ಸೀಮೆಎಣ್ಣೆ ದೀಪದಲ್ಲಿದ್ದ 80ರ ಇಳಿವಯಸ್ಸಿನ ಅಜ್ಜ ಅಜ್ಜಿಯ ಸೂರಿಗೆ ಸಿಕ್ಕಿದೆ ‘ಬೆಳಕು’ - ಬಂಟ್ಸ್ ನ್ಯೂಸ್ ವರದಿ ಫಲಶೃತಿ - BUNTS NEWS WORLD

ಸೀಮೆಎಣ್ಣೆ ದೀಪದಲ್ಲಿದ್ದ 80ರ ಇಳಿವಯಸ್ಸಿನ ಅಜ್ಜ ಅಜ್ಜಿಯ ಸೂರಿಗೆ ಸಿಕ್ಕಿದೆ ‘ಬೆಳಕು’ - ಬಂಟ್ಸ್ ನ್ಯೂಸ್ ವರದಿ ಫಲಶೃತಿ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: 80 ಇಳಿವಯಸ್ಸಿನಲ್ಲಿಯು ಸೀಮೆ ಎಣ್ಣೆ ದೀಪದಲ್ಲಿ ಬದುಕು ಸಾಗಿಸುತ್ತಿದ್ದ ಬಂಟ ಅಜ್ಜ ಅಜ್ಜಿಯ ಮನೆಗೆಬೆಳಕುಸಿಕ್ಕಿದೆ. ಅಜ್ಜ ಅಜ್ಜಿಯ ಸೀಮೆ ಎಣ್ಣೆ ದೀಪದ ಬದುಕಿನ ಕುರಿತಂತೆ ಈ ಹಿಂದೆ ಬಂಟ್ಸ್ ನ್ಯೂಸ್.ಕಾಂ ಸುದ್ದಿತಾಣದಲ್ಲಿ  ವರದಿ ಪ್ರಕಟಗೊಂಡಿತ್ತು. ಈ ವರದಿಗೆ ಸ್ಪಂದಿಸಿದ ಬಂಟ ಬಾಂಧವರ ನೆರವಿನ ಹಸ್ತದಿಂದ ಅಜ್ಜ ಅಜ್ಜಿಯ ಸೂರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಸೀಮೆಎಣ್ಣೆ ದೀಪದಲ್ಲಿದ್ದ  ‘ಬಂಟ’ ಅಜ್ಜ ಅಜ್ಜಿಯ ‘ಭವನ’ಕ್ಕೆ ಸಿಕ್ಕಿದೆ ‘ಬೆಳಕು’

ಅಜ್ಜ ಅಜ್ಜಿಯ ವಿವರ: ಮನಪಾ ವ್ಯಾಪ್ತಿಯ ಅಳಪೆ ವಾರ್ಡಿನ ಕಣ್ವಗುಡ್ಡದಲ್ಲಿ ನೆಲೆಸಿರುವ ಶಂಕರ ಶೆಟ್ಟಿ (80) ಹಾಗೂ ಭಾಗಿರಥಿ ಶೆಟ್ಟಿ (75) ದಂಪತಿಗಳು ತಮ್ಮ ಚಿಕ್ಕ ಸೂರಿನಲ್ಲಿ ಸೀಮೆ ಎಣ್ಣೆ ದೀಪದಲ್ಲಿ ಬದುಕು ಸಾಗಿಸುತ್ತಿದ್ದರು. ಯಾವುದೇ ಆಧಾರವಿಲ್ಲದ ಇವರ ಜೀವನದ ಹೊಟ್ಟೆಪಾಡಿಗಾಗಿ ಅಜ್ಜ ಕೂಲಿ ಕೆಲಸ ಮಾಡಿದರೆ ಅಜ್ಜಿ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಾರೆ. ತಮ್ಮ ಇಳಿ ವಯಸ್ಸಿನಲ್ಲಿ ನಡೆದಾಡಲು ಸಾಧ್ಯವಾಗದಿದ್ದರೂ ಉರುಗೋಲಿನ ಸಹಾಯದಿಂದ  ನಡೆದು ಕೆಲಸ ಮಾಡುವುದನ್ನು ಕಂಡರೆ ಎಂತಹವರ ಕಲ್ಲು ಹೃದಯವು ಕರಗದೆ ಹೋಗದು.

ಈ ಬಗ್ಗೆ ಮಾಹಿತಿ ಪಡೆದ ಬಂಟ್ಸ್ ನ್ಯೂಸ್ ತಂಡ ಅಜ್ಜನ ಮನೆಗೆ ಭೇಟಿ ನೀಡಿ ಅವರ ಕಷ್ಟ ಹಾಗೂ ಈಗಿರುವ ಪರಿಸ್ಥಿಯ ಬಗ್ಗೆ ಅವಲೋಕಿಸಿ ಸೀಮೆ ಎಣ್ಣೆ ದೀಪದಲ್ಲಿದ್ದ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರ್ಧಾರ ಮಾಡಿತ್ತು. ಈ ನಿಟ್ಟಿನಲ್ಲಿ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಬಂಟ್ವಾಳದ ಬ್ರಿಜೇಶ್ ರೈ (8,000), ಬನ್ನಾಡಿ ಯತಿರಾಜ್ ಶೆಟ್ಟಿ ಗಿಳಿಯಾರ್ ತಂಬ್ಲಾಡಿ ಮನೆ (2000), ಬ್ರಹ್ಮಾವರದ ಪ್ರದೀಪ್ ಶೆಟ್ಟಿ (2000) ಹಾಗೂ ಪ್ರಜ್ವಲ್ ಶೆಟ್ಟಿ ದುಬೈ (3000) ಅವರ ಸಹಾಯ ಹಸ್ತದಿಂದ ಬಂಟ ಅಜ್ಜ ಅಜ್ಜಿಗೆ ಬೆಳಕನ್ನು ನೀಡಲಾಗಿದೆ.
bunts news help line
ಅಜ್ಜ ಅಜ್ಜಿ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅಂದಾಜು ವೆಚ್ಚ 12,000ರೂ ಆಗಬೇಕಿತ್ತು. ಆದರೆ ವಿದ್ಯುತ್ ಸಂಪರ್ಕ ಒದಗಿಸುವ ಮೆಸ್ಕಾಂ ಕಾಗದ ಪತ್ರ ಮತ್ತಿತರ ಕೆಲಸವನ್ನು ಬಂಟ್ಸ್ ನ್ಯೂಸ್ ವಹಿಸಿಕೊಂಡ ಕಾರಣ 8,765/- ರೂ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅಲ್ಲದೆ ಅಜ್ಜಿ ಅಜ್ಜಿ ಮನೆಯ 10 ವರ್ಷದ ತೆರಿಗೆ ಬಾಕಿ ಒಟ್ಟು 1,185 ರೂ ಗಳನ್ನು ಮನಪಾಗೆ ಪಾವತಿ ಮಾಡಲಾಗಿದೆ. ಒಟ್ಟು 9950 ರೂ. ವೆಚ್ಚವಾಗಿದ್ದು ಬಾಕಿ 5,050/-ರೂಗಳು ಬಂಟ್ಸ್ ನ್ಯೂಸ್.ಕಾಂನಲ್ಲಿ ಉಳಿದಿದ್ದು ಮುಂದಿನ ದಿನಗಳಲ್ಲಿ ಅಶಕ್ತ ಬಂಟರ ಸಹಾಯಕ್ಕೆ ಬಳಕೆಯಾಗಲಿದೆ.

ಬಂಟ್ಸ್ ನ್ಯೂಸಿನ ವರದಿಗೆ ಸ್ಪಂದಿಸಿ ಅಜ್ಜ ಅಜ್ಜಿಗೆ ಬೆಳಕು ನೀಡಲು ಮುಂದೆ ಬಂದು ಸಹಾಯಹಸ್ತ ನೀಡಿದ ಬ್ರಿಜೇಶ್ ರೈ, ಯತಿರಾಜ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಅವರಿಗೆ ಕೃತಜ್ಞತೆಗಳು. ವಿದ್ಯುತ್ ಸಂಪರ್ಕ ನೀಡಲು ಸಹಕರಿಸಿದ ಪ್ಲಾನೆಟ್ ಇಲೇಕ್ಟ್ರೀಕಲ್ ಮಾಲಕರಾದ ದಾಮೋದರ ಎಂ., ಮೆಸ್ಕಾಂ ಕುಲಶೇಖರ ಹಾಗೂ ಮರೋಳಿ ವಿಭಾಗಕ್ಕೆ ಧನ್ಯವಾದಗಳು.

ಹೆಸರಿಗೆ ಶ್ರೀಮಂತ ಸಮಾಜವೆಂಬ ಹೆಗ್ಗಳಿಕೆ ಪಾತ್ರವಾಗಿರುವ ಬಂಟ ಸಮಾಜದಲ್ಲಿ ಇಂದಿಗೂ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಅನೇಕ ಕಡುಬಡವರಿದ್ದಾರೆ. ಅಂತಹ ಅಶಕ್ತ ಬಂಟರ ಆಶಾಕಿರಣವಾಗಿ ಬಂಟ್ಸ್ ನ್ಯೂಸ್ ಕೆಲಸ ಮಾಡಲಿದ್ದು ಬಂಟ ಬಾಂಧವರು ಸಹಕಾರ ನೀಡಬೇಕೆಂದು ಕೋರುತ್ತೇವೆ.

80ರ ಇಳಿವಯಸ್ಸಿನ ‘ಬಂಟ’ ಅಜ್ಜ ಅಜ್ಜಿಯ ‘ಭವನ’ಕ್ಕಿಲ್ಲ ಬೆಳಕು: ಸೀಮೆಎಣ್ಣೆ ದೀಪದಲ್ಲೇ ಸಾಗಿದೆ ಬದುಕು

Pages