ಕಲ್ಯಾಣಿ ಶೆಟ್ಟಿ ಕುಟುಂಬಿಕರ ಪತ್ತೆಗೆ ಸಹಾಯ ಮಾಡಿ - BUNTS NEWS WORLD

ಕಲ್ಯಾಣಿ ಶೆಟ್ಟಿ ಕುಟುಂಬಿಕರ ಪತ್ತೆಗೆ ಸಹಾಯ ಮಾಡಿ

Share This
BUNTS NEWS, ಮುಂಬಾಯಿ: ದೊಂಬಿವಿಲಿಯಲ್ಲಿ 75 ವರ್ಷ ವಯಸ್ಸಿನ ಕಲ್ಯಾಣಿ ಶೆಟ್ಟಿ ಅವರು ಪತ್ತೆಯಾಗಿದ್ದು ನೆನಪಿನ ಶಕ್ತಿಯ ಕೊರತೆಯಿಂದ ಮನೆಗೆ ವಾಪಾಸ್ಸಾಗಲು ಸಾಧ್ಯವಾಗದೇ ಕಷ್ಟಪಡುತ್ತಿದ್ದಾರೆ.
ಕಲ್ಯಾಣಿ ಶೆಟ್ಟಿ ಕುಟುಂಬಿಕರ ಪತ್ತೆಗೆ ಸಹಾಯ ಮಾಡಿ
ಅವರು ಹೇಳುವಂತೆ ಅವರಿಗೆ ಇಬ್ಬರು ಮಕ್ಕಳಿದ್ದು ಒಬ್ಬರು ತಾರನಾಥ ಶೆಟ್ಟಿ ಹಾಗೂ ಮಗಳು ಭಾರತಿ ಶೆಟ್ಟಿ ಎಂಬುದಾಗಿ ತಿಳಿಸುತ್ತಾರೆ. ಆದರೆ ನೆನಪಿನ ಶಕ್ತಿಯ ಕೊರತೆಯಿಂದ ತನ್ನ ಮನೆಯ ವಿಳಾಸವನ್ನು ಹೇಳಲು ಕಲ್ಯಾಣಿ ಶೆಟ್ಟಿ ಅವರಿಗೆ ಸಾಧ್ಯವಾಗಿಲ್ಲ.

ಇದೀಗ ಕಲ್ಯಾಣಿ ಶೆಟ್ಟಿ ಅವರು ಮನ್ಪಾಡ [Manpada] ಪೊಲೀಸ್ ಠಾಣೆಯ ಆಶ್ರಯದಲ್ಲಿದ್ದು ಇವರ ಕುಟುಂಬಿಕರ ಪತ್ತೆಗೆ ಕೋರಲಾಗಿದೆ. [ಸುದ್ದಿ ಕೃಪೆ – ಸಾಮಾಜಿಕ ಜಾಲತಾಣ]

Pages