ಬೈಲೂರು ಮುಖ್ಯಮಂತ್ರಿ ದೇವಿಪ್ರಸಾದ ಶೆಟ್ರಿಂದ ರಾಜ್ಯದ ಸಿಎಂಗೆ ಮನವಿ ಪತ್ರ - BUNTS NEWS WORLD

ಬೈಲೂರು ಮುಖ್ಯಮಂತ್ರಿ ದೇವಿಪ್ರಸಾದ ಶೆಟ್ರಿಂದ ರಾಜ್ಯದ ಸಿಎಂಗೆ ಮನವಿ ಪತ್ರ

Share This
BUNTS NEWS, ಕುಂದಾಪುರ: ಬೈಲೂರು ಶಾಲಾ ಮುಖ್ಯಮಂತ್ರಿ ದೇವಿಪ್ರಸಾದ ಶೆಟ್ಟಿ ಅವರು ತಮ್ಮ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ಕೋರಿ ರಾಜ್ಯದ ಸಿಎಂಗೆ ಮನವಿ ಪತ್ರ ಬರೆದಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಅರುಣ್ ಪುರ್ಟಾಡೋ ಬೈಲೂರು ಶಾಲಾ ಮುಖ್ಯಮಂತ್ರಿ ದೇವಿಪ್ರಸಾದ ಶೆಟ್ಟಿ ಅವರಿಗೆ ಪತ್ರ ಬರೆದಿದ್ದು ಮನವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಹೇಳಲಾಗಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಕುಂದಾಪುರ ತಾಲೂಕು ಬೈಲೂರು ಶಾಲೆಯ ಮುಖ್ಯಮಂತ್ರಿ ದೇವಿಪ್ರಸಾದ ಶೆಟ್ಟಿ ಅವರು ತಮ್ಮ ಶಾಲೆಯ ಸಮಸ್ಯೆಯನ್ನು ರಾಜ್ಯದ ಸಿಎಂಗೆ ತಿಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
www.buntsnews.com                


Pages