ಬಡವರ ಬಂಧು, ನಿಸ್ವಾರ್ಥ ಸಮಾಜಸೇವಕಿ ಬಂಟ ಸಮಾಜದ ಹೆಮ್ಮೆಯ ಪುತ್ರಿ ಲಯನೆಸ್ ವಿದ್ಯಾಲತಾ ಯು. ಶೆಟ್ಟಿ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಡವರ ಬಂಧು, ನಿಸ್ವಾರ್ಥ ಸಮಾಜಸೇವಕಿ ಬಂಟ ಸಮಾಜದ ಹೆಮ್ಮೆಯ ಪುತ್ರಿ ಲಯನೆಸ್ ವಿದ್ಯಾಲತಾ ಯು. ಶೆಟ್ಟಿ

Share This
ಬಂಟ್ಸ್ ನ್ಯೂಸ್ ವಲ್ಡ್, ಉಡುಪಿ: ಇಂದಿನ ಕಾಲಘಟ್ಟದಲ್ಲಿ ಸಮಾಜಸೇವೆಗಾಗಿ ಜೀವನ ಮುಡಿಪಾಗಿಟ್ಟವರು ತುಂಬಾ ಕಡಿಮೆ. ಅದರಲ್ಲೂ ಮಹಿಳೆಯಾಗಿ ಬಡವರ ಬಂಧುವಾಗಿ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವ ಬಂಟ ಸಮಾಜದ ಹೆಮ್ಮೆಯ ಮಗಳು ಬನ್ನಂಜೆ ಲಯನೆಸ್ ಸಂಯೋಜಕಿ ವಿದ್ಯಾಲತಾ ಉದಯ ಕುಮಾರ್ ಶೆಟ್ಟಿ ಎನ್ನಲು ಸಂತೋಷವಾಗುತ್ತದೆ.
ಉಡುಪಿ ಬನ್ನಂಜೆ ವಿದ್ಯಾಲತಾ ಯು ಶೆಟ್ಟಿ ಅವರ ಹುಟ್ಟೂರು. ಬನ್ನಂಜೆಯ ಕಲ್ಕುಡ ಮನೆಯ ದಿ.ರಾಮ ಶೆಟ್ಟಿ ಹಾಗೂ ನೀರೆಬೈಲೂರಿನ ಹುಚ್ಚುಬೆಟ್ಟು ಮನೆಯ ರತಿ ಶೆಟ್ಟಿಯವರ ಏಕೈಕ ಪುತ್ರಿ. ಡಿಪ್ಲೋಮಾ ಪದವಿಧರರಾಗಿರುವ ವಿದ್ಯಾಲತಾ ಯು ಶೆಟ್ಟಿ ಅವರು ಉಡುಪಿಯ ಯಶಸ್ವಿ ಉದ್ಯಮಿ ದೈವಭಕ್ತರಾದ ಕಲ್ಕುಡ ಮನೆಯ ಉದಯಕುಮಾರ್ ಶೆಟ್ಟಿ ಅವರನ್ನು ವಿವಾಹವಾಗಿ ಸಂತೃಪ್ತ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸ್ವಾತಿ ಹಾಗೂ ಮಾಣಿಕ್ಯವೆಂಬ ಇಬ್ಬರು ಪುತ್ರಿಯರಿದ್ದು ಸ್ವಾತಿ ಎಂಬಿಬಿಎಸ್ ಹಾಗೂ ಮಾಣಿಕ್ಯ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಾರೆ.
“ಬನ್ನಂಜೆ ಲಯನೆಸ್ ಕ್ಲಬ್ ಕಟ್ಟಿ ಬೆಳೆಸಿದರು": ಸದಾ ಯಾವುದಾದರೊಂದು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ವಿದ್ಯಾಲತಾ ಯು ಶೆಟ್ಟಿ ಅವರು ತಮ್ಮ ಗೆಳತಿಯರ ಸಹಕಾರದಲ್ಲಿ “ಬನ್ನಂಜೆ ಲಯನೆಸ್ ಕ್ಲಬ್” ಪ್ರಾರಂಭಿಸಿದರು. ಅಂದು ಪ್ರಾರಂಭವಾದ ಬನ್ನಂಜೆ ಲಯನೆಸ್ ಕ್ಲಬ್ ವಿದ್ಯಾಲತಾ ಯು ಶೆಟ್ಟಿ ಅವರ ಸಮಾಜ ಸೇವೆಗೆ ಉತ್ತಮ ವೇದಿಕೆಯಾಗಿ ನೂರಾರು ಜನರ ಬದುಕಿಗೆ ಆಶಾಕಿರಣವಾಗಿದೆ ಎಂದರೆ ತಪ್ಪಾಗಲಾರದು.

ಜಿಲ್ಲಾ ಲಯನೆಸ್ 317- C ಜಿಲ್ಲಾ ಲಯನೆಸ್ ಸಂಯೋಜಕಿ ಲಯನೆಸ್ ವಿದ್ಯಾಲತಾ ಯು. ಶೆಟ್ಟಿಯವರ ಕಾರ್ಯಚಟುವಟಿಕೆಗಳ ವೈಯಕ್ತಿಕ ಕೊಡುಗೆಗಳ ಪಕ್ಷಿನೋಟವನ್ನು ಈ ರೀತಿಯಲ್ಲಿ ಕಾಣಬಹುದಾಗಿದೆ. ವಳಕಾಡು ಶಾಲೆಗೆ ಪೀಠೋಪಕರಣಗಳ ಸಲಕರಣೆಗಳ ಕೊಡುಗೆ - 1,00,000, ಹಲವಾರು ಶಾಲೆಗಳಿಗೆ ಪುಸ್ತಕಗಳ ವಿತರಣೆ - 50,000, ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಧನ ಸಹಾಯ - 75,000, ರೋಗಿಗಳ ಆರೈಕೆಗಳಿಗೆ ಧನ ಸಹಾಯ  - 20,000, ಬಡರೈತ ಒಬ್ಬರಿಗೆ ಅವರ ಕೃಷಿಗೆ ಅನುಕೂಲವಾಗುವಂತೆ ನೂತನ ಟ್ರಾಕ್ಟರ್ಕೊಡುಗೆ - 1,60,000, ಆದಿಉಡುಪಿ ಶಾಲೆಯ ಒಬ್ಬರು ಅಧ್ಯಾಪಕಿಯ 2 ವರ್ಷದ ವೇತನ ಕೊಡುಗೆ - 60,000, ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆ ರೂಪದ ನೀಡಿಕೆ - 80,000, ಕುಂದಾಪುರ ತಾಲೂಕಿನ ಶಂಕರ ನಾರಾಯಣದ ನಿವಾಸಿ ಏಡ್ಸ್ ರೋಗಕ್ಕೆ ತುತ್ತಾದ ತಾಯಿ ಮಗುವಿನ ಚಿಕಿತ್ಸೆಗೆ ಒಂದು ವರ್ಷದ ಖರ್ಚಿನ ಬಾಬ್ತು - 50,000, ಅಜೆಕಾರು ಶಾಲೆಗೆ ಒಂದು ಲ್ಯಾಪ್ ಟಾಪ್ ಕೊಡುಗೆ - 25,000, ಜೆನೈಯ ಆಸ್ಪತ್ರೆಯೊಂದಕ್ಕೆ ಧನಸಹಾಯ - 50,000ರೂಗಳನ್ನು ನೀಡಿರುತ್ತಾರೆ. ಹೀಗೆ ನಿರಂತರವಾಗಿ ಬಡವರ, ವಿದ್ಯಾರ್ಥಿಗಳ, ರೋಗಿಗಳ, ರೈತರ ಹಾಗೂ ವಿಶೇಷವಾಗಿ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಧನಸಹಾಯ ಮಾಡುವ ಸಮಾಜಸೇವಕಿಯಾಗಿ ಬಡವರ ಬಂಧುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿದ್ಯಾಲತಾ ಯು ಶೆಟ್ಟಿ ಹಾಗೂ ಅವರ ಲಯನೆಸ್ ಕ್ಲಬಿನ ಎಲ್ಲಾ ಸದಸ್ಯರು ಹಲವಾರು “ಪ್ರಥಮಗಳ” ಸರದಾರರಾಗಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ರಾಜಾಂಗಣದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಗಂಡಿಗೆ ಯಾವುದೇ ಕಡಿಮೆ ಇಲ್ಲವೆಂಬಂತೆ ಹುಲಿವೇಷ ನೃತ್ಯವನ್ನು ಮಾಡುವ ಮೂಲಕ ಪ್ರಸಿದ್ದಿ ಪಡೆದಿರುತ್ತಾರೆ. ಮಾತ್ರವಲ್ಲದೆ ದಶಾವತಾರ ರೂಪಕವನ್ನು ಸುಮಾರು 100 ಅಡಿ ಎತ್ತರದಿಂದ ಯಾವುದೇ ಲೈಫ್ ಕೇರ್ ಸಾಧನ ಬಳಸದೆ ರೋಪ್’ವೇ ಮೂಲಕ ಗರುಡನಾಗಿ ವಿಷ್ಣುವನ್ನು ಹೊತ್ತು ತರುವ ವಿಭಿನ್ನ ರೀತಿಯ ಆವಿಷ್ಕಾರ ಉಡುಪಿಯ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅಲ್ಲದೆ ಸತತ 7 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯಂದು ವಿಭಿನ್ನ ರೀತಿಯ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬನ್ನಂಜೆ ಲಯನೆಸ್ ಸದಸ್ಯರು ಚಂಡೆವಾದನದಲ್ಲೂ ಎತ್ತಿದ ಕೈಯಾಗಿದ್ದು ದೇಶದೆಲ್ಲೆಡೆ ಕಾರ್ಯಕ್ರಮ ನೀಡಿದ್ದಾರೆ. ಹೀಗೆ ವಿದ್ಯಾಲತಾ ಯು ಶೆಟ್ಟಿ ಅವರು ತಮ್ಮ ಅಪೂರ್ವ ಸಂಘಟನಾ ಶಕ್ತಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾಜಿಕವಾಗಿ ವಿದ್ಯಾಲತಾ ಶೆಟ್ಟಿ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಗೌರವಿಸಿ ಸನ್ಮಾನಿಸಿದೆ. ಪ್ರಸ್ತುತ ಲಯನೆಸ್ ಜಿಲ್ಲಾ 2017-18ರ ಕೊ. ಆರ್ಡಿನೇಟರಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಲತಾ ಯು ಶೆಟ್ಟಿ ಅವರು ಬನ್ನಂಜೆ ಮಹಿಳಾ ಕಲಾಬಳಗದ ಅಧ್ಯಕ್ಷರಾಗಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ 15 ವರ್ಷಗಳಿಂದ ಆಡಳಿತ ಮಂಡಳಿಯ ಸದಸ್ಯರಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ. ಸಾಮಾಜಿಕವಾಗಿ ಮತ್ತಷ್ಟು ಜನಪರ ಸೇವೆ ಮಾಡುವ ಉದ್ದೇಶದಿಂದ “ಡ್ರೀಮ್ ಟೀಂ” (Dream Team) ಎಂಬ ಸಂಸ್ಥೆಯು ಕಾರ್ಯಪ್ರವೃತ್ತವಾಗಲಿದೆ. ಬರಹ/ಮಾಹಿತಿ ಕೃಪೆ: ಸುಜಾತಾ ಶೆಟ್ಟಿ (ಬನ್ನಂಜೆ ಲಯನೆಸ್ ಕ್ಲಬ್) 

Pages