BUNTS NEWS, ಮುಂಬಯಿ: ವಿಶ್ವ ಮಾನವತಾವಾದಿ ಡಬ್ಲ್ಯೂ.ಎಚ್.ಆರ್ ಪೀಪಲ್ಸ್
ಕೌನ್ಸಿಲ್ ವತಿಯಿಂದ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದ ‘ಜಾಗತಿಕ ಮಾನವಾಧಿಕಾರ ಪ್ರತಿಭಾ
ಮಹಾ ಸಮ್ಮೇಳನ 2019 ಮತ್ತು ಅಂತರ್ರಾಷ್ಟ್ರೀಯ ಮಾನವಾಧಿಕಾರಿ ನೆಲ್ಸನ್ ಮಂಡೇಲಾ ರಾಷ್ಟ್ರೀಯ ಪ್ರಶಸ್ತಿ
ಪ್ರದಾನ ಹಾಗೂ ವಾರ್ಷಿಕ ಮಹಾ ಸಮ್ಮೇಳನ’ದಲ್ಲಿ ಕನ್ನಡ, ತುಳು ಕವಿ ಮತ್ತು ಯುವ ಸಂಘಟಕ ಕೆ. ಲಕ್ಷ್ಮೀನಾರಾಯಣ
ರೈ ಹರೇಕಳ 2018-19 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಯನ್ನು ಗಣ್ಯರ ಸಮ್ಮುಖ ಸ್ವೀಕರಿಸಿದರು.
ಅಂತರಾಷ್ಟ್ರೀಯ ಮತ್ತು
ರಾಷ್ಟ್ರೀಯ ಡಬ್ಲ್ಯೂ ಎಚ್ ಆರ್ ಪೀಪಲ್ಸ್ ಕೌನ್ಸಿಲ್
ವರ್ಲ್ಡ್ ಹ್ಯೂಮನ್ ರೈಟ್ಸ್ನ ಅಧ್ಯಕ್ಷ ಸಮಾಜ ರತ್ನ ಲಯನ್ ಡಾI ಕೆ.ಟಿ ಶಂಕರ ಶೆಟ್ಟಿ ಅವರು ಸಮಾರಔಭದ ಅಧ್ಯಕ್ಷತೆ ವಹಿಸಿದ್ದರು,
ಬಹರೈನ್ ಡಬ್ಲ್ಯೂ ಎಚ್ ಆರ್’ನ ರಾಷ್ಟ್ರೀಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಗೋವಾದ ಸುನೀಲ್ ಶೇಟ್,
ತಮಿಳುನಾಡು ರಾಜ್ಯದ ಮುರುಗನ್ ಮುಪ್ಪನಾರ್, ರಾಷ್ಟ್ರೀಯ
ಡಬ್ಲ್ಯು ಎಚ್ ಆರ್’ನ ಪ್ರಧಾನ ಕಾರ್ಯದರ್ಶಿ ಡಾI ಎ. ಎನ್. ರಸನ್ ಕುಟೆ, ಮಹಾರಾಷ್ಟ್ರ ದ ಅಧ್ಯಕ್ಷೆ ಡಾI ಕ್ರಾಂತಿ
ಮಹಾಜನ್, ಆಕಾಶವಾಣಿ ಗಾಯಕಿ. ರೇಖಾ ಮಹಾಜನ್
ನಾಸಿಕ್, ನಾಗ್ಪುರದ ಚಂದ್ರ ಕಾಔತ್ ವಿಶ್ರೋಜ್ವರ್ , ಬಾವುರಾವ್ ತಾಯಡೆ (ರೆಕ್ ಸೇನ್
1971 ಯುದ್ದದ ವಿಟ್ನೆಸ್ ) ಮುಖ್ಯ ಅತಿಥಿಗಳಾಗಿದ್ದರು,
ಕಾರ್ಯಕ್ರಮದಲ್ಲಿ ಹಲವಾರು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟ ದಿಂದ ಆಗಮಿಸಿದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಾಜಿ ನಗರ ಸೇವಕ,
ನ್ಯಾಯವಾದಿ ನಯನ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾI ಎ.ಎನ್. ರಸನ್ ಕುಟೆ ಧನ್ಯವಾದವಿತ್ತರು,
ಸಂಸ್ಥೆಯ ಸಚಿವ ಧರ್ಮೇಂದ್ರ ಪ್ರಜಾಪತಿ ಹಾಗು ಕಾರ್ಯಾಧ್ಯಕ್ಷೆ ಯಶೋಧ ಎನ್. ಶೆಟ್ಟಿ, ಮಹಾರಾಷ್ಟ್ರ ಉಪಾಧ್ಯಕ್ಷೆಯರಾದ ಚಂದ್ರಕಲಾ ಶೆಟ್ಟಿ, ಸುಜಾತ ಕೋಟ್ಯಾನ್,
ಆಶಾ ಪದ್ಮನಾಭ ಶೆಟ್ಟಿ,, ಸದಾಶಿವ ವಾಲ್ಫಾಡಿ, ವಸಂತಿ
ಶೆಟ್ಟಿ, ಜ್ಯೋತಿ ಶೆಟ್ಟಿ ಶಿರೋಡ್ಕರ್, ಭಾವನ ಛೋಟಾಲಿಯಾ, ಸತೀಶ್ ಪೂಜಾರಿ, ಧ್ರುತಿ ಅಶೋಕ್ ಶೆಟ್ಟಿ,
ಪ್ರಿಥ್ವಿಶ್ ಶೆಟ್ಟಿ, ಸದಾನಂದ ಪೂಜಾರಿ, ನೀಲಂ ಬಂಡಿವಾಡ್ಕರ್, ಶ್ರೇಯಸ್, ಗುಣಕಾಂತ್ ಕರ್ಜೆ, ದಿಶಾ
ವೆಔಕಟೇಶ್ ಗೌಡ ಉಪಸ್ಥಿತರಿದ್ದರು.