ಟಿಪ್ಪುವಿನ ಸೇನೆ ಹಿಮ್ಮೆಟ್ಟಿಸಿ ಕಿನ್ನಿಗೋಳಿಯ ಚರ್ಚ್ ರಕ್ಷಿಸುವಲ್ಲಿ ‘ಬಂಟರು’ ಪ್ರಮುಖ ಪಾತ್ರ ವಹಿಸಿದ್ದರು ..! - BUNTS NEWS WORLD

ಟಿಪ್ಪುವಿನ ಸೇನೆ ಹಿಮ್ಮೆಟ್ಟಿಸಿ ಕಿನ್ನಿಗೋಳಿಯ ಚರ್ಚ್ ರಕ್ಷಿಸುವಲ್ಲಿ ‘ಬಂಟರು’ ಪ್ರಮುಖ ಪಾತ್ರ ವಹಿಸಿದ್ದರು ..!

Share This
FB Page LIKE ಮಾಡಿ ಬೆಂಬಲಿಸಿ
ಬಂಟ್ಸ್ ನ್ಯೂಸ್ ವಲ್ಡ್,ಮಂಗಳೂರು: ಒಂದೊಮ್ಮೆ ಹಿಂದೂಗಳೇ ತುಂಬಿಕೊಂಡಿದ್ದ ತುಳುನಾಡಿನಲ್ಲಿ ಕ್ರಿಸ್ತ ಮತ್ತು ಮುಸ್ಲಿಂ ಧರ್ಮಗಳು ಲಗ್ಗೆ ಇಟ್ಟಿದ್ದವು. ಅದಾಗಲೇ ಮಂಗಳೂರಿನಲ್ಲಿ ಚರ್ಚ್ ಮತ್ತು ಕ್ರೈಸ್ತ ಮಿಷನರಿಗಳು ಎಗ್ಗಿಲ್ಲದೆ ಬೀಡು ಬಿಟ್ಟಿದ್ದರು. ಅಂತಹ ಸಮಯದಲ್ಲಿ ಮಂಗಳೂರು ಪ್ರಾಂತ್ಯವು ಟಿಪ್ಪು ಸುಲ್ತಾನ ಅಧೀನಕ್ಕೆ ಒಳಪಟ್ಟಿತ್ತು.
ಹೀಗಿರಲು ಮೈಸೂರು ರಾಜ್ಯವನ್ನು ಪಡೆಯಲು ಬ್ರಿಟಿಷರು ಟಿಪ್ಪುವಿನೊಂದಿಗೆ ಆಂಗ್ಲ ಮರಾಠ ಯುದ್ಧ ಮಾಡುತ್ತಾರೆ. ಯುದ್ಧದಲ್ಲಿ ಟಿಪ್ಪು ಸುಲ್ತಾನ ಸೋತು ಸುಣ್ಣವಾಗಿ ಹೋಗಿದ್ದ. ತನ್ನ ಸೋಲಿಗೆ ಏನು ಕಾರಣ ಅನ್ನುವ ಪರಾಮರ್ಶೆಯನ್ನು ಮಾಡಿದಾಗ ಮಂಗಳೂರಿನಲ್ಲಿರುವ ಕ್ರಿಸ್ತ ಜನ ಆಂಗ್ಲರಿಗೆ ಸಹಾಯ ಮಾಡಿ ತನ್ನ ಬೆನ್ನಿಗೆ ಇರಿದಿದ್ದಾರೆ ಅನ್ನುವ ಸಂಶಯ ಮೂಡುತ್ತದೆ. ಕೂಡಲೇ ತನ್ನ ಸೈನಿಕರಿಗೆ ಆಜ್ಞೆಯನ್ನು ಮಾಡಿ ಮಂಗಳೂರಿನಲ್ಲಿರುವ ಎಲ್ಲಾ ಚರ್ಚ್ ಗಳನ್ನೂ ನಾಶ ಮಾಡಿ. ಪ್ರತಿಯೊಬ್ಬ ಕ್ರಿಸ್ತರನ್ನು ಸೆರೆ ಹಿಡಿದು ಶ್ರೀರಂಗ ಪಟ್ಟಣದ ಕಾರಾಗೃಹಕ್ಕೆ ತಳ್ಳುವಂತೆ ಆಜ್ಞೆಯನ್ನು ಮಾಡುತ್ತಾನೆ.

ಇದರಿಂದಾಗಿ ಅನೇಕ ಚರ್ಚ್ ಗಳು ಧರಾಶಾಯಿಯಾಗುತ್ತವೆ. ಸಿಕ್ಕ ಸಿಕ್ಕವರನ್ನು ಬಂಧನ, ಅನೇಕರ ಮಾರಣ ಹೋಮ ನಡೆಯುತ್ತಾ ಮುಂದೆ ಸಾಗುತ್ತಿರುವ ಟಿಪ್ಪು ಸೈನ್ಯವು ಮಂಗಳೂರಿನಿಂದ ಕಿನ್ನಿಗೋಳಿಯತ್ತ ಸಾಗುತ್ತಿದೆ ಎನ್ನುವ ವರ್ತಮಾನ ಅಲ್ಲಿಯ ಧರ್ಮಗುರುಗಳನ್ನು ಪ್ರಾಣ ಭಯವನ್ನು ಮೂಡಿಸುತ್ತದೆ. ದೊರೆಯೇ ಮುನಿದಾಗ ತನ್ನ ರಕ್ಷಣೆಯನ್ನು ಮಾಡುವವರು ಯಾರು ಎಂದು ಚಿಂತಿತರಾಗುತ್ತಾರೆ.

ಅಂದಿನ ಕಾಲದಲ್ಲಿ ಕಿನ್ನಿಗೋಳಿಯ ಸುತ್ತ ಮೂರು ಬಂಟ ಗುತ್ತುಗಳಿದ್ದವು. ಅವು ಬರಿಯ ಗುತ್ತುಗಳಾಗಿರಲಿಲ್ಲ ಅನೇಕ ಕಟ್ಟಾಳುಗಳನ್ನು ತಮ್ಮ ಸುಪರ್ಧಿಯಲ್ಲಿಟ್ಟುಕೊಂಡು ರಾಜಾಗುತ್ತು ಅನ್ನುವ ಮನ್ನಣೆಗೆ ಪಾತ್ರವಾಗಿದ್ದವು. ತಮ್ಮನ್ನು ರಕ್ಷಿಸುವ ತಂಕವಿದ್ದರೆ ಅವರಿಗೆ ಮಾತ್ರ ಅನ್ನುವ ವಿಷಯ ಅರಿತ ಗುರುಗಳು ತಮ್ಮ ನೆರೆಯ ಐಕಳ ಭಾವಾಗುತ್ತು, ಏಳಿಂಜೆಗುತ್ತು, ಮತ್ತು ತಾಳಿಪಾಡು ಗುತ್ತಿಗೆ ಪತ್ರ ಬರೆದು ರಕ್ಷಣೆಗೆ ಮೊರೆ ಇಡುತ್ತಾರೆ. ಕ್ರಿಸ್ತರ ಕಷ್ಟ ಕಂಡು ರಕ್ಷಣೆಯ ಅಭಯ ನೀಡುತ್ತಾರೆ ಗುತ್ತಿನ ಬಂಟ ಮುಂದಾಳುಗಳು. ಅನೇಕ ಕ್ರಿಸ್ತ ಹುಡುಗರಿಗೆ ಆಶ್ರಯ ತಾಣವಾಗುತ್ತದೆ ಬಂಟ ಗುತ್ತುಗಳು.

ಅನೇಕ ಕ್ರಿಸ್ತ ಹುಡುಗರ ಕಿವಿ ತೂತು ಮಾಡಿ ಕಿವಿ ಕುಂಡಲ ತೊಡಿಸುತ್ತಾರೆ. ಹಿಂದೂ ಹೆಸರುಗಳನ್ನೂ ಇಟ್ಟು ಪ್ರೀತಿಯಿಂದ ಶೆಟ್ಟಿ ಎನ್ನುವ ಉಪನಾಮಧೇಯ ಕೊಟ್ಟು ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಒಂದೊಮ್ಮೆ ಚರ್ಚ್ ನಾಶ ಮಾಡುವ ಉದ್ದೇಶವಿದ್ದರೆ ತಮ್ಮನ್ನು ನಾಶ ಮಾಡಿ ಚರ್ಚ್ ದ್ವಂಸಗೊಳಿಸುವಂತೆ ಕಟು ಸಂದೇಶವನ್ನು ಟಿಪ್ಪುವಿಗೆ ಕಳುಹಿಸಿ ಚರ್ಚ್ ಸುತ್ತ ಪಹರೆ ಕಾಯುತ್ತಾರೆ. ವಿಷಯದ ಗಂಭೀರತೆ ಅರಿತ ಟಿಪ್ಪುವಿನ ಸೈನವು ಹಿಂದೆ ಸರಿಯುತ್ತದೆ. ಹೀಗೆ ಬಂಟರು ಹೆಸರಿಟ್ಟು ಪ್ರೀತಿ ತೋರಿಸಿದ ಕುರುಹಾಗಿ ಈಗಲೂ ಕೆಲವು ಕ್ರಿಸ್ತ ಸಮುದಾಯದ ಜನರ ಮುಂದೆ ಶೇಟ್ ಅನ್ನುವ ಕುಲನಾಮ ಉಳಿದುಕೊಂಡಿದೆ

ಈ ಎಲ್ಲಾ ವಿಚಾರಗಳು ಡಾ.ಇಂದಿರಾ ಹೆಗ್ಗಡೆ  ಅವರಬಂಟರು ಒಂದು ಸಮಾಜೋಸಾಂಸ್ಕೃತಿಕ ಅಧ್ಯಯನ” ಗ್ರಂಥದಿದಲ್ಲೂ ಉಲ್ಲೇಖವಾಗಿರುವುದನ್ನು ಕಾಣಬಹುದಾಗಿದೆ.

Pages