BUNTS NEWS, ಮುಂಬಯಿ: ಮಲಾಡ್ ಪೂರ್ವ ಕುರಾರ್ ವಿಲೇಜ್ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕಾರ್ಯಕ್ರಮವನ್ನು ರತಿಕಾ ಶ್ರೀನಿವಾಸ ಸಫಲ್ಯ ಅವರು ದೀಪ ಬೆಳಗಿಸಿ ಉದ್ಥಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮವು ಪರಿಸರದ ಮಹಿಳೆಯರನ್ನು ಒಗ್ಗೂಡಿಸುವಂತೆ ಮಾಡಿದೆ ಮಾತ್ರವಲ್ಲದೆ ಮಹಿಳೆಯರನ್ನು ಭಜನೆ, ಪೂಜಾ ಇತ್ಯಾದಿ ಧಾರ್ಮಿಕ ಕಾರ್ಯದಲ್ಲಿ ಕ್ರೀಯಾಶೀಲರಾಗುವಂತೆ ಮಾಡುತ್ತಿದೆ. ಹಳದಿ ಕುಂಕುಮವು ಮಹಿಳೆಯರಿಗೆ ಸೌಭಾಗ್ಯದ ಸಂಕೇತವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಕುಲಾಲ ಸಂಘ ಚರ್ಚ್ ಗೇಟ್ - ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ರತ್ನಾ ಡಿ. ಕುಲಾಲ್ ಅವರು ಮಾತನಾಡಿ, ಈ ಶನಿ ಮಂದಿರದಲ್ಲಿ ಎಲ್ಲಾ ಭಾಷಿಗರಿಗೂ ಶೈಕ್ಷಣಿಕ ಹಾಗೂ ಧಾರ್ಮಿಕ ಸಹಕಾರ ಸಿಗುತ್ತಿದ್ದು ಮಹಿಳಾ ವಿಭಾಗವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶುಭಕೋರಿದರು. ವೇದಿಕೆಯಲ್ಲಿ ಶೋಭಾ ಎಸ್. ಶೆಟ್ಟಿ ಮೀರಾರೋಡ್, ಕುರಾರ್ ಜ್ಯೋತಿ ಹೋಟೇಲಿನ ಪಾಲುದಾರರಾದ ವಿಜಯಲಕ್ಷ್ಮೀ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಹಿಳಾ ವಿಭಾಗವು ದೇವಸ್ಥಾನದ ಎಲ್ಲಾ ಕಾರ್ಯದಲ್ಲಿ ಪಾಲ್ಗೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ವಾರದಲ್ಲಿ ನಡೆಯುವ ಭಜನೆಯಲ್ಲಿ ಸಕ್ತಿಯರಾಗಿದ್ದಾರೆ. ಮುಂದಿನ ವರ್ಷದ ದೇವಸ್ಥಾನದ ಬ್ರಹ್ಮಕಲಶ ಕ್ಕೆ ಎಲ್ಲರೂ ಸಹಕರಿಸಬೇಕೆಂದರು.
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀತಲಾ ಕೋಟ್ಯಾನ್ ಸ್ವಾಗತಿಸಿದರು, ಕಾರ್ಯದರ್ಸಿ ಜಯಂತಿ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರೆ ರಾಜಶ್ರೀ ಪೂಜಾರಿ ಹಳದಿ ಕುಂಕುಮದ ಬಗ್ಗೆ ಮಾಹಿತಿಯಿತ್ತರು. ಅತಿಥಿಗಳನ್ನು ಶಾಲಿನಿ ಶೆಟ್ಟಿ, ಯಶೋದಾ ಡಿ. ಕುಂಬ್ಳೆ, ಸ್ನೇಹಲತಾ ನಾಯಕ್, ಯಶೋದಾ ರೈ, ಲತಾ ಪೂಜಾರಿ, ಹರೀಶ್ ಸಾಲ್ಯಾನ್, ಆನಂದ ಕೋಟ್ಯಾನ್, ಸುರೇಶ್ ಸಾಲ್ಯಾನ್ ಗೌರವಿಸಿದರು. ದೇವಸ್ಥಾನದ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ಶನಿ ದೇವರಿಗೆ ಪೂಜೆ ಸಲ್ಲಿಸಿದರು.
ಸಮಿತಿಯ ಇತರ ಸದಸ್ಯರಾದ ನಾರಾಯಣ ಶೆಟ್ಟಿ, ದಿನೇಶ್ ಕುಂಬ್ಲೆ, ಬಾಬು ಚಂದನ್, ಶ್ರೀಧರ್ ಆರ್ ಶೆಟ್ಟಿ, ಎಂ. ಡಿ. ಬಿಲ್ಲವ, ರಮೇಶ್ ಪೂಜಾರಿ, ಸಂತೋಶ್ ಶೆಟ್ಟಿ, ಹರೀಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು. ವರದಿ :ಚಿತ್ರ ಈಶ್ವರ ಎಂ. ಐಲ್