ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ
ಕ್ಷೇತ್ರದಲ್ಲಿ ಶರಣ್ ನವರಾತ್ರಿಯ ಪ್ರಯುಕ್ತ
ಚಂಡಿಕಾಯಾಗ ನೃತ್ಯ ಸೇವೆ ಸಾಂಸ್ಕೃತಿಕ
ವೈಭವಗಳು ಸಂಪನ್ನಗೊಂಡವು. ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ
ಗುರೂಜಿ ಉಪಸ್ಥಿತಿಯಲ್ಲಿ ಯಾಗಗಳು ನೆರವೇರಿದವು.
ನೃತ್ಯ ಸೇವೆ ಕುಮಾರಿ ಪನ್ನಗ,
ಕುಮಾರಿ ತುಷಿತಾ ಶ್ರೀನಿವಾಸ್, ಸ್ವಾತಿ
ಆಚಾರ್ಯ ಅವರಿಂದ ನೆರವೇರಿತು. ಚಂಡಿಕಾಯಾಗದ
ಸೇವಾದಾರರಿಗೆ ಕಿನ್ನಿಮೂಲ್ಕಿಯ ದೇವೇಂದ್ರ ಮೆಂಡನ್ ಹಾಗೂ ಮೀನಾ
ದೇವೇಂದ್ರ ಮೆಂಡನ್ ಮಂಗಳೂರಿನ ಮೋಹನ್ದಾಸ್
ಮತ್ತು ಸುಚೇತಾ ಮೋಹನದಾಸ್ ಅವರಿಂದ
ಸಮರ್ಪಿಸಲ್ಪಟ್ಟಿತ್ತು.
ಕ್ಷೇತ್ರದ
ಅನ್ನ ಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಮಿಕ್ಕಿದ
ಭಕ್ತರುಗಳು ಪ್ರಸಾದ ಸ್ವೀಕರಿಸಿದರು. ಸಂಜೆ
ದುರ್ಗಾ ನಮಸ್ಕಾರ ಪೂಜೆ, ಕಲ್ಪೋಕ್ತ
ಪೂಜೆ ಸಹಿತ ರಂಗಪೂಜೆ ಮಹೋತ್ಸವ
ದಿವ್ಯಾ ಸಂಜೀವ ಕುಲಕರ್ಣಿ ಅವರಿಂದ ನೆರವೇರಿತು. ಸಾಂಸ್ಕೃತಿಕ
ಕಾರ್ಯಕ್ರಮವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕಲಾನಿಧಿ
ತಂಡ ಇವರಿಂದ ಮಾತನಾಡುವ ಗೊಂಬೆಯೊಂದಿಗೆ
ವಿಶೇಷ ಕಾರ್ಯಕ್ರಮ ಗಿನ್ನೆಸ್ ದಾಖಲೆಯ ಕಲಾವಿದೆ ತನುಶ್ರೀ
ಪಿತ್ರೋಡಿ ಅವರಿಂದ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮ ಪ್ರಜ್ಞೆ ಇಂಟರ್ನ್ಯಾಷನಲ್ ಶಾಲೆಯ
ಶಿಕ್ಷಕ ಶಿಕ್ಷಕಿಯರಿಂದ ಸತ್ಯ ಸುಳ್ಳು ಒಂದು
ತುಳು ನಾಟಕ ಪ್ರದರ್ಶಿಸಲ್ಪಟ್ಟಿತು.
ಇಂದು ಶ್ರೀ ಲಲಿತಾ
ಸಹಸ್ರ ಕದಳೀಯಾಗ: ಇಂದು
ಲಲಿತ ಪಂಚಮಿಯ ಪರ್ವ ಕಾಲ
ಶ್ರೀಚಕ್ರಪೀಠ ಸುರಪೂಜಿತೆ ಸನ್ನಿಧಾನದಲ್ಲಿ ಲಲಿತ ಸಹಸ್ರ ಕದಳಿ
ಯಾಗವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ
ನೆರವೇರಲಿದೆ . ಲಲಿತಾ ಸಹಸ್ರ ಮಹಾನ್
ಕದಳ ಮಂಗಳೂರಿನ ಡಾಕ್ಟರ್ ಮೃದುಲಾ ಮತ್ತು
ಡಾ! ರಾಜೇಶ್ ದಂಪತಿಗಳ ಹರಕೆ
ರೂಪದಲ್ಲಿ ಸಮರ್ಪಿತ
ವಾಗಲಿದೆ ಎಂದು ಕ್ಷೇತ್ರ ಉಸ್ತುವಾರಿ
ಶ್ರೀಮತಿ ಕುಸುಮಾ ನಾಗರಾಜ್ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.