BUNTS NEWS, ಮಂಗಳೂರು: ಜಾಗತಿಕ ಬಂಟ್ಸ್ ಫೌಂಡೇಶನ್
ಟ್ರಸ್ಟ್ ಕೊಡಗು ನೆರೆ ಸಂತ್ರಸ್ತರಿಗೆ
1ಕೋಟಿ ರೂ. ದೇಣಿಗೆ ಘೋಷಿಸಿದೆ.
ನಗರದ ಐಎಂಎ ಹಾಲ್’ನಲ್ಲಿ
ನಡೆದ ಜಾಗತಿಕ ಬಂಟ ಪ್ರತಿಷ್ಠಾನದ 22ನೇ
ವಾರ್ಷಿಕ ಮಹಾಸಭೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಕಂಗಾಲಾಗಿರುವ
ಕೊಡಗು ಜಿಲ್ಲೆಗೆ ಪ್ರತಿಷ್ಠಾನದ ವತಿಯಿಂದ 1 ಕೋಟಿ
ರೂ. ದೇಣಿಗೆಯನ್ನು ಮುಖ್ಯಮಂತ್ರಿಗಳ ಕೊಡಗು ನೆರೆ ಸಂತ್ರಸ್ತರ
ಪರಿಹಾರ ನಿಧಿಗೆ ನೀಡುವುದೆಂದು ಘೋಷಿಸಲಾಯಿತು.
ಈ ಸಂದರ್ಭ ವಿವಿಧ
ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಾಧಕರಾದ ಡಾ. ಅಮರನಾಥ ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಡಾ.ವೈ.ಭರತ್ ಶೆಟ್ಟಿ,
ರಾಜೇಶ್ ನಾಯ್ಕ್, ವಂಡ್ಸೆ ನಾಗಯ್ಯ
ಶೆಟ್ಟಿ, ಶೃತಿ ಶೆಟ್ಟಿ ಹಾಗೂ ಇತರ ಪ್ರಮುಖರನ್ನು
ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ
ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಮಾಜಿ ಅಧ್ಯಕ್ಷರಾದ
ಡಾ ಶಾಂತರಾಮ ಶೆಟ್ಟಿ ಉಪಾಧ್ಯಕ್ಷರಾದ ಎ.ಜೆ ಶೆಟ್ಟಿ
ಕಾರ್ಯದರ್ಶಿ ಕೆ.ಎಂ ಶೆಟ್ಟಿ
ಕೋಶಾಧಿಕಾರಿ CA ಸುದೇಶ್ ಕುಮಾರ್ ರೈ
ಯೋಜನಾ ನಿರ್ದೇಶಕರಾದ ಡಾ ಬಿ ಸಂಜೀವ
ರೈ ಮುಖ್ಯ ಅತಿಥಿಗಳಾಗಿ ಡಾ
ಕೆ.ಆರ್ ಶೆಟ್ಟಿ, ಎ
ಸದಾನಂದ ಶೆಟ್ಟಿ, ಮತ್ತು CA ಹೆಚ್.ಆರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಪಟ್ಲ ಸತೀಶ್ ಶೆಟ್ಟಿಯವರ
ಭಾಗವತಿಕೆ ಶೈಲಿಯ ಪ್ರಾರ್ಥನೆ ಎಲ್ಲರ
ಮೆಚ್ಚುಗೆಗೆ ಪಾತ್ರವಾಯಿತು.