ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಇಂದು ಶ್ರೀಮಂತ, ಸಿರಿವಂತ ಸಮಾಜಗಳಲ್ಲಿ ಬಂಟ ಸಮಾಜವು ಮುಂಚೂಣಿಯಲ್ಲಿದೆ. ಪ್ರತಿಷ್ಥೆಯ ವಿಚಾರ ಬಂದರಂತು ಸಾಕು ಬಂಟರು ಅದೆಷ್ಟು ಖರ್ಚು ಮಾಡಲು ಮುಂದಿರುತ್ತಾರೆ. ಅಂತಹ ಸಿರಿವಂತ, ಪ್ರತಿಷ್ಥೆಯ ಬಂಟ ಸಮಾಜದಲ್ಲಿ 80 ವರ್ಷ ದಾಟಿದ ಇಳಿ ವಯಸ್ಸಿನ ದಂಪತಿಗಳು ಸೀಮೆ ಎಣ್ಣೆ ದೀಪದಲ್ಲಿ ಇನ್ನೂ ಬದುಕು
ಸಾಗಿಸುತ್ತಿದ್ದಾರೆ.
ಮಂಗಳೂರಿನ ಕುಲಶೇಖರ ಸಮೀಪದ ಕಣ್ವಗುಡ್ಡದಲ್ಲಿ ನೆಲೆಸಿರುವ ಶಂಕರ ಶೆಟ್ಟಿ (80) ಹಾಗೂ ಭಾಗಿರಥಿ
ಶೆಟ್ಟಿ (75) ದಂಪತಿಗಳು ಇನ್ನು ಕೂಡ ಸೀಮೆ ಎಣ್ಣೆ ದೀಪದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಇವರ ವಯಸ್ಸು 80 ದಾಟಿದರೂ ಹೊಟ್ಟಿಪಾಡಿಗಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ನಡೆದಾಡಲು ಸಾಧ್ಯವಿಲ್ಲದಿದ್ದರೂ ಉರುಗೋಲಿನ ಸಹಾಯದಿಂದ ನಡೆದು ಕೆಲಸ ಮಾಡುವುದನ್ನು ಕಂಡರೆ ಎಂತಹವರ ಕಲ್ಲು ಹೃದಯವು ಕರಗದೆ ಹೋಗದು.
ಇಂತಹ ಇಳಿವಯಸ್ಸಿನ ವೃದ್ಧ ದಂಪತಿಗಳ ಬಾಳಲ್ಲಿ ಬೆಳಕು ತರುವಲ್ಲಿ ಬಂಟ ಸಂಘಗಳು,
ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಬಂಟ ಭವನಕ್ಕೆ ಕೋಟಿಗಟ್ಟಲೇ ಖರ್ಚು ಮಾಡುವ ಬಂಟ ಸಂಘಗಳಿಗೆ
ಕೇವಲ ಸಾವಿರಾರು ರೂಪಾಯಿ ಖರ್ಚು ಮಾಡಿ ಈ ಇಳಿ ವಯಸ್ಸಿನ ಬಂಟರ ಮನೆಗೆ ವಿದ್ಯುತ್ ಸಂಪರ್ಕ
ಓದಗಿಸುವುದು ದೊಡ್ಡ ವಿಷಯವಲ್ಲ.
ಈಗಾಗಲೇ ಈ ವೃದ್ಧ ದಂಪತಿಗಳ ಕಷ್ಟಕ್ಕೆ ಸ್ಪಂದಿಸಿದ ಹಿಂದಿನ ಕಾರ್ಪೋರೇಟರ್
ಮನೆಗೆ ಉಚಿತ ನೀರಿನ ಸರಬರಾಜು ಮಾಡಿ ಕೊಟ್ಟಿದ್ದಾರೆ. ಸಹೃದಯಿ ಬಂಟರು ಈ ಇಳಿ ವಯಸ್ಸಿನ ಬಂಟರ ಮನೆಗೆ ಬೆಳಕು ನೀಡಲು ಸಹಾಯ ಹಸ್ತ ನೀಡಬಹುದಾಗಿದೆ.
ಅಜ್ಜ ಅಜ್ಜಿಗೆ ಸಹಾಯ ಮಾಡ ಬಯಸುವ ಬಂಟ ಬಾಂಧವರು ಬಂಟ್ಸ್ ನ್ಯೂಸ್.ಕಾಂ ದೂರವಾಣಿ ಸಂಖ್ಯೆ
+919743166567 ಸಂಪರ್ಕಿಸಬಹುದು.
ಸೀಮೆಎಣ್ಣೆ ದೀಪದಲ್ಲಿದ್ದ 80ರ ಇಳಿವಯಸ್ಸಿನ ಅಜ್ಜ ಅಜ್ಜಿಯ ಸೂರಿಗೆ ಸಿಕ್ಕಿದೆ ‘ಬೆಳಕು’ - ಬಂಟ್ಸ್ ನ್ಯೂಸ್ ವರದಿ ಫಲಶೃತಿ
ಸೀಮೆಎಣ್ಣೆ ದೀಪದಲ್ಲಿದ್ದ 80ರ ಇಳಿವಯಸ್ಸಿನ ಅಜ್ಜ ಅಜ್ಜಿಯ ಸೂರಿಗೆ ಸಿಕ್ಕಿದೆ ‘ಬೆಳಕು’ - ಬಂಟ್ಸ್ ನ್ಯೂಸ್ ವರದಿ ಫಲಶೃತಿ