ಯುಎಇ ಬಂಟ್ಸ್ : ಭಕ್ತಿ ಸಡಗರದಿಂದ ಜರಗಿದ ಸಾರ್ವಜನಿಕ ಸತ್ಯನಾರಾಯಣ ಪೂಜೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಯುಎಇ ಬಂಟ್ಸ್ : ಭಕ್ತಿ ಸಡಗರದಿಂದ ಜರಗಿದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Share This
BUNTS NEWS, ದುಬೈ: ನಗರದ ಆಲ್ ಕುಝ್ ಕ್ರೆಡೀಯನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಡಿ.20ರಂದು ಯುಎಇ ಬಂಟ್ಸ್ ಆಶ್ರಯದಲ್ಲಿ ಯುಎಇ ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅರಭ್ ಸಂಯುಕ್ತ ಸಂಸ್ಥಾನ ವತಿಯಿಂದ ಸರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಯಶಸ್ವಿಯಾಗಿ ಜರಗಿತು.
ಬೆಳಗ್ಗೆ 8 ಗಂಟೆಗೆ ಸಂಕಲ್ಪ, ಕಲಶ ಪ್ರತಿಷ್ಥಾಪನೆ ಮಾಡಿ ಪೂಜಾ ವಿಧಿ ವಿಧಾನ  ಜರಗಿತು. ಮಧ್ಯಾಹ್ನ 12 ಗಂಟೆಗೆ ಶ್ರೀ ಸತ್ಯನಾರಾಯಣ ದೇವರ ಕಥಾಸಾರ, 12.30ಕ್ಕೆ ಮಹಾಪೂಜೆ, ಮಹಾ ಮಂಗಳಾರತಿ ಬಳಿಕ ಮಹಾ ಅನ್ನಸಂತರ್ಪಣೆ ಜರಗಿತು.

ಕಾರ್ಯಕ್ರಮದಲ್ಲಿ  ವಿಶೇಷ ಆಕರ್ಷಣಿಯವಾದುದ್ದು ಶ್ರೀ ವರಲಕ್ಷ್ಮೀ ಪೂಜಾ ಸಮಿತಿ ಯುಎಇ ತಂಡದವರಿಂದ ಕುಣಿತ ಭಜನೆ ವಿಶೇಷ ಮೇರುಗು ತಂದಿತು. ಅವರೊಂದಿಗೆ ಪೂಜಾ ಸಮಿತಿಯ ಸದಸ್ಯ, ಸದಸ್ಯೆಯರು ಕುಣಿತ ಭಜನೆಯಲ್ಲಿ ಹೆಜ್ಜೆ ಹಾಕಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಯುಎಇ ತಂಡದವರಿಂದ ಭಜನಾ ಸಂಗೀತ ಕಾರ್ಯಕ್ರಮ ಜರಗಿತು. ಯುಎಇ ಬಂಟ್ಸ್  ಅಧ್ಯಕ್ಷರಾದ ಸರ್ವೊತೋಮ ಶೆಟ್ಟಿಯವರು ಸ್ವಾಗತಿಸಿ ಧನ್ಯವಾದವಿತ್ತರು. (ವರದಿವಿಜಯಕುಮಾರ್ ಶೆಟ್ಟಿ ಮಜಿಬೈಲ್ ದುಬೈ)

Pages