಉಲ್ಲಾಸ್ ಆರ್ ಶೆಟ್ಟಿ, ವಿದ್ಯಾಚರಣ್  ಭಂಡಾರಿ, ಪದ್ಮನಾಭ ಶೆಟ್ಟಿ ಪಡ್ರೆ, ಸಂತೋಷ್ ಶೆಟ್ಟಿ, ಗುಣಶೇಖರ ಶೆಟ್ಟಿ ಮೊದಲಾದವರು ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಬಂಟರ ಮಾತೃ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಡಾ ಆಶಾಜ್ಯೋತಿ ರೈ, ರತ್ನಾಕರ ಶೆಟ್ಟಿ ಎಕ್ಕಾರ್, ಸುಧಾಕರ ಎಸ್. ಪೂಂಜ, ಆನಂದ ಶೆಟ್ಟಿ ಅಡ್ಯಾರ್, ವೇಣುಗೋಪಾಲ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ಮನೀಶ್ ರೈ, ಹರೀಶ್ ಶೆಟ್ಟಿ ಬಜಪೆ, ಗಂಗಾಧರ ಶೆಟ್ಟಿ, ರಿತೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Pages